ಎಲ್‌ಪಿಜಿ ಬೆಲೆ ಮತ್ತೆ 50 ರು. ಏರಿಕೆ| ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್‌ ಬೆಲೆ ಇನ್ನು 772 ರು.| ಕಳೆದ 3 ತಿಂಗಳಲ್ಲಿ ಎಲ್‌ಪಿಜಿ ಬೆಲೆ 180 ರು.ನಷ್ಟು ಹೆಚ್ಚಳ| ಮೇ ಬಳಿಕ ಸಬ್ಸಿಡಿ ಬಂದ್‌, ಗ್ರಾಹಕರಿಗೆ ಪೂರ್ಣ ದರ ಹೊರೆ

ನವದೆಹಲಿ(ಫೆ.15): ಪೆಟ್ರೋಲ್‌ ಬೆಲೆ 100ರ ಗಡಿಗೆ ಸಮೀಪಿಸಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌ ನೀಡಿದೆ. ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 14.2 ಕೆಜಿ ತೂಕದ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಭರ್ಜರಿ 50 ರು.ನಷ್ಟುಹೆಚ್ಚಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಎಲ್‌ಪಿಜಿ ಬೆಲೆ 772 ರು.ಗೆ ತಲುಪಿದೆ.

ಕಳೆದ ನವೆಂಬರ್‌ ಬಳಿಕ ಕೇಂದ್ರ ಸರ್ಕಾರ ಎಲ್‌ಪಿಜಿ ಬೆಲೆಯನ್ನು 3 ಬಾರಿ ತಲಾ 50ರು.ನಷ್ಟುಮತ್ತು ಒಂದು ಬಾರಿ 25 ರು.ನಷ್ಟುಹೆಚ್ಚಿಸಿದೆ. ಅಂದರೆ 3 ತಿಂಗಳಲ್ಲಿ ಹೆಚ್ಚುಕಡಿಮೆ 175 ರು.ನಷ್ಟುದರ ಹೆಚ್ಚಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ ಎಲ್‌ಪಿಜಿಗೆ ಸಬ್ಸಿಡಿ ನೀಡುತ್ತಿತ್ತು. ಆದರೆ ಕಳೆದ ಮೇ ತಿಂಗಳ ಬಳಿಕ ಸಬ್ಸಿಡಿ ನೀಡಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇತ್ತೀಚೆಗೆ ಸಂಸತ್ತಿಗೆ ಮಾಹಿತಿ ನೀಡಿದ್ದ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್‌ ಅಡುಗೆ ಅನಿಲ ಸಬ್ಸಿಡಿ ನಿಲ್ಲಿಸಿಲ್ಲ ಎಂದಿದ್ದರು. ಆದರೆ ಕಳೆದ ಮೇ ಬಳಿಕ ಯಾವುದೇ ಗ್ರಾಹಕರಿಗೆ ಸಬ್ಸಿಡಿ ವಿತರಣೆಯಾಗಿಲ್ಲ.