ಇಡ್ಲಿ ಮಾರಿ ತಿಂಗಳಿಗೆ 7 ಲಕ್ಷ ಸಂಪಾದನೆ, ಬ್ಯುಸಿನೆಸ್ ಐಡಿಯಾ ಹೇಗಿದೆ?

Synopsis
ಆಹಾರದ ಬ್ಯುಸಿನೆಸ್ ಗೆ ಸದಾ ಬೇಡಿಕೆ ಇದೆ. ಕೆಲವರ ಕೈ ರುಚಿಗೆ ಗ್ರಾಹಕರು ಮನಸೋಲ್ತಾರೆ. ನಿರಂತರ ಪ್ರಯತ್ನ ಹಾಗೂ ಗುಣಮಟ್ಟ ಕಾಯ್ದುಕೊಂಡ್ರೆ ಇಡ್ಲಿ ಮಾರಾಟ ಮಾಡಿಯೂ ತಿಂಗಳಿಗೆ 7 ಲಕ್ಷ ಸಂಪಾದನೆ ಮಾಡ್ಬಹುದು.
ಬ್ಯುಸಿನೆಸ್ (Business) ನಲ್ಲಿ ಸಕ್ಸಸ್ ಸಿಗೋದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದಂಗೆ ಅಲ್ಲ. ನಿರಂತರ ಪ್ರಯತ್ನ ಅಗತ್ಯ. ಆರಂಭದಿಂದಲೂ ಗುಣಮಟ್ಟವನ್ನು ಕಾಯ್ದುಕೊಂಡು ಬರ್ಬೇಕು. ಬ್ಯುಸಿನೆಸ್ ಶುರು ಮಾಡಿದ ಮೊದಲ ದಿನವೇ ಲಾಭವಾಗ್ಬೇಕು ಅಂದ್ರೆ ಅದು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಹೆಚ್ಚು ಪ್ರಸಿದ್ಧಿಗೆ ಬರ್ತಿದ್ದಾರೆ. ಅವರ ಗಳಿಕೆ ಬಗ್ಗೆ ದಿನಕ್ಕೊಂದು ಸುದ್ದಿ ಬರ್ತಿದೆ. ಜನರು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡ್ತಿರುವ ಕಾರಣ, ಬೀದಿ ಬದಿಯಲ್ಲಿ ಆರೋಗ್ಯಕರ ಆಹಾರ ನೀಡುವವರ ಗಳಿಕೆ ಹೆಚ್ಚಾಗಿದೆ. ಆದ್ರೆ ಚಿತ್ತಮ್ ಸುಧೀರ್ (Chittam Sudhir) ಈಗ ಫೀಲ್ಡ್ ಗೆ ಬಂದವರಲ್ಲ. 2018ರಲ್ಲೇ ಜನರ ಆರೋಗ್ಯ ಹಾಗೂ ತಮ್ಮ ಬ್ಯುಸಿನೆಸ್ ಬಗ್ಗೆ ಸ್ಮಾರ್ಟ್ ಆಗಿ ಆಲೋಚನೆ ಮಾಡಿದವರು. ಅವರ ಆಲೋಚನೆ ಈಗ ವರ್ಕ್ ಆಗಿದೆ. ಚಿತ್ತಮ್ ಸುಧೀರ್ ಆರೋಗ್ಯಕರ ಇಡ್ಲಿ ನೀಡಿ ತಿಂಗಳಿಗೆ ಲಕ್ಷ ಸಂಪಾದನೆ ಮಾಡ್ತಿದ್ದಾರೆ.
ಉನ್ನತ ಶಿಕ್ಷಣ ಮುಗಿಸಿರುವ ಚಿತ್ತಮ್ ಸುಧೀರ್, ಲಕ್ಷಗಟ್ಟಲೆ ಸಂಭಾವನೆ ಬರುವ ಕೆಲ್ಸ ಮಾಡ್ಬಹುದಿತ್ತು. 9 – 6ರ ಕೆಲಸ ಮಾಡಿ ಹಾಯಾಗಿರ್ಬಹುದಿತ್ತು. ಆದ್ರೆ ಚಿತ್ತಮ್ ಸುಧೀರ್ ಆಲೋಚನೆ ಭಿನ್ನವಾಗಿತ್ತು. ನಗರ ಪ್ರದೇಶದ ಜನರಿಗೆ ಆರೋಗ್ಯಕರ ಮಿಲೆಟ್ ಇಡ್ಲಿ (Millet Idli) ನೀಡುವ ಕೆಲಸಕ್ಕೆ ಕೈ ಹಾಕಿ ಸಕ್ಸಸ್ ಆಗಿದ್ದಾರೆ. ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. 50 ಸಾವಿರದಲ್ಲಿ ಶುರು ಮಾಡಿದ ಅವರ ಅಂಗಡಿ ಮುಂದೆ ಈಗ ಜನರ ಕ್ಯೂ ಇರುತ್ತೆ. ತಿಂಗಳಿಗೆ 7.5 ಲಕ್ಷಕ್ಕಿಂತಲೂ ಹೆಚ್ಚು ಸಂಪಾದನೆ ಮಾಡುವ ಚಿತ್ತಮ್ ಸುಧೀರ್ ಬಗ್ಗೆ ಮಾಹಿತಿ ಇಲ್ಲಿದೆ.
OpenAI CEO ಸ್ಯಾಮ್ ಆಲ್ಟ್‌ಮನ್ ಮಗುವಿಗೆ ಬೆಂಗಳೂರು ಮೂಲದ
ಚಿತ್ತಮ್ ಸುಧೀರ್, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರು. ಕೃಷಿಯಲ್ಲಿ ಎಂಎ ಎಕನಾಮಿಕ್ಸ್ ಮಾಡಿರುವ ಚಿತ್ತಮ್ ಸುಧೀರ್, ಉತ್ತಮ ಕೆಲಸ ಬಿಟ್ಟು 2018ರಲ್ಲಿಯೇ ಮಿಲೆಟ್ ಇಡ್ಲಿ ಮಾರಾಟಕ್ಕೆ ಮುಂದಾದ್ರು. ವಿಶಾಖಪಟ್ಟಣಂನ ಎಂವಿಪಿ ಕಾಲೋನಿಯಲ್ಲಿ ಅವರು ವಾಸನಾ ಪೋಲಿ ಸ್ಟಾಲ್ ನಡೆಸುತ್ತಿದ್ದಾರೆ. ಕೈಗೆಟಕುವ ಬೆಲೆಯಲ್ಲಿ ಆರೋಗ್ಯಕರ ಮಿಲೆಟ್ ಇಡ್ಲಿಯನ್ನು ಅವರು ನೀಡ್ತಾರೆ. ವಿಶೇಷ ಎಲೆಗಳಲ್ಲಿ ಸುತ್ತಿ ಆವಿಯಲ್ಲಿ ಬೇಯಿಸ್ತಾರೆ. ಆ ಎಲೆ ಕೂಡ ಸಾಕಷ್ಟು ವಿಶೇಷತೆ ಹೊಂದಿದೆ. ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಪ್ರತಿದಿನ ಬೆಳಿಗ್ಗೆ 6.30 ರಿಂದ ಅಂಗಡಿ ಮುಂದೆ ಗ್ರಾಹಕರನ್ನು ನೋಡ್ಬಹುದು. ಈ ಇಡ್ಲಿಗಳನ್ನು ಎಂಟು ವಿಭಿನ್ನ ರೀತಿಯ ಮಿಲೆಟ್ ಬಳಸಿ ತಯಾರಿಸಲಾಗುತ್ತದೆ. ಜನರು ಸೋರೆಕಾಯಿ, ಶುಂಠಿ ಮತ್ತು ಕ್ಯಾರೆಟ್ನಂತಹ ತರಕಾರಿಗಳಿಂದ ಮಾಡಿದ ಚಟ್ನಿಯೊಂದಿಗೆ ಇಡ್ಲಿ ಸವಿಯುತ್ತಾರೆ.
ಕೇವಲ 50 ಸಾವಿರದಲ್ಲಿ ಚಿತ್ತಮ್ ಸುಧೀರ್ ಈ ಸ್ಟಾಲ್ ಶುರು ಮಾಡಿದ್ದರು. ಈಗ ಅವರು, ಶ್ರೀಕಾಕುಲಂ, ವಿಜಯನಗರಂ ಮತ್ತು ವಿಶಾಖಪಟ್ಟಣಂನ ಬುಡಕಟ್ಟು ರೈತರಿಂದ ಪ್ರತಿ ತಿಂಗಳು ಸುಮಾರು 700 ಕೆಜಿ ಮಿಲೆಟ್ ಖರೀದಿಸುತ್ತಾರೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಇದನ್ನು ಖರೀದಿ ಮಾಡುವ ಮೂಲಕ ರೈತರಿಗೆ ಆರ್ಥಿಕ ನೆರವು ನೀಡ್ತಿದ್ದಾರೆ.
ಐಟಿ ಕಂಪನಿಗಳ ಸೆಳೆಯಲು ಆಂಧ್ರ ಸರ್ಕಾರದ ದೊಡ್ಡ ಹೆಜ್ಜೆ: ಕೇವಲ 99
ಚಿತ್ತಂ ಸುಧೀರ್ ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ರು. ಚಿತ್ತಮ್ ಸುಧೀರ್ ಕುಟುಂಬದವರೇ ಅವರಿಗೆ ಬೆಂಬಲ ನೀಡಿರಲಿಲ್ಲ. ಆರಂಭದಲ್ಲಿ ಅಂಶಯ ವ್ಯಕ್ತಪಡಿಸಿದ್ದರು. ಆದ್ರೆ ಸುಧೀರ್ ಹಿಂದೆ ಸರಿಯಲಿಲ್ಲ. ತಮ್ಮ ಕೆಲಸವನ್ನು ನಿರಂತರವಾಗಿ ಮಾಡ್ತಾ ಬಂದ್ರು. ಅವರ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿತು. ಅವರ ವಾಸನಾ ಪೋಲಿ ಅಂಗಡಿ ಇಂದು ಪ್ರಸಿದ್ಧವಾಗಿದೆ. ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಗಮನವನ್ನೂ ಚಿತ್ತಮ್ ಸುಧೀರ್ ಸೆಳೆದಿದ್ದಾರೆ.