ಬಿಜಿಂಗ್(ಜ.23): ಚೀನಾದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನ ಕಾತರದಿಂದ ಕಾಯುತ್ತಿದ್ದಾರೆ.

ಈ ಮಧ್ಯೆ ಚೀನಾದ ಕಂಪನಿಯೊಂದು ತನ್ನ ವರ್ಷದ ಲಾಭದ ಮಾಹಿತಿ ನೀಡಲು ಹಣದ ಸಣ್ಣ ಬೆಟ್ಟ ಕಟ್ಟುವ ಮೂಲಕ ವಿಶ್ವವನ್ನು ಬೆರಗುಗೊಳಿಸಿದೆ. ಇಲ್ಲಿನ ಶಾಂಗಾಯಿಸ್ಟ್ ಎಂಬ ಕಂಪನಿ ತನ್ನ ಉದ್ಯೋಗಿಗಳಿಗೆ ನೀಡಬೇಕಾದ ಬೋನಸ್‌ನ್ನು ಹಣದ ಕಂತೆಗಳ ಮೂಲಕ ಪ್ರದರ್ಶನ ಮಾಡಿದೆ.

ಒಟ್ಟು 300 ಮಿಲಿಯನ್ ಚೀನಿ ಯುವಾನ್(44 ಮಿಲಿಯನ್ ಯುಎಸ್ ಡಾಲರ್) ನಷ್ಟು ಹಣವನ್ನು ಬೆಟ್ಟದ ಆಕಾರದಲ್ಲಿ ಜೋಡಿಸಿಟ್ಟು ಪ್ರದರ್ಶನ ಮಾಡಲಾಗಿದೆ. ಭಾರತೀಯ ರೂಪಾಯಿಯಲ್ಲಿ ಇದು ಸುಮಾರು 34 ಕೋಟಿ ರೂ. ಆಗುತ್ತದೆ.

ತನ್ನ ೫ ಸಾವಿರ ಉದ್ಯೋಗಿಗಳಿಗೆ ಶಾಂಗಾಯಿಸ್ಟ್ ಕಂಪನಿ ಹೊಸ ವರ್ಷಕ್ಕೂ ಮೊದಲು ಬೋನಸ್ ನೀಡಬೇಕಿದ್ದು, ಈ ಹಣವನ್ನು ಜೋಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.