ಮತ್ತೊಂದು ಬೃಹತ್ ಯೋಜನೆಗೆ ಮುಂದಾದ ಚೀನಾ| ಚೀನಾ ಹೊಸ ಯೋಜನೆಯಿಂದ ಭಾರತಕ್ಕೆ ಲಾಭವೋ, ನಷ್ಟವೋ?| ಹಾಂಕಾಂಗ್-ಮಕಾವು ನಗರಗಳಲ್ಲಿ ಬೃಹತ್ ಆರ್ಥಿಕ ಯೋಜನೆ| ಟ್ರಿಲಿಯನ್ ಡಾಲರ್ ವ್ಯಾಪಾರಕ್ಕೆ ನೀಲನಕ್ಷೆ ಸಿದ್ದಪಡಿಸಿದ ಚೀನಾ|
ಬಿಜಿಂಗ್(ಫೆ.19): ಬೃಹತ್ ಆರ್ಥಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ಚೀನಾ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ. ಒನ್ ರೋಡ್ ಒನ್ ಬೆಲ್ಟ್‌ನಂತ ವಿವಾದಾತ್ಮಕ ಆರ್ಥಿಕ ಯೋಜನೆಯಿಂದಾಗಿ ಚೀನಾ ಈಗಾಗಲೇ ಹಲವು ದೇಶಗಳಲ್ಲಿ ಕಾಲೂರಿಯಾಗಿದೆ.
ಇದೀಗ ಮತ್ತೊಂದು ಬೃಹತ್ ಆರ್ಥಿಕ ಯೋಜನೆಗೆ ಕೈಹಾಕಿರುವ ಚೀನಾ, ಹಾಂಕಾಂಗ್ ಮತ್ತು ಮಕಾವು ನಗರಗಳನ್ನು ಒಂದುಗೂಡಿಸುವ ಯೋಜನೆಗೆ ಚಾಲನೆ ನೀಡಿದೆ. ದಕ್ಷಿಣ ಚೀನಾದ ಎರಡು ಬೃಹತ್ ನಗರಗಳಾದ ಹಾಂಕಾಂಗ್ ಮತ್ತು ಮಕಾವು ನಗರಕ್ಕೆ ಆರ್ಥಿಕ ಸಂಪರ್ಕ ಕಲ್ಪಿಸುವುದು ಚೀನಾದ ಉದ್ದೇಶವಾಗಿದೆ .
ಈ ಎರಡು ನಗರಗಳ ಮಧ್ಯೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ, ಬೃಹತ್ ಅಂತರಾಷ್ಟ್ರೀಯ ವ್ಯಾವಹಾರಿಕ ಕ್ಷೇತ್ರವನ್ನಾಗಿ ಮಾಡುವುದು ಚೀನಾ ಗುರಿಯಾಗಿದೆ. 67 ಮಿಲಿಯನ್ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ 2 ಟ್ರಿಲಿಯನ್ ಡಾಲರ್ ಆರ್ಥಿಕ ವಹಿವಾಟು ನಡೆಸುವ ಯೋಜನೆ ಚೀನಾ ಸರ್ಕಾರದ್ದಾಗಿದೆ.
