ಕಚ್ಚಾ ತೈಲದ ಬೆಲೆ ಇಳಿಕೆ ಭಾರತದ ಮಟ್ಟಿಗೆ ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತವು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಗದಿಪಡಿಸುವಾಗ ಪ್ರಮುಖವಾಗುತ್ತದೆ. ಗುರುವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 99.98 ಡಾಲರ್‌ ಆಗಿದೆ.

ನವದೆಹಲಿ (ಜುಲೈ 7): ಜಾಗತಿಕ ಆರ್ಥಿಕ ಹಿಂಜರಿತದ (global recession) ನಡುವೆಯೂ ಭಾರತಕ್ಕೆ (India) ಸಮಾಧಾನದ ಸುದ್ದಿಯಿದೆ. ಕಚ್ಚಾ ತೈಲದ (Crude Oil ) ಬೆಲೆ ಕುಸಿತ ಮುಂದುವರಿದಿದ್ದು, ಈಗ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತಲೂ ಕೆಳಗಿಳಿದಿದೆ. ಕಳೆದ ವಹಿವಾಟಿನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದ ಕಚ್ಚಾ ತೈಲದ ಬ್ಯಾರೆಲ್‌ನ ಬೆಲೆ ಗುರುವಾರವೂ ಇಳಿಕೆ ಕಂಡಿದೆ. ಕಚ್ಚಾತೈಲ ಬೆಲೆ ಇಳಿಕೆಯಿಂದಾಗಿ ದೇಶದಲ್ಲಿ ಪೆಟ್ರೋಲ್-ಡೀಸೆಲ್ (Petrol-Diesel) ಅಗ್ಗವಾಗುವ ನಿರೀಕ್ಷೆ ಹೆಚ್ಚಿದೆ.

ಮೂರು ತಿಂಗಳ ಕನಿಷ್ಠ ಬೆಲೆ: ಬಿಸಿನೆಸ್ ಟುಡೆ ವರದಿಯ ಪ್ರಕಾರ, ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಕುಸಿತದಿಂದಾಗಿ, ಸುಮಾರು ಮೂರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿಯೂ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ನಡುವೆಯೇ ತೈಲದ ಬೇಡಿಕೆಯ ಬಗ್ಗೆ ಆತಂಕ ಹೆಚ್ಚಿರುವುದೇ ಇದಕ್ಕೆ ಕಾರಣ. ಬ್ರೆಂಟ್ ಕಚ್ಚಾ LCOc1 ಫ್ಯೂಚರ್ಸ್ ಬ್ಯಾರೆಲ್‌ಗೆ 71% ಇಳಿಕೆ ಕಂಡಿದ್ದು, 99.98 ಡಾಲರ್‌ಗೆ ಇಳಿದಿದೆ. WTI ಕಚ್ಚಾ CLc1 ಫ್ಯೂಚರ್ಸ್ ಬ್ಯಾರೆಲ್‌ 62% ಇಳಿಕೆ ಕಂಡಿದ್ದು 97.91 ಡಾಲರ್‌ಗೆ ಇಳಿದಿದೆ.

ಉತ್ಪಾದನೆ ಮತ್ತು ಬಳಕೆಯ ಹೆಚ್ಚುವ ಮೊದಲು, ಮಂಗಳವಾರದಂದು WTI ಕಚ್ಚಾ ತೈಲವು ಶೇಕಡಾ 8 ರಷ್ಟು ಮತ್ತು ಬ್ರೆಂಟ್ ಕಚ್ಚಾ ತೈಲವು ಶೇಕಡಾ 9 ರಷ್ಟು ಕುಸಿದಿದೆ. SPI ಅಸೆಟ್ ಮ್ಯಾನೇಜ್‌ಮೆಂಟ್‌ನ ವ್ಯವಸ್ಥಾಪಕ ಪಾಲುದಾರ ಸ್ಟೀಫನ್ ಇನ್ನೆಸ್, ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಹೊಸ ಮಾಹಿತಿ ತೈಲ ಬೆಲೆಗಳನ್ನು ಕಡಿಮೆ ಮಾಡುತ್ತಿವೆ ಎಂದು ಹೇಳಿದ್ದಾರೆ. ಮಾರುಕಟ್ಟೆ ಮೂಲಗಳನ್ನು ನಂಬುವುದಾದರೆ, ಬುಧವಾರದ ಅಂಕಿಅಂಶಗಳು ಕಳೆದ ವಾರದಲ್ಲಿ ಅಮೆರಿಕದಲ್ಲಿ ಕಚ್ಚಾ ಸ್ಟಾಕ್‌ಗಳು ಸುಮಾರು 3.8 ಮಿಲಿಯನ್ ಬ್ಯಾರೆಲ್‌ಗಳಷ್ಟು ಹೆಚ್ಚಾಗಿದೆ ಎನ್ನುವುದನ್ನು ತೋರಿಸಿದೆ. ಆದರೆ ಗ್ಯಾಸೋಲಿನ್ ಸ್ಟಾಕ್‌ಗಳು 1.8 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿಮೆಯಾಗಿದೆ.

Scroll to load tweet…


ಇದನ್ನೂ ಓದಿ : ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದಿನಲ್ಲಿ 50 ಪಟ್ಟು ಹೆಚ್ಚಳ; ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ

ಪೆಟ್ರೋಲ್-ಡೀಸೆಲ್ ಮೇಲೆ ಪರಿಣಾಮ: ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದಲೂ, ಕಚ್ಚಾ ತೈಲದ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಈ ಸಮಯದಲ್ಲಿ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ನ ಬೆಲೆ 2008ಕ್ಕಿಂತಲೂ ಗರಿಷ್ಠ ಮಟ್ಟಕ್ಕೆ ಏರಿತು. ಈ ಬಾರಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲಕ್ಕೆ 139 ಡಾಲರ್‌ವರೆಗೂ ಏರಿತ್ತು. ಆದರೆ, ಈಗ ಇದರ ಬೆಲೆಗಳಲ್ಲಿ ಇಳಿಕೆಯಾಗಿದ್ದು, ನಿರೀಕ್ಷೆಯಂತೆ 100 ಡಾಲರ್‌ಗಿಂತ ಕೆಳಗೆ ಇಳಿದಿದೆ. ಜ್ಞರ ಪ್ರಕಾರ, ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಒಂದು ಡಾಲರ್ ಏರಿಕೆಯಾದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 50 ರಿಂದ 60 ಪೈಸೆಯಷ್ಟು ಹೆಚ್ಚಾಗುತ್ತದೆ. ಅದೇ ರೀತಿ ಕಚ್ಚಾತೈಲದ ಬ್ಯಾರೆಲ್‌ ಬೆಲೆ ಕುಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಯೂ ಹೆಚ್ಚುತ್ತದೆ.

ಇದನ್ನೂ ಓದಿ: ನಿರ್ಬಂಧದ ನಡುವೆಯೂ ರಷ್ಯಾದಿಂದ ಈವರೆಗಿನ ದಾಖಲೆಯ ಪ್ರಮಾಣದ ತೈಲ ಭಾರತಕ್ಕೆ ಸಾಗಣೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ (International Market) ಕಚ್ಚಾ ತೈಲದ ದರವು ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಮನಾರ್ಹವಾಗಿ, ಭಾರತವು ಕಚ್ಚಾ ತೈಲದ ದೊಡ್ಡ ಆಮದುದಾರರಾಗಿದ್ದು, ಅದರ ಕಚ್ಚಾ ತೈಲದ 85 ಪ್ರತಿಶತಕ್ಕಿಂತ ಹೆಚ್ಚಿನದನ್ನು ವಿದೇಶದಿಂದ ಖರೀದಿಸುತ್ತದೆ. ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆಯನ್ನು ಯುಎಸ್ ಡಾಲರ್‌ನಲ್ಲಿ ಪಾವತಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಚ್ಚಾ ತೈಲದ ಬೆಲೆ ಹೆಚ್ಚಳ ಮತ್ತು ಡಾಲರ್ ಬಲಗೊಳ್ಳುವುದರಿಂದ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶೀಯ ಮಟ್ಟದಲ್ಲಿ ಪರಿಣಾಮ ಬೀರುತ್ತವೆ, ಅಂದರೆ, ಇಂಧನವು ದುಬಾರಿಯಾಗಲು ಪ್ರಾರಂಭಿಸುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದರೆ, ಭಾರತದ ಇಂಪೋರ್ಟ್‌ ಬಿಲ್‌ ಅಥವಾ ಆಮದು ಬಿಲ್ ಕೂಡ ಏರಿಕೆಯಾಗುತ್ತದೆ.