ಟಾಟಾ ಕಂಪನಿಯಿಂದ ಸೈರಸ್ ಮಿಸ್ತ್ರಿ ವಜಾ ಆಗಿದ್ದು ಹೇಗೆ?
ಟಾಟಾ ಸಮೂಹ ಕಂಪನಿಗಳ ಮುಖ್ಯಸ್ಥ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುವ ಸಭೆ ಆಯೋಜನೆಗೊಂಡ ವಿಷಯ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರು ತಮ್ಮ ಪತ್ನಿ ರೋಹಿಖಾ ಅವರಿಗೆ ‘ನನ್ನನ್ನು ಕೆಲಸದಿಂದ ತೆಗೆಯಲಾಗುತ್ತಿದೆ’ ಎಂಬ ಸಂದೇಶ ಕಳುಹಿಸಿದ್ದರು.
ನವದೆಹಲಿ(ಅ.23): ಟಾಟಾ ಸಮೂಹ ಕಂಪನಿಗಳ ಮುಖ್ಯಸ್ಥ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುವ ಸಭೆ ಆಯೋಜನೆಗೊಂಡ ವಿಷಯ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರು ತಮ್ಮ ಪತ್ನಿ ರೋಹಿಖಾ ಅವರಿಗೆ ‘ನನ್ನನ್ನು ಕೆಲಸದಿಂದ ತೆಗೆಯಲಾಗುತ್ತಿದೆ’ ಎಂಬ ಸಂದೇಶ ಕಳುಹಿಸಿದ್ದರು.
ಹೀಗೆಂದು, ಮಿಸ್ತ್ರಿ ಅವರು ಟಾಟಾ ಸಮೂಹವನ್ನು ಮುನ್ನಡೆಸುತ್ತಿದ್ದಾಗ ಅವರ ಮುಖ್ಯ ಗುಂಪಿನಲ್ಲಿ ಒಬ್ಬರಾಗಿದ್ದ ನಿರ್ಮಾಲ್ಯ ಕುಮಾರ್ ಅವರು ಬ್ಲಾಗ್ ಬರೆದಿದ್ದಾರೆ. ಮಿಸ್ತ್ರಿ ಅವರನ್ನು ಟಾಟಾ ಕಂಪನಿಯಿಂದ ಹೊರದಬ್ಬಿದ್ದಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿಗಳು ‘ಸೈರಸ್ ಮಿಸ್ತ್ರಿ ಅವರನ್ನು ಹೇಗೆ ವಜಾಗೊಳಿಸಲಾಯಿತು’ ಎಂಬ ಈ ಲೇಖನದಲ್ಲಿವೆ.
‘ರಾಜೀನಾಮೆ ಕೊಡಿ’:
-2016ರ ಅ.24ರಂದು ಟಾಟಾ ಸನ್ಸ್ ಕಂಪನಿಯ ನಿರ್ದೇಶಕ ಮಂಡಳಿ ಸಭೆ ಇತ್ತು. ಅದಕ್ಕೆ ಕೆಲವು ನಿಮಿಷ ಮುನ್ನ ರತನ್ ಟಾಟಾ ಹಾಗೂ ನಿರ್ದೇಶಕ ಮಂಡಳಿ ಸದಸ್ಯ ನಿತಿನ್ ನೋಹ್ರಿಯಾ ಅವರು ಸೈರಸ್ ಅವರನ್ನು ಭೇಟಿ ಮಾಡಿದರು. ‘ಸೈರಸ್ ಅವರೇ ನಿಮ್ಮ ಹಾಗೂ ರತನ್ ಸಂಬಂ‘ ಚೆನ್ನಾಗಿ ಕೆಲಸ ಮಾಡುತ್ತಿಲ್ಲ’ ಎಂದು ನೋಹ್ರಿಯಾ ಮಾತು ಆರಂಭಿಸಿದರು. ಬಳಿಕ ‘ನಿಮ್ಮನ್ನು ಟಾಟಾ ಸನ್ಸ್ ಮುಖ್ಯಸ್ಥ ಹುದ್ದೆಯಿಂದ ವಜಾಗೊಳಿಸಲು ಟಾಟಾ ಟ್ರಸ್ಟ್ ನಿರ್ಧರಿಸಿದ್ದರು, ಈ ಸಂಬಂಧ ನಿರ್ದೇಶಕ ಮಂಡಳಿಯಲ್ಲಿ ನಿರ್ಣಯ ಮಂಡಿಸಲಾಗುತ್ತದೆ. ಹೀಗಾಗಿ ನೀವು ರಾಜೀನಾಮೆ ಕೊಟ್ಟುಬಿಡಿ ಅಥವಾ ನಿರ್ದೇಶಕ ಮಂಡಳಿಯಲ್ಲಿ ನಿರ್ಣಯ ಎದುರಿಸಿ’ ಎಂದು ಹೇಳಿದರು.
-ಇದೇ ವೇಳೆ, ರತನ್ ಟಾಟಾ ಅವರು ಮಾತ ನಾಡಿ, ಪರಿಸ್ಥಿತಿ ಈ ಹಂತಕ್ಕೆ ಮುಟ್ಟಿದ್ದಕ್ಕೆ ಬೇಸರವಾ ಗುತ್ತಿದೆ ಎಂದರು. ಇದಕ್ಕೆ ಅತ್ಯಂತ ತಾಳ್ಮೆ ಯಿಂದಲೇ ಉತ್ತರ ನೀಡಿದ ಸೈರಸ್, ನಿರ್ದೇಶಕ ಮಂಡಳಿಯಲ್ಲಿ ವಿಷಯ ಪ್ರಸ್ತಾಪಿಸಲು ನೀವು ಮುಕ್ತವಾಗಿದ್ದೀರಿ. ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು. ತಕ್ಷಣವೇ ತಮ್ಮ ಪತ್ನಿ ರೋಹಿಖಾ ಅವರಿಗೆ ‘ನನ್ನನ್ನು ಕೆಲಸದಿಂದ ತೆಗೆಯಲಾಗುತ್ತಿದೆ’ ಎಂದು ಸಂದೇಶ ಕಳಿಸಿದವರೇ ಜಾಕೆಟ್ ಹಾಕಿಕೊಂಡು ನಿರ್ದೇಶಕ ಮಂಡಳಿ ಸಭೆಗೆ ತೆರಳಿದರು.
-ಇಂತಹ ನಿರ್ಣಯ ಕೈಗೊಳ್ಳಲು 15 ದಿನ ಮುನ್ನ ನೋಟಿಸ್ ನೀಡಬೇಕಿತ್ತು ಎಂದು ಸ‘ೆಯಲ್ಲಿ ಮಿಸ್ತ್ರಿ ವಾದಿಸಿದರು. ಅದು ಅವಶ್ಯವಿಲ್ಲ ಎಂದು ಕಾನೂನು ಅಭಿಪ್ರಾಯ ಬಂದಿದೆ ಎಂದು ನಿರ್ದೇಶಕ ಅಮಿತ್ ಚಂದ್ರಾ ತಿಳಿಸಿದರು. ೮ ಸದಸ್ಯರ ನಿರ್ದೇಶಕ ಮಂಡಳಿಯಲ್ಲಿ ಆರು ಮಂದಿ ಮಿಸ್ತ್ರಿ ವಿರುದ್ಧ ಮತ ಹಾಕಿದರು. ಇಬ್ಬರು ಮಾತ್ರ ತಟಸ್ಥವಾಗಿ ಉಳಿದರು. ಕೆಲವೇ ನಿಮಿಷಗಳಲ್ಲಿ ಇದೆಲ್ಲಾ ಮುಗಿಯಿತು. ಮಿಸ್ತ್ರಿ ಅವರಿಗೆ ಯಾವುದೇ ವಿವರಣೆ ಹಾಗೂ ಉತ್ತರ ನೀಡಲು ಅವಕಾಶವನ್ನೂ ಕೊಡಲಾಗಲಿಲ್ಲ.
- ಮಧ್ಯಾಹ್ನ 3ಕ್ಕೆ ತಮ್ಮ ಕೊಠಡಿಗೆ ಬಂದ ಮಿಸ್ತ್ರಿ ತಮಗೆ ಸೇರಿದ ವಸ್ತುಗಳನ್ನು ಪ್ಯಾಕ್ ಮಾಡಲು ಆರಂಭಿಸಿದರು. ಈ ವೇಳೆ ನಾನು ನಾಳೆ ಬರಬೇಕಾ ಎಂದು ಕೇಳಿದಾಗ ಮುಖ್ಯ ಕಾರ್ಯ ಅಧಿಕಾರಿ ಎಫ್.ಎನ್. ಸುಬೇದಾರ್ ಅವರು ಅಗತ್ಯವಿಲ್ಲ ಎಂದು ಉತ್ತರಿಸಿದರು.
- 2017ರ ಮಾ.31ಕ್ಕೆ ಮಿಸ್ತ್ರಿ ಅವರ ಗುತ್ತಿಗೆ ಅವಧಿಯೇ ಮುಗಿಯುತ್ತಿತ್ತು. ದಿಢೀರನೇ ಅವರನ್ನು ವಜಾಗೊಳಿಸುವ ಬದಲು ಐದು ತಿಂಗಳ ಕಾಲ ಕಾಯಬಹುದಿತ್ತು. ತನ್ಮೂಲಕ ಸಾರ್ವಜನಿಕ ಅಪಮಾನಗಳನ್ನು ತಪ್ಪಿಸಬಹುದಿತ್ತು.