ತಿಂಗಳಲ್ಲಿ 50 ಕಿ.ಮೀ ಓಡಿದ್ರೆ ಸಿಗುತ್ತೆ ಬೋನಸ್! ಭಿನ್ನವಾಗಿದೆ ಈ ಕಂಪನಿ ರೂಲ್ಸ್
ರನ್ನಿಂಗ್ ಆರೋಗ್ಯ ವೃದ್ಧಿಸುತ್ತದೆ. ಕೆಲಸ ಕಂಪನಿ ಆದಾಯ ಹೆಚ್ಚಿಸುತ್ತೆ. ಆದ್ರೆ ಇಲ್ಲೊಂದು ಕಂಪನಿ ಕೆಲಸ ಮಾಡುವವರ ಬದಲು ಓಡೋರಿಗೆ ಬೋನಸ್ ನೀಡ್ತಿದೆ. ಎರಡೂ ತದ್ವಿರುದ್ಧವಾದ್ರೂ ಉದ್ಯೋಗಿಗಳು ಖುಷಿಯಾಗಿದ್ದಾರೆ.
ಕಂಪನಿಗಳು ತಮ್ಮದೇ ಪಾಲಿಸಿ ಹೊಂದಿರುತ್ವೆ. ಸಾಮಾನ್ಯವಾಗಿ ಉದ್ಯೋಗಿಗಳ ಕೆಲಸದ ಆಧಾರದ ಮೇಲೆ ಅವರಿಗೆ ಕಂಪನಿ ಬೋನಸ್ ನಿರ್ಧರಿಸುತ್ತದೆ. ಕೆಲ ಕಂಪನಿಗಳು, ಕೆಲಸಗಾರರಿಗೆ ಟಾರ್ಗೆಟ್ ನೀಡುತ್ವೆ. ಆ ಟಾರ್ಗೆಟ್ ಪೂರ್ಣಗೊಂಡ್ರೆ ಬೋನಸ್ ನೀಡೋದಾಗಿ ಕಂಪನಿ ಅನೌನ್ಸ್ ಮಾಡೋದಿದೆ. ನಿಮ್ಮದೇ ವೃತ್ತಿ ಟಾರ್ಗೆಟ್ ಆದ್ರೆ ಹೇಗೋ ಅದನ್ನು ಪೂರ್ಣಗೊಳಿಸಿ ಬೋನಸ್ ಪಡೆಯಬಹುದು. ಆದ್ರೆ ನಿಮ್ಮದಲ್ಲದ ಕ್ಷೇತ್ರದಲ್ಲಿ ನೀವು ತೊಡಗಿಸಿಕೊಂಡು ಬೋನಸ್ ಗಾಗಿ ಹೋರಾಡಬೇಕು ಅಂದ್ರೆ ಸ್ವಲ್ಪ ಕಷ್ಟ. ಚೀನಾದ ಒಂದು ಕಂಪನಿ ತನ್ನ ಸಿಬ್ಬಂದಿಗೆ ವಿಚಿತ್ರ ಟಾರ್ಗೆಟ್ ನೀಡಿದೆ. ಇದು ಅಥ್ಲೆಟಿಕ್ ಚಟುವಟಿಕೆಯನ್ನು ಆಧರಿಸಿದೆ.
ಆರೋಗ್ಯ (Health) ಕರ ಜೀವನಶೈಲಿ ರೂಪಿಸಿಕೊಳ್ಳಲು ಈ ನಿರ್ಧಾರ : ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಡಾಂಗ್‌ಪೋ ಎಂಬ ಕಾಗದದ ಕಂಪನಿ (Company) ತನ್ನ ಉದ್ಯೋಗಿಗಳಿಗೆ ವಿಚಿತ್ರವಾದ ನಿಯಮ ರೂಪಿಸಿದೆ. ಈ ಕಂಪನಿ 100 ಉದ್ಯೋಗಿ (Employee) ಗಳನ್ನು ಹೊಂದಿದೆ. ಉದ್ಯೋಗಿಗಳಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು, ಅವರು ಮಾಡುವ ವ್ಯಾಯಾಮದ ಆಧಾರದ ಮೇಲೆ ಅವರಿಗೆ ಬೋನಸ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಉದಾಹರಣೆಗೆ ಒಬ್ಬ ಉದ್ಯೋಗಿ ತಿಂಗಳಿಗೆ 50 ಕಿಮೀ ಓಡಿದರೆ ಅವನು ಪೂರ್ಣ ಮಾಸಿಕ ಬೋನಸ್‌ಗೆ ಅರ್ಹನಾಗಿರುತ್ತಾನೆ. ಅವನು 40 ಕಿಮೀ ಓಡಿದ್ರೆ ಶೇಕಡಾ 60 ರಷ್ಟು ಬೋನಸ್ ಮತ್ತು 30 ಕಿಮೀ ಓಡಿದ್ರೆ ಶೇಕಡಾ 30ರ ಷ್ಟು ಬೋನಸ್ ಪಡೆಯುತ್ತಾನೆ. ನೌಕರ ಒಂದು ತಿಂಗಳಲ್ಲಿ 100 ಕಿ.ಮೀ.ಗಿಂತ ಹೆಚ್ಚು ಓಡಿದರೆ ಶೇಕಡಾ 30 ರಷ್ಟು ಹೆಚ್ಚುವರಿ ಬೋನಸ್ ಪಡೆಯುತ್ತಾನೆ.
ಅಪ್ಪನ ಉದ್ಯಮಕ್ಕೆ ಬಲ ತುಂಬಿದ ಮಗ ;92,357 ಕೋಟಿ ರೂ. ಮೌಲ್ಯದ ಕಂಪನಿಗೆ ಹೊಸ ದಿಕ್ಕು ತೋರಿದ ಸುದರ್ಶನ್ ವೇಣು
ಫೋನ್ ನಲ್ಲಿ ಟ್ರ್ಯಾಕ್ ಆಗುತ್ತೆ ಈ ಆಕ್ಟಿವಿಟಿ : ನನ್ನ ಉದ್ಯೋಗಿಗಳು ಆರೋಗ್ಯವಾಗಿದ್ದರೆ ಮಾತ್ರ ನನ್ನ ವ್ಯಾಪಾರ ಉಳಿಯುತ್ತದೆ ಎಂದು ಡೊಂಗ್ಪೋ ಪೇಪರ್ ಮುಖ್ಯಸ್ಥ ಲಿನ್ ಕ್ಸಿಯಾಂಗ್ ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ತಮ್ಮ ಉದ್ಯೋಗಿಗಳಿಗೆ ಕ್ರೀಡೆ ಮತ್ತು ಫಿಟ್‌ನೆಸ್ ಆನಂದಿಸಲು ಪ್ರೋತ್ಸಾಹಿಸುತ್ತಿದ್ದೇನೆ ಎಂದು ಲಿನ್ ಕ್ಸಿಯಾಂಗ್ ಹೇಳಿದ್ದಾರೆ. ಪ್ರತಿಯೊಬ್ಬ ಉದ್ಯೋಗಿಗೆ ಮೊಬೈಲ್ ಅಪ್ಲಿಕೇಷನ್ ಡೌನ್ಲೋಡ್ ಮಾಡುವಂತೆ ಹೇಳಲಾಗಿದೆ. ಆತ ಎಷ್ಟು ಓಡುತ್ತಾನೆ ಎನ್ನುವುದು ಫೋನ್‌ನಲ್ಲಿರುವ ಅಪ್ಲಿಕೇಶನ್ ಮೂಲಕ ಟ್ರ್ಯಾಕ್ ಆಗುತ್ತದೆ. ಈ ಅಪ್ಲಿಕೇಶನ್ ಮೌಂಟೇನ್ ಹೈಕಿಂಗ್ ಮತ್ತು ವೇಗದ ನಡಿಗೆಯಂತಹ ಚಟುವಟಿಕೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಲಿನ್ ಝಿಹಾಂಗ್ ಸ್ವತಃ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುವ ವ್ಯಕ್ತಿಯಾಗಿದ್ದಾರೆ.
ಕಂಪನಿ ಕ್ರಮಕ್ಕೆ ಉದ್ಯೋಗಿಗಳು ಖುಷ್ : ಚೀನಾದ ಮಾಧ್ಯಮಗಳ ಪ್ರಕಾರ, ಡೊಂಗ್ಪೊ ಪೇಪರ್‌ನ ಉದ್ಯೋಗಿಗಳು ಹೊಸ ಬೋನಸ್ ನಿಯಮದಿಂದ ತುಂಬಾ ಸಂತೋಷಗೊಂಡಿದ್ದಾರೆ. ಕಂಪನಿಯು ಈಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಈಗ ಅವರು ಆರೋಗ್ಯವಾಗಿದ್ದು, ಅವರಿಗೆ ಇದರಿಂದ ಹಣ ಕೂಡ ಸಿಗ್ತಿದೆ. ಕಂಪನಿಯ ಈ ಹೊಸ ನೀತಿಯು ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಆದರೆ ಇದು ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗಿನ ಮೊಮ್ಮಗಳು ಸನ್‌ರೈಸರ್ಸ್ ಹೈದರಾಬಾದ್ ಟೀಂ ಸಿಇಒ ಕಾವ್ಯ ಮಾರನ್!
ಕೆಲ ಉದ್ಯೋಗಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದಾಗ ಅವರು ಇಷ್ಟು ಓಡಲು ಸಾಧ್ಯವಾಗೋದಿಲ್ಲ. ಒಳ್ಳೆ ಕೆಲಸ ಮಾಡಿದ್ರೂ ಅವರಿಗೆ ಬೋನಸ್ ಸಿಗೋದಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹೆಚ್ಚಿನ ಬೋನಸ್ ಪಡೆಯಲು ಉದ್ಯೋಗಿಗಳು ಹೆಚ್ಚೆಚ್ಚು ಓಡಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದರಿಂದ ಉದ್ಯೋಗಿಗಳಿಗೆ ತೊಂದರೆಯಾಗಲಿದೆ ಎಂದು ಕೆಲ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.