ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದಲ್ಲಿಉತ್ತಮ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್

ಕ್ರೆಡಿಟ್ ಕಾರ್ಡ್ ಖರೀದಿಸುವಾಗ ಹಿಂದೆಮುಂದೆ ಯೋಚಿಸದೆ ಯಾವುದೋ ಒಂದನ್ನು ಆಯ್ಕೆ ಮಾಡೋದು ಸರಿಯಲ್ಲ. ಉತ್ತಮ ಕ್ರೆಡಿಟ್ ಕಾರ್ಡ್ ಖರೀದಿಸಲು ಕ್ರೆಡಿಟ್ ಸ್ಕೋರ್ ಚೆನ್ನಾಗಿರೋದು ಕೂಡ ಅಗತ್ಯ. ಹಾಗಾದ್ರೆ ಉತ್ತಮ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡೋದು ಹೇಗೆ?

Credit Scores Credit Cards Choosing the Right Card for Your Score anu

Business Desk:ಇಂದು ದಿನನಿತ್ಯದ ವೆಚ್ಚಗಳಿಗೆ ಕೂಡ ಕ್ರೆಡಿಟ್ ಕಾರ್ಡ್ ಬಳಸೋರ ಸಂಖ್ಯೆ ಹೆಚ್ಚಿದೆ. ಈ ಮೂಲಕ ಕ್ರೆಡಿಟ್ ಕಾರ್ಡ್ ರಿವಾರ್ಡ್ ಗಳ ಪ್ರಯೋಜನಗಳನ್ನು ಅನೇಕರು ಪಡೆಯುತ್ತಿದ್ದಾರೆ ಕೂಡ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಉತ್ತಮ ಕ್ರೆಡಿಟ್ ಕಾರ್ಡ್ ಪಡೆಯೋದು ಸುಲಭ. ಬಹುತೇಕರು ತಮಗೆ ಯಾವ ಕ್ರೆಡಿಟ್ ಕಾರ್ಡ್ ಉತ್ತಮ ಎಂಬ ಬಗ್ಗೆ ಯಾವಾಗಲೂ ಯೋಚಿಸುತ್ತಿರುತ್ತಾರೆ. ಅಲ್ಲದೆ, ಬಹುತೇಕರಿಗೆ ಕ್ರೆಡಿಟ್ ಕಾರ್ಡ್ ಕೊಳ್ಳುವಾಗ ಯಾವುದನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಗೊಂದಲಗಳು ಕಾಡುತ್ತಿರುತ್ತವೆ. ಇನ್ನು ಯಾವ ಕ್ರೆಡಿಟ್ ಕಾರ್ಡ್ ಕೊಳ್ಳಬೇಕು ಎಂಬುದು ಕ್ರೆಡಿಟ್ ಸ್ಕೋರ್ ಆಧರಿಸಿರುತ್ತದೆ. ಹೌದು, ಉತ್ತಮ ಕ್ರೆಡಿಟ್ ಕಾರ್ಡ್ ಖರೀದಿಸಲು ಕೂಡ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರೋದು ಅಗತ್ಯ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಗೆ ಕ್ರೆಡಿಟ್ ಕಾರ್ಡ್ ಪಡೆಯೋದು ಕಷ್ಟದ ಕೆಲಸ. ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಆನ್ ಲೈನ್ ನಲ್ಲಿ ಉಚಿತವಾಗಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಅನೇಕ ವಿಧದ ಕ್ರೆಡಿಟ್ ಕಾರ್ಡ್ ಗಳು ಲಭ್ಯವಿವೆ. ಹೀಗಿರುವಾಗ ನಮಗೆ ಸೂಕ್ತವಾದ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್.

1.ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ: ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡುವ ಮುನ್ನ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಅಗತ್ಯ. ಸೂಕ್ತವಾದ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡುವಲ್ಲಿ ಕ್ರೆಡಿಟ್ ಸ್ಕೋರ್ ಅತೀಮುಖ್ಯ ಪಾತ್ರ ವಹಿಸುತ್ತದೆ. ಬ್ಯಾಂಕ್ ಗಳು ನಿಮಗೆ ಕ್ರೆಡಿಟ್ ಕಾರ್ಡ್ ನೀಡುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ಹಿಸ್ಟರಿ ಪರಿಶೀಲಿಸುತ್ತವೆ. ಅಂದ ಹಾಗೇ ಉತ್ತಮ ರಿವಾರ್ಡ್ ಹೊಂದಿರುವ ಎಲ್ಲ ಕ್ರೆಡಿಟ್ ಕಾರ್ಡ್ ಗಳು ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರೋದನ್ನು ಬಯಸುತ್ತವೆ. ಟ್ರಾನ್ಸ್ ಯೂನಿಯನ್ ಸಿಬಿಲ್, ಈಕ್ವಿಫ್ಯಾಕ್ಸ್ ಹಾಗೂ ಎಕ್ಸ್ ಪಿರಿಯನ್ ಸೇರಿದಂತೆ ಕೆಲವು ಕ್ರೆಡಿಟ್ ಬ್ಯುರೋಗಳಿಂದ ನೀವು ಉಚಿತ ಕ್ರೆಡಿಟ್ ಸ್ಕೋರ್ ಪಡೆಯಬಹುದು. ಒಂದು ವೇಳೆ ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಡಿ. ಏಕೆಂದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. 

ಗಮನಿಸಿ, ಅಕ್ಟೋಬರ್ 1ರಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಈ 2 ನಿಯಮಗಳಲ್ಲಿ ಬದಲಾವಣೆ!

2.ನಿಮ್ಮ ವೆಚ್ಚದ ವಿನ್ಯಾಸದ ಮೌಲ್ಯಮಾಪನ ಮಾಡಿ: ನಿಮ್ಮ ವೆಚ್ಚದ ವಿನ್ಯಾಸ ಕೂಡ ಸೂಕ್ತವಾದ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಒಂದು ವೇಳೆ ನೀವು ಜಾಸ್ತಿ ಪ್ರಯಾಣ ಮಾಡುತ್ತೀರಿ ಎಂದಾದರೆ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಪಡೆಯೋದು ಉತ್ತಮ. ಒಂದು ವೇಳೆ ನೀವು ನಿರಂತರವಾಗಿ ವಿವಿಧ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡುವ ಅಭ್ಯಾಸ ಹೊಂದಿದ್ದರೆ ಡೈನಿಂಗ್ ಕ್ರೆಡಿಟ್ ಕಾರ್ಡ್ ನಿಮಗೆ ಉಪಯುಕ್ತ. ಹೀಗಾಗಿ ನಿಮ್ಮ ವೆಚ್ಚದ ಅಭ್ಯಾಸಗಳನ್ನು ಆಧರಿಸಿ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿ ಹಾಗೂ ಉತ್ತಮ ರಿವಾರ್ಡ್ಸ್ ಹಾಗೂ ಡಿಸ್ಕೌಂಟ್ಸ್ ಪಡೆಯಿರಿ.

3.ನಿಮ್ಮ ಅಗತ್ಯಗಳನ್ನು ನಿರ್ಧರಿಸಿ: ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಮುನ್ನ ನಿಮಗೆ ಅದರ ಅಗತ್ಯ ಏನಿದೆ ಎಂಬುದನ್ನು ನಿರ್ಧರಿಸಿ. ನಿಮಗೆ ಕ್ರೆಡಿಟ್ ಕಾರ್ಡ್ ಏಕೆ ಅಗತ್ಯ ಎಂಬ ಬಗ್ಗೆ ನೀವು ವಿಶ್ಲೇಷಣೆ ನಡೆಸೋದು ಅಗತ್ಯ.

ಈ ಒಂದು ಕೆಲಸ ಮಾಡದಿದ್ರೆ ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಸಾಧ್ಯವಿಲ್ಲ!

4.ಪರಿಶೀಲನೆ ನಡೆಸಿ: ನಿಮ್ಮದೇ ಆದ ರೀತಿಯಲ್ಲಿ ಪರಿಶೀಲನೆ ನಡೆಸಿ. ಆನ್ ಲೈನ್ ನಲ್ಲಿ ಅನೇಕ ವೆಬ್ ಸೈಟ್ ಗಳು ಲಭ್ಯವಿವೆ. ಅವುಗಳ ಗುಣಲಕ್ಷಣಗಳು ಹಾಗೂ ಪ್ರಯೋಜನಗಳ ಆಧಾರದಲ್ಲಿ ನೀವು ಕ್ರೆಡಿಟ್ ಕಾರ್ಡ್ ಗಳನ್ನು ಹೋಲಿಕೆ ಮಾಡಿ ನೋಡಬಹುದು. 

5.ಕಾರ್ಡ್ ಗೆ ಅರ್ಜಿ ಸಲ್ಲಿಸಿ:  ಎಲ್ಲ ರೀತಿಯಲ್ಲೂ  ಪರಿಶೀಲನೆ ನಡೆಸಿದ ಬಳಿಕ ನಿಮ್ಮ ಅಗತ್ಯಗಳನ್ನು ಪರಿಗಣಿಸಿ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ. ಬ್ಯಾಂಕ್ ವೆಬ್ ಸೈಟ್ ಗೆ ತೆರಳಿ ಅಲ್ಲಿ ಆಫರ್ ಗಳನ್ನು ಪರಿಶೀಲಿಸಿ, ನಿಮ್ಮ ಅಗತ್ಯಗಳಿಗೆ ಹೊಂದಿಕೆಯಾಗುವ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡಬಹುದು. 


 

Latest Videos
Follow Us:
Download App:
  • android
  • ios