Asianet Suvarna News Asianet Suvarna News

ಬಜೆಟ್ ಎಫೆಕ್ಟ್: ಪೆಟ್ರೋಲ್, ಡೀಸೆಲ್ ಬೆಲೆ ಪರ್ಫೆಕ್ಟ್!

ಕೇಂದ್ರ ಮಧ್ಯಂತರ ಬಜೆಟ್ ಬಳಿಕ ನಿರಾಳವಾಗಿರುವ ಜನಸಾಮಾನ್ಯ| ಹೊಸ ತೆರಿಗೆ ಭಾರ ಇಲ್ಲದೇ ಸಂತಸದಲ್ಲಿ ದೇಶದ ನಾಗರಿಕ| ಬಜೆಟ್ ಬಳಿಕ ತೈಲ ಬೆಲೆಯಲ್ಲಿ ಕಂಡುಬಂದ ಸ್ಥಿರತೆ| ದೇಶದ ಮಹಾನಗರಗಳಲ್ಲಿ ಸ್ಥಿರತೆಯತ್ತ ಪೆಟ್ರೋಲ್, ಡೀಸೆಲ್ ಬೆಲೆ| ದೈನಂದಿನ ಸಾಮಾನ್ಯ ಬದಲಾವಣೆಗೆ ಒಗ್ಗಿಕೊಂಡ ತೈಲದರ

Country Witness Transition in Fuel Price Post Budget
Author
Bengaluru, First Published Feb 6, 2019, 12:04 PM IST

ನವದೆಹಲಿ(ಫೆ.06): ಕೇಂದ್ರದ ಮಧ್ಯಂತರ ಬಜೆಟ್ ಮಂಡನೆ ಬಳಿಕ ಜನಸಾಮಾನ್ಯ ಕೊಂಚ ನಿರಾಳವಾಗಿದ್ದಾನೆ. ಯಾವುದೇ ರೀತಿಯ ಹೊಸ ತೆರಿಗೆ ಭಾರ ಇಲ್ಲದೇ, ತೆರಿಗೆ ಮಿತಿ ಹೆಚ್ಚಳ ಕಂಡು ಹಿರಿಹಿರಿ ಹಿಗ್ಗುತ್ತಿದ್ದಾನೆ. 

ಈ ಮಧ್ಯೆ ಬಜೆಟ್ ಬಳಿಕ ತೈಲ ದರದಲ್ಲಿನ ಏರಿಳಿತ ಕೊಂಚ ಹತೋಟಿಗೆ ಬಂದಿದ್ದು, ದೈನಂದಿನ ಬದಲಾವಣೆಗಳ ಹೊರತಾಗಿಯೂ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಅದರಂತೆ, ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ..

ರಾಷ್ಟ್ರ ರಾಜಧಾನಿ ನವದೆಹಲಿ:
ಪೆಟ್ರೋಲ್ ದರ: 70.44 ರೂ.
ಡೀಸೆಲ್ ದರ: 65.51 ರೂ.

ವಾಣಿಜ್ಯ ರಾಜಧಾನಿ ಮುಂಬೈ:
ಪೆಟ್ರೋಲ್ ದರ: 76.08 ರೂ.
ಡೀಸೆಲ್ ದರ: 68.59 ರೂ. 

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:
ಪೆಟ್ರೋಲ್ ದರ: 72.55 ರೂ.
ಡೀಸೆಲ್ ದರ: 67.29 ರೂ.

ತಮಿಳುನಾಡು ರಾಜಧಾನಿ ಚೆನ್ನೈ:
ಪೆಟ್ರೋಲ್ ದರ: 73.11 ರೂ.
ಡೀಸೆಲ್ ದರ: 69.20 ರೂ.

ರಾಜ್ಯ ರಾಜಧಾನಿ ಬೆಂಗಳೂರು:
ಪೆಟ್ರೋಲ್ ದರ: 72.76 ರೂ.
ಡೀಸೆಲ್ ದರ: 67.67 ರೂ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 3850 ರೂ.ಗೆ ತಲುಪಿದೆ.

ಏರುತ್ತಿದೆ ಪೆಟ್ರೋಲ್ ದರ: ಮೋದಿ ಮರೆತರಾ ತಮ್ಮ ಪ್ರಾಮಿಸ್?

‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!

Follow Us:
Download App:
  • android
  • ios