ವಜಾಗೊಳಿಸುವ ಮುನ್ನ ನನ್ನನ್ನು ಸಮರ್ಥನೆ ಮಾಡಿಕೊಳ್ಳುವ ಒಂದು ಅವಕಾಶವನ್ನೇ ನೀಡಿಲ್ಲವೆಂದು ಮಿಸ್ತ್ರಿ ಬೇಸರ
ಟಾಟಾ ಮಂಡಳಿಯ ಸದಸ್ಯರಿಗೆ ಮಿಸ್ತ್ರಿ ಈ ಮೇಲ್ ಮಾಡಿದ್ದು, “ನನ್ನನ್ನು ಏಕಾಏಕಿ ಅಧ್ಯಕ್ಚ ಸ್ಥಾನದಿಂದ ವಜಾಗೊಳಿಸಿರುವುದು ಆಘಾತವಾಗಿದೆ. ನನ್ನನ್ನು ಸಮರ್ಥನೆ ಮಾಡಿಕೊಳ್ಳುವ ಒಂದು ಅವಕಾಶವನ್ನು ನನಗೆ ನೀಡಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ (ಅ.26): ಟಾಟಾ ಸನ್ಸ್ ಸಮೂಹ ಸಂಸ್ಥೆಯಿಂದ ಪದಚ್ಯುತಗೊಂಡಿರುವ ಸೈರಸ್ ಮಿಸ್ತ್ರಿ ಈ ಮೇಲ್ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಟಾಟಾ ಮಂಡಳಿಯ ಸದಸ್ಯರಿಗೆ ಮಿಸ್ತ್ರಿ ಈ ಮೇಲ್ ಮಾಡಿದ್ದು, “ನನ್ನನ್ನು ಏಕಾಏಕಿ ಅಧ್ಯಕ್ಚ ಸ್ಥಾನದಿಂದ ವಜಾಗೊಳಿಸಿರುವುದು ಆಘಾತವಾಗಿದೆ. ನನ್ನನ್ನು ಸಮರ್ಥನೆ ಮಾಡಿಕೊಳ್ಳುವ ಒಂದು ಅವಕಾಶವನ್ನು ನನಗೆ ನೀಡಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪದಚ್ಯುತ ಮಿಸ್ತ್ರಿ ವಿರುದ್ಧ ಯಾವುದೇ ಆದೇಶ ಹೊರಡಿಸುವ ಮುನ್ನ ತಮ್ಮ ವಾದವನ್ನು ಆಲಿಸಬೇಕು ಎಂದು ಕೋರ್ಟ್ ಗಳಿಗೆ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ಕೇವಿಯಟ್ ಗಳನ್ನು ಸಲ್ಲಿಸಿದೆ. ರತನ್ ಟಾಟಾ ಕೂಡಾ ಮಿಸ್ತ್ರಿ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸೈರಸ್ ಯಾವುದೇ ಕೇವಿಯಟ್ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.