ಟಾಟಾಗೆ ಹಿನ್ನೆಡೆ: ಕಂಪನಿ ಜವಾಬ್ದಾರಿ ಸೈರಸ್ ಮಿಸ್ತ್ರಿ ಹೆಗಲಿಗೆ!
ಟಾಟಾ ಸನ್ಸ್' ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪುನಃಸ್ಥಾಪನೆಗೊಂಡ ಸೈರಸ್ ಮಿಸ್ತ್ರಿ| ಸೈರಸ್ ಮಿಸ್ತ್ರಿ ಅವರನ್ನು ಪುನ:ಸ್ಥಾಪಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಆದೇಶ| ಕಾನೂನು ಹೋರಾಟದಲ್ಲಿ ಗೆಲುವು ಪಡೆದ ಸೈರಸ್ ಮಿಸ್ತ್ರಿ| 'ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾನೂನುಬಾಹಿರ'| ನಾಲ್ಕು ವಾರಗಳ ನಂತರ ಸೈರಸ್ ಮಿಸ್ತ್ರಿ ಅವರನ್ನು ಪುನ:ಸ್ಥಾಪಿಸುವ ಆದೇಶ ಕಾರ್ಯರೂಪಕ್ಕೆ| ಅಕ್ಟೋಬರ್ 24, 2016 ರಂದು ಟಾಟಾ ಸನ್ಸ್'ನಿಂದ ಉಚ್ಛಾಟಿತರಾಗಿದ್ದ ಸೈರಸ್ ಮಿಸ್ತ್ರಿ| ಟಾಟಾ ಸನ್ಸ್‌ನಲ್ಲಿ ಅತಿದೊಡ್ಡ ಷೇರುದಾರರಾಗಿರುವ ಮಿಸ್ತ್ರಿ ಕುಟುಂಬ|
ನವದೆಹಲಿ(ಡಿ.18): ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್'ಎಟಿ ) ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್' ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪುನಃಸ್ಥಾಪಿಸಲು ಆದೇಶಿಸಿದೆ. ಈ ಮೂಲಕ ಮಿಸ್ತ್ರಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ಮಹತ್ವದ ಗೆಲುವು ಸಿಕ್ಕಂತಾಗಿದೆ.
ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾನೂನುಬಾಹಿರ ಎಂದು ಹೇಳಿರುವ ಎನ್‌ಸಿಎಲ್'ಎಟಿ, ಸೈರಸ್ ಮಿಸ್ತ್ರಿ ಅವರನ್ನೇ ಹುದ್ದೆಯಲ್ಲಿ ಮುಂದುವರೆಸುವಂತೆ ಆದೇಶ ನೀಡಿದೆ.
ಟಾಟಾ ಕಂಪನಿಯಿಂದ ಸೈರಸ್ ಮಿಸ್ತ್ರಿ ವಜಾ ಆಗಿದ್ದು ಹೇಗೆ?
ನಾಲ್ಕು ವಾರಗಳ ನಂತರ ಸೈರಸ್ ಮಿಸ್ತ್ರಿ ಅವರನ್ನು ಪುನ:ಸ್ಥಾಪಿಸುವ ಆದೇಶ ಕಾರ್ಯರೂಪಕ್ಕೆ ಬರಬೇಕು ಎಂದು ನ್ಯಾಯಮಂಡಳಿ ಸ್ಪಷ್ಟವಾಗಿ ಹೇಳಿದೆ. ಅಲ್ಲದೇ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಟಾಟಾ ಸಂಸ್ಥೆಗೆ ಅವಕಾಶ ನೀಡಲಾಗಿದೆ.
2012 ರಲ್ಲಿ ಟಾಟಾ ಗ್ರೂಪ್‌ನ ಆರನೇ ಅಧ್ಯಕ್ಷರಾಗಿ ನೇಮಕಗೊಂಡ ಸೈರಸ್ ಮಿಸ್ತ್ರಿ ಅವರನ್ನು ಅಕ್ಟೋಬರ್ 24, 2016 ರಂದು ಉಚ್ಚಾಟಿಸಲಾಗಿತ್ತು.
ಸೈರಸ್ ಇನ್ವೆಸ್ಟ್ಮೆಂಟ್ಸ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್ಮೆಂಟ್ಸ್ ಕಾರ್ಪ್ ಎಂಬ ಎರಡು ಸ್ವಂತ ಸಂಸ್ಥೆಗಳ ಮೂಲಕ, ಮಿಸ್ತ್ರಿ ಟಾಟಾ ಸನ್ಸ್ ಮತ್ತು ಇತರರ ವಿರುದ್ಧ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ನಲ್ಲಿ ದಾವೆ ಹೂಡಿದ್ದರು. ದಬ್ಬಾಳಿಕೆ ಮತ್ತು ದುರುಪಯೋಗದ ಆರೋಪ ಹೊರಿಸಿದ್ದ ಮಿಸ್ತ್ರಿ ಅವರ ಅರ್ಜಿಯನ್ನು ಈ ಹಿಂದೆ ನ್ಯಾಯಾಲಯ ವಜಾಗೊಳಿಸಿದ್ದು ವಿಶೇಷ.
ಫೆಬ್ರವರಿ 20, 2017 ರಂದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮುಖ್ಯಸ್ಥರಾಗಿದ್ದ ಎನ್. ಚಂದ್ರಶೇಖರನ್, ಟಾಟಾ ಸನ್ಸ್'ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಆದರೆ ಈಗ ಎನ್‌ಸಿಎಲ್‌ಎಟಿ ಈ ನೇಮಕವನ್ನು ಕಾನೂನುಬಾಹಿರವೆಂದು ಘೋಷಿಸಿದೆ.
ವಜಾಗೊಳಿಸುವ ಮುನ್ನ ನನ್ನನ್ನು ಸಮರ್ಥನೆ ಮಾಡಿಕೊಳ್ಳುವ ಒಂದು ಅವಕಾಶವನ್ನೇ ನೀಡಿಲ್ಲವೆಂದು ಮಿಸ್ತ್ರಿ ಬೇಸರ
ಟಾಟಾ ಸನ್ಸ್‌ನಲ್ಲಿ ಮಿಸ್ತ್ರಿ ಕುಟುಂಬವು ಅತಿದೊಡ್ಡ ಷೇರುದಾರರಾಗಿದ್ದು, ಶೇ.18.4 ರಷ್ಟು ಪಾಲನ್ನು ಹೊಂದಿದೆ.