ನಿರ್ಬಂಧದ ನಡುವೆಯೂ ರಷ್ಯಾದಿಂದ ಈವರೆಗಿನ ದಾಖಲೆಯ ಪ್ರಮಾಣದ ತೈಲ ಭಾರತಕ್ಕೆ ಸಾಗಣೆ!

ಯುರೋಪ್ ಅನ್ನು ಹಿಂದಿಕ್ಕಿ, ರಷ್ಯಾದ ಅತೀದೊಡ್ಡ ತೈಲ ಖರೀದಿದಾರ ಎನ್ನುವ ಸ್ಥಾನವನ್ನು ಕಳೆದ ತಿಂಗಳು ಏಷ್ಯಾ ಸಂಪಾದನೆ ಮಾಡಿದೆ. ಈ ಅಂತರವು ಮೇ ತಿಂಗಳಿನಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

business More Russian oil than ever before heading for China  India amid west nations restrict imports san

ನವದೆಹಲಿ(ಮೇ.28): ಉಕ್ರೇನ್ ಮೇಲೆ ರಷ್ಯಾ ದೇಶದ (war in Ukraine) ಆಕ್ರಮಣದ ಕಾರಣದಿಂದಾಗಿ ರಷ್ಯಾದ (Russia) ತೈಲದ ಮೇಲೆ ಯುರೋಪ್ ರಾಷ್ಟ್ರಗಳು (Europe Nations) ದೊಡ್ಡ ಪ್ರಮಾಣದಲ್ಲಿ ನಿರ್ಬಂಧ ವಿಧಿಸಿದೆ. ಇದರ ಪರಿಣಾಮದಿಂದಾಗಿ ಯುರೋಪ್ ಅನ್ನು ಹಿಂದಿಕ್ಕಿ, ರಷ್ಯಾದ ಅತೀದೊಡ್ಡ ತೈಲ ಖರೀದಿದಾರ (largest buyer of Russian Crude) ಎನ್ನುವ ಸ್ಥಾನವನ್ನು ಕಳೆದ ತಿಂಗಳು ಏಷ್ಯಾ (Asia) ಸಂಪಾದನೆ ಮಾಡಿದೆ. ಈ ಅಂತರವು ಮೇ ತಿಂಗಳಿನಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿಯಾದ ಕೆಪ್ಲರ್ ಪ್ರಕಾರ, OPEC + ಉತ್ಪಾದಕರಿಂದ 74 ಮಿಲಿಯನ್ ಮತ್ತು 79 ಮಿಲಿಯನ್ ಬ್ಯಾರೆಲ್‌ಗಳು ಕಳೆದ ವಾರದಲ್ಲಿ ಸಾಗಣೆ ಮತ್ತು ಸಮುದ್ರದಲ್ಲಿ ತೇಲುವ ಸಂಗ್ರಹಣೆಯಲ್ಲಿವೆ, ಉಕ್ರೇನ್‌ ದೇಶದ ಮೇಲೆ ಫೆಬ್ರವರಿಯಲ್ಲಿ ಆಕ್ರಮಣ ಮಾಡುವ ಮೊದಲು 27 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಎರಡು ಪಟ್ಟು ಹೆಚ್ಚ ಇದಾಗಿದೆ. ಏಷ್ಯಾದೆಡೆಗೆ ಬರುತ್ತಿರುವ ಬಹುತೇಕ ತೈಲವು ಭಾರತ ಹಾಗೂ ಚೀನಾಕ್ಕೆ ತಲುಪಲಿದೆ ಎನ್ನುವುದು ವಿಶೇಷ.

ಸಮುದ್ರದ ಮೂಲಕ ತೈಲ ಸಾಗಾಣೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗುತ್ತಿರುವುದು, ರಷ್ಯಾದ ಆಕ್ರಮಣದಿಂದಾಗಿ ಜಾಗತಿಕ ಇಂಧನ ವ್ಯಾಪಾರವು ಯಾವ ಮಟ್ಟದಲ್ಲಿ ಪ್ರಕ್ಷುಬ್ಧತೆಗೆ ಒಳಗಾಗಿದೆ ಎನ್ನುವುದು ಎತ್ತಿ ತೋರಿಸಿದೆ. ರಷ್ಯಾದ ತೈಲದ ಪ್ರಮುಖ ಬಳಕೆದಾರರಾಗಿದ್ದ, ಪೈಪ್ ಲೈನ್ ಮೂಲಕ ರಷ್ಯಾದ ತೈಲವನ್ನು ಬಳಕೆ ಮಾಡುತ್ತಿದ್ದ ಯುರೋಪ್, ಇಂಗ್ಲೆಂಡ್ ಮತ್ತು ಅಮೆರಿಕ ಮಾಸ್ಕೋ ಮೇಲೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಮಾಸ್ಕೋ ಹೊಸ ಖರೀದಿದಾರರನ್ನು ಹುಡುಕುವ ಪ್ರಯತ್ನ ಮಾಡಿತ್ತು. ಅದರಂತೆ, ತೈಲಕ್ಕಾಗಿ ಮಧ್ಯಪ್ರಾಚ್ಯ ದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದ ಭಾರತ ಹಾಗೂ ಚೀನಾ, ರಷ್ಯಾದಿಂದ ಭಾರಿ ರಿಯಾಯಿತಿಯಲ್ಲಿ ಇಂಧನವನ್ನು ಖರೀದಿ ಮಾಡಿದ್ದು, ಲಕ್ಷಾಂತರ ಬ್ಯಾರಲ್ ಗಳ ತೈಲವನ್ನು ಸಾಗಾಣೆ ಮಾಡಿಕೊಳ್ಳುತ್ತಿವೆ.

"ಏಷ್ಯಾದಲ್ಲಿನ ಕೆಲವು ಆಸಕ್ತ ಖರೀದಿದಾರರು ರಾಜಕೀಯ ನಿಲುವನ್ನು ತೆಗೆದುಕೊಳ್ಳುವ ಬದಲು ದೇಶದ ಆರ್ಥಿಕತೆಯ ಕಾರಣಕ್ಕಾಗಿ ಹೆಚ್ಚು ಪ್ರೇರಿತರಾಗಿದ್ದಾರೆ" ಎಂದು ಸಿಂಗಾಪುರದ ಕೆಪ್ಲರ್ ನಲ್ಲಿ ಹಿರಿಯ ತೈಲ ವಿಶ್ಲೇಷಕ ಜೇನ್ ಕ್ಸಿ ಹೇಳಿದ್ದಾರೆ. "ಭಾರತವು ರಷ್ಯಾದ ತೈಲವನ್ನು ಖರೀದಿಸುವಲ್ಲಿ ಯುಎಸ್ ಆಸಕ್ತಿಯಲ್ಲಿ ಹೆಚ್ಚಳ ಕಂಡುಬಂದಿದೆ, ಆದ್ದರಿಂದ ಈ ವ್ಯಾಪಾರದ ಹರಿವಿಗೆ ಕೆಲವು ತೊಂದರೆಗಳ ಅಪಾಯಗಳು ಇರಬಹುದು, ಇದು ಪ್ರಸ್ತುತವಾಗಿ ಗಣನೀಯವಾಗಿ ಕಡಿತಗೊಳ್ಳುವ ಸಾಧ್ಯತೆಯಿಲ್ಲ' ಎಂದು ಹೇಳಿದ್ದಾರೆ.

ಏಷ್ಯಾದ ಅಗ್ರ ಎರಡು ಖರೀದಿದಾರರಾದ ಭಾರತ ಮತ್ತು ಚೀನಾಕ್ಕೆ ಸಂಯೋಜಿತ ರಷ್ಯಾದ ತೈಲ ಹರಿವು ಏಪ್ರಿಲ್‌ನಲ್ಲಿ ದಾಖಲೆ ಮಟ್ಟಕ್ಕೆ ಏರಿದೆ. ಮುಖ್ಯವಾಗಿ ಭಾರತದಿಂದ ಹೆಚ್ಚಿದ ಖರೀದಿಗಳಿಂದ ಮಾಸ್ಕೋ ಖುಷಿಯಾಗಿದೆ ಎಂದು ಕ್ಸಿ ಹೇಳಿದ್ದಾರೆ. ಈ ತಿಂಗಳು ಸಾಗಣೆಗಳು ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಕಳೆದ ತಿಂಗಳ ಇದು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ಹೇಳಿದ್ದಾರೆ.

ಈ ವರ್ಷದ ಅಂತ್ಯದ ವೇಳೆಗೆ ರಾಷ್ಟ್ರದಿಂದ ಎಲ್ಲಾ ಆಮದುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲು ಯುರೋಪಿಯನ್ ಯೂನಿಯನ್ ನಿರ್ಧರಿಸಿದಲ್ಲಿ, ಏಷ್ಯಾದೊಂದಿಗೆ ಹೆಚ್ಚಿರುವ ರಷ್ಯಾದ ಸಮುದ್ರದ ವ್ಯಾಪಾರದಿಂದಾಗಿ ಸಮುದ್ರದಲ್ಲಿನ ಕಚ್ಚಾ ತೈಲದ ಪ್ರಮಾಣವು 45 ಮಿಲಿಯನ್‌ನಿಂದ 60 ಮಿಲಿಯನ್ ಬ್ಯಾರೆಲ್‌ಗಳಷ್ಟು ವಿಸ್ತರಿಸುತ್ತದೆ ಎಂದು ಉದ್ಯಮ ಸಲಹೆಗಾರ ಎಫ್‌ಜಿಇ ತಿಳಿಸಿದೆ.

India Russia Oil Deal: ಮಂಗಳೂರಿಗೂ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ

ರಷ್ಯಾದ ಪಶ್ಚಿಮ ಬಂದರುಗಳಿಂದ ಕಚ್ಚಾ ತೈಲವನ್ನು ಸಮುದ್ರ ಮಾರ್ಗದ ಮೂಲಕ ಸಾಗಾಣೆ ಮಾಡುವುದು ಸವಾಲಿನ ಕೆಲಸ. ದೀರ್ಘಕಾಲದ ಸಮುದ್ರ ಯಾನ ಇದಕ್ಕೆ ಬೇಕಾಗುತ್ತದೆ. ಚೀನಾದ ಏಕಮುಖ ಪ್ರಯಾಣಕ್ಕೆ ಅಂದಾಜು 2 ತಿಂಗಳು ಬೇಕಾಗುತ್ತದೆ.

ಭಾರಿ ರಿಯಾಯಿತಿಯಲ್ಲಿ ಭಾರತಕ್ಕೆ 3.5 ಮಿಲಿಯನ್ ಬ್ಯಾರಲ್ Crude Oil ಮಾರಲು ಸಜ್ಜಾದ ರಷ್ಯಾ!

ಕೆಪ್ಲರ್ ನೀಡಿರುವ ಮಾಹಿತಿಯ ಪ್ರಕಾರ, ಮೇ 26ರ ಹೊತ್ತಿಗೆ 57 ಮಿಲಿಯನ್ ಬ್ಯಾರಲ್ ಯುರಲ್ಸ್ ಮತ್ತು 7.3 ಮಿಲಿಯನ್ ಬ್ಯಾರಲ್ ರಷ್ಯನ್ ಫಾರ್ ಈಸ್ಟ್ ಇಎಸ್ಪಿಓ ಕಚ್ಚಾ ತೈಲ ಸಮುದ್ರ ಮಾರ್ಗದಲ್ಲಿದೆ. ಕಳೆದ ಫೆಬ್ರವರಿ ವೇಳೆಗೆ 19 ಮಿಲಿಯನ್ ಯುರಲ್ಸ್ ಹಾಗೂ 5.7 ಮಿಲಿಯನ್ ಬ್ಯಾರಲ್ ರಷ್ಯನ್ ಫಾರ್ ಈಸ್ಟ್ ಇಎಸ್ಪಿಓ ಕಚ್ಚಾ ತೈಲ ಸಮುದ್ರ ಮಾರ್ಗದಲ್ಲಿ ಇರುತ್ತಿದ್ದವು.

Latest Videos
Follow Us:
Download App:
  • android
  • ios