13 ಸಾವಿರ ನೌಕರರು ನನ್ನವರಲ್ಲ ಎಂದ ಕಾಗ್ನಿಜೆಂಟ್: ಉದ್ಯೋಗ ಕಡಿತದ ಸ್ಟಂಟ್!

13,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿರುವ ಕಾಗ್ನಿಜೆಂಟ್| ವಾರ್ಷಿಕ ಬೆಳವಣಿಗೆಯಲ್ಲಿನ ಕುಸಿತ ಉದ್ಯೋಗ ಕಡಿತಕ್ಕೆ ಪ್ರಮುಖ  ಕಾರಣ| ಕಳಪೆ  ಮುನ್ನೋಟದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ| 2019ರಲ್ಲಿ ಕಂಪನಿಯ ಆದಾಯದ ಬೆಳವಣಿಗೆ ಶೇ.3.9-4.9| ಮಿತವಾಗಿ ವ್ಯಾಪಾರ ಮಾಡುವ ನಿರ್ಧಾರಕ್ಕೆ ಬಂದಿರುವ ಕಾಗ್ನಿಜೆಂಟ್| ಜಾಗತಿಕವಾಗಿ ಒಟ್ಟು 13,000 ಉದ್ಯೋಗ ಕಸಿಯಲು  ಮುಂದಾದ ಕಾಗ್ನಿಜೆಂಟ್| 

Cognizant Plans To cut 13 Thousand Jobs and Exit Some Businesses

ಬೆಂಗಳೂರು(ಅ.31): ಇಂದಿನ ದಿನಮಾನಗಳಲ್ಲಿ ಉದ್ಯೋಗ ಎಂಬುದು ನೀರಿನ ಮೇಲಿನ ಗುಳ್ಳೆ ಇದ್ದಂತೆ. ಇಂದು ಉದ್ಯೋಗಿ ಎಂದು ಕರೆಸಿಕೊಳ್ಳುವಾತ ನಾಳೆ ನಿರುದ್ಯೋಗಿಯಾದರೆ ಅದಕ್ಕೆ ಅಚ್ಚರಿ ಪಡಬೇಕಿಲ್ಲ.  

ಅದರಂತೆ ಅಮೆರಿಕ ಮೂಲದ ಕಾಗ್ನಿಜೆಂಟ್‌ ಕಂಪನಿ ಏಕಾಏಕಿ ತನ್ನ 13,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ. ವಾರ್ಷಿಕ ಬೆಳವಣಿಗೆಯಲ್ಲಿನ ಕುಸಿತ ಉದ್ಯೋಗ ಕಡಿತಕ್ಕೆ ಪ್ರಮುಖ  ಕಾರಣ ಎನ್ನಲಾಗಿದೆ.

ರಾಜ್ಯದ ಎಲ್ಲಾ ರೈಲ್ವೆ ಹುದ್ದೆಯಲ್ಲಿ ಕನ್ನಡಿಗರಿಗೆ ಸಿಕ್ಕಿದ್ದು 22!

ಕಳಪೆ  ಮುನ್ನೋಟದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಕಾಗ್ನಿಜೆಂಟ್ ಕಂಪನಿ ಮುಂದಾಗಿದ್ದು, ಸುಮಾರು 7,000 ನೇರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

2019ರಲ್ಲಿ ಕಂಪನಿಯ ಆದಾಯದ ಬೆಳವಣಿಗೆ ಶೇ.3.9-4.9ರಷ್ಟಿರಲಿದ್ದು, ಇದು ಕಂಪನಿಯ ನಿರೀಕ್ಷಿತ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಇಷ್ಟೇ ಅಲ್ಲದೇ ಕಾಗ್ನಜೆಂಟ್ ಕೆಲವು ಕ್ಷೇತ್ರಗಳಲ್ಲಿನ ತನ್ನ ವ್ಯಾಪಾರ ಒಪ್ಪಂದವನ್ನೂ ರದ್ದುಗೊಳಿಸಲಿದೆ.

ಮೈಕ್ರೋಸಾಫ್ಟ್'ನಿಂದ ಸಾವಿರಾರು ನೌಕರರಿಗೆ ಗೇಟ್ ಪಾಸ್

ಮಿತವಾಗಿ ವ್ಯಾಪಾರ ಮಾಡುವ ನಿರ್ಧಾರಕ್ಕೆ ಬಂದಿರುವ ಕಾಗ್ನಿಜೆಂಟ್, ಈ ವಿಭಾಗದಲ್ಲೂ 6,000 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರಕ್ಕೆ  ಬಂದಿದೆ. ಜಾಗತಿಕವಾಗಿ ಒಟ್ಟು 13,000 ಉದ್ಯೋಗ ಕಸಿಯಲು ಕಾಗ್ನಿಜೆಂಟ್ ಮುಂದಾಗಿದೆ.

ಉದ್ಯೋಗದಲ್ಲಿ ಏಳ್ಗೆ: ಬಿಲ್ ಗೇಟ್ಸ್ ಹೇಳಿದ್ದು ಕೇಳಿ

ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Latest Videos
Follow Us:
Download App:
  • android
  • ios