Asianet Suvarna News Asianet Suvarna News

ಮತ್ತೊಂದು ಜಾಗತಿಕ ಆರ್ಥಿಕ ಹಿಂಜರಿತ?: ಭಾರೀ ಸಾಲದಲ್ಲಿ ಚೀನಾದ ರಿಯಲ್‌ ಎಸ್ಟೇಟ್‌ ಕಂಪನಿ!

* ಮತ್ತೊಂದು ಆರ್ಥಿಕ ಕುಸಿತದತ್ತ ಜಾಗತಿಕ ಹಣಕಾಸು ಮಾರುಕಟ್ಟೆ

* ಭಾರೀ ಸಾಲದಲ್ಲಿ ಚೀನಾದ ಎರಡನೇ ಅತಿ ದೊಡ್ಡ ರಿಯಲ್‌ ಎಸ್ಟೇಟ್ ಡೆವಲಪರ್

* ಕಂಪನಿ ಮುಳುಗದಂತೆ ತಡೆಯಬಹುದು ಚೀನಾ ಸರ್ಕಾರ

China Real Estate Giant Evergrande Sends Global Shockwaves
Author
Bangalore, First Published Sep 22, 2021, 5:14 PM IST
  • Facebook
  • Twitter
  • Whatsapp

ಬೀಜಿಂಗ್(ಸೆ.22): ಚೀನಾದ ಎರಡನೇ ಅತಿ ದೊಡ್ಡ ರಿಯಲ್‌ ಎಸ್ಟೇಟ್‌ ಡೆವಲಪರ್ ಎವರ್‌ಗ್ರ್ಯಾಂಡ್‌(Evergrande) ಈ ವಾರ ಭಾರೀ ಆರ್ಥಿಕ ಕುಸಿತ ಎದುರಿಸುತ್ತಿರುವುದಾಗಿ ಹೇಳಿಕೊಂಡಿದೆ.  ಇದು ಜಾಗತಿಕ ಆರ್ಥಿಕ ವಲಯದಲ್ಲೇ ಬಿರುಗಾಳಿ ಎಬ್ಬಿಸಿದೆ. ಇನ್ನು ಈ ಕುಸಿತದಿಂದಾಗಿ ಕಂಪನಿಗೆ ತನ್ನ ಸಾಲದ ಬಾಧ್ಯತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ, ಅಲ್ಲದೇ ಕಂಪನಿಯ ಷೇರು ಮೌಲ್ಯ ಈ ವರ್ಷ ಈವರೆಗೆ ಸುಮಾರು ಶೇ 80ರಷ್ಟು ಕುಸಿದಿದೆ. ಇತ್ತೀಚಿನ ವಾರಗಳಲ್ಲಿ ಚೀನಾದ ಷೇರು ವಿನಿಮಯ ಕೇಂದ್ರ(Chinese stock exchanges)ಮೂಲಕ ನಡೆಯುವ ಕಂಪನಿಯ ಬಾಂಡ್‌ಗಳ ವಹಿವಾಟು ಪದೇ ಪದೇ ಸ್ಥಗಿತಗೊಂಡಿದೆ. ಕಂಪನಿಯನ್ನು ರೇಟಿಂಗ್ ಏಜೆನ್ಸಿಗಳಾದ ಫಿಚ್ ಮತ್ತು ಮೂಡೀಸ್ ಡೌನ್‌ಗ್ರೇಡ್ ಮಾಡಿದೆ.

ಕೋವಿಡ್‌ ಸಂಕಷ್ಟ ನಿರ್ವಹಣೆಗೆ ನೋಟು ಮುದ್ರಣ ಇಲ್ಲ: ಸಚಿವೆ ನಿರ್ಮಲಾ ಸ್ಪಷ್ಟನೆ!

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ 1.5 ಮಿಲಿಯನ್ ಜನರಿಗೆ ಹೊಸ ಮನೆ ನಿರ್ಮಿಸಲು ಎವರ್‌ಗ್ರ್ಯಾಂಡ್‌(Evergrande) ಹಣ ಹೂಡಿಕೆ ಮಾಡಿದೆ, ಆದರೆ ಇವುಗಳ ನಿರ್ಮಾಣ ಕಾರ್ಯ ಇನ್ನೂ ಆರಂಭಿಸಿಲ್ಲ. ಇನ್ನು ಮಂಗಳವಾರ ಎವರ್‌ಗ್ರ್ಯಾಂಡ್‌(Evergrande) ಹಾಂಗ್ ಕಾಂಗ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿದ ಹೇಳಿಕೆಯಲ್ಲಿ ತನ್ನ ಲಿಕ್ವಿಡಿಟಿ ಕೊರತೆ ನಿವಾರಿಸಲು, ಈ ನಿಟ್ಟಿನಲ್ಲಿ ಪರಿಹಾರಗಳನ್ನು ಹುಡುಕಲು ಹಣಕಾಸು ಸಲಹೆಗಾರರನ್ನು ನೇಮಿಸಿಕೊಂಡಿದೆ ಎಂದು ಹೇಳಿದೆ. ಇನ್ನು ಕಂಪನಿಯು ತನ್ನ ಹಣಕಾಸಿನ ಬಾಧ್ಯತೆ ಪೂರೈಸುತ್ತದೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ ಎಂಬುವುದಕ್ಕೆ ಅದರ ಹೇಳಿಕೆಯೇ ಸಾಕ್ಷಿಯಾಗಿದೆ. ಹೀಗಿರುವಾಗಲೇ  ಸೋಮವಾರ, ಶಾಂಘೈ ಸ್ಟಾಕ್ ಎಕ್ಸ್‌ಚೇಂಜ್, ಎವರ್‌ಗ್ರ್ಯಾಂಡ್‌ನ ಮೇ 2023 ಬಾಂಡ್‌ನಲ್ಲಿ ಶೇ 30ಕ್ಕಿಂತ ಹೆಚ್ಚು ಕುಸಿತದ ಬಳಿಕ ಕಂಪನಿ ಜೊತೆಗಿನ ವಹಿವಾಟು ಸ್ಥಗಿತಗೊಳಿಸಿದೆ. 

ರಿಯಲ್ ಎಸ್ಟೇಟ್ ಜೊತೆ ಈ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಿದೆ ಎವರ್‌ಗ್ರ್ಯಾಂಡ್‌ 

1997 ರಲ್ಲಿ ಪ್ರಾರಂಭವಾದ ಎವರ್‌ಗ್ರ್ಯಾಂಡ್‌ ಕಂಪನಿಯು ಎರಡು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿದೆ. ಚೀನಾದಲ್ಲಿ ರಿಯಲ್ ಎಸ್ಟೇಟ್ ವೇಗ ಪಡೆದ ಬಳಿಕ ಕಂಪನಿಯು ಭಾರೀ ಅಭಿವೃದ್ಧಿ ಕಂಡಿತು. Evergrande ತನ್ನ ಅಪಾರ್ಟ್ಮೆಂಟ್ಗಳನ್ನು ಶ್ರೀಮಂತರು ಮತ್ತು ಮಧ್ಯಮ ಆದಾಯದ ಆಸ್ತಿ ಖರೀದಿದಾರರಿಗೆ ಮಾರಾಟ ಮಾಡುತ್ತದೆ. ಇದು 280 ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಅಲ್ಲದೇ ಈವರೆಗೆ ಸುಮಾರು 1,300 ವಾಣಿಜ್ಯ, ವಸತಿ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ಕಂಪನಿಯು ತನ್ನನ್ನು ಆರ್ಥಿಕತೆಯ ಇತರ ವಲಯಗಳಿಗೂ ವಿಸ್ತರಿಸಿದೆ. ಆಹಾರ ಮತ್ತು ಪಾನೀಯ ವ್ಯಾಪಾರ, ಜೀವ ವಿಮೆ, ಟಿವಿ ಮತ್ತು ಪ್ರಯಾಣಈ ಕ್ಷೇತ್ರಗಳಲ್ಲೂ ಉದ್ಯಮ ಆರಂಭಿಸಿದೆ. ಇಷ್ಟೇ ಅಲ್ಲದೇ ಗ್ವಾಂಗ್ವಝೆ ಎಫ್‌ಸಿ ಫುಟ್‌ಬಾಲ್ ಕ್ಲಬ್‌ನ್ನು ಕೂಡಾ ಇದು ಖರೀದಿಸಿದೆ. 

ಕಂಪನಿ ಮುಳುಗದಂತೆ ತಡೆಯಬಹುದು ಚೀನಾ ಸರ್ಕಾರ

ಎವರ್‌ಗ್ರ್ಯಾಂಡ್‌ ಇತ್ತೀಚಿನ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿದೆ. ಇದು ಸುಮಾರು 300 ಬಿಲಿಯನ್‌ ಡಾಲರ್‌ಗೂ ಅಧಿಕ ಸಾಲವನ್ನು ಹೊಂದಿದೆ ಎಂದು ವರದಿಯಾಗಿದೆ. ಕಂಪನಿಯ ದಿವಾಳಿತನವು ಚೀನಾದ(China) ಹಣಕಾಸು ವ್ಯವಸ್ಥೆಯನ್ನು ಹಾನಿಗೊಳಿಸಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಇದರ ಹೊರತಾಗಿ, ಅದರ ಪರಿಣಾಮವನ್ನು ಚೀನಾದಿಂದ ಹೊರಗೆ, ಜಾಗತಿಕ ಮಾರುಕಟ್ಟೆಯಲ್ಲಿಯೂ ಕಾಣಬಹುದು. ವಾಸ್ತವವಾಗಿ, ಎವರ್‌ಗ್ರ್ಯಾಂಡ್‌ ಚೀನಾದ ಆರ್ಥಿಕತೆಯ ಶೇ 29 ರಷ್ಟು ಪಾಲು ಹೊಂದಿದೆ. ಬೀಜಿಂಗ್ ಕಂಪನಿಯನ್ನು ಉಳಿಸಲು ಮುಂದೆ ಬರಬಹುದು ಎಂದು ಕೆಲ ತಜ್ಞರ ಮಾತಾಗಿದೆ. ಎವರ್‌ಗ್ರ್ಯಾಂಡ್‌ ಅದೆಷ್ಟು ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಎಂದರೆ, ಏನಾದರೂ ಸಂಭವಿಸಿದಲ್ಲಿ ಇದು ಬಹಳ ಬಲವಾದ ಸಂಕೇತವಾಗಲಿದೆ ಎಂದು ಹ್ಯಾಂಗ್ ಸೆಂಗ್ ಬ್ಯಾಂಕ್‌ನ ಅರ್ಥಶಾಸ್ತ್ರಜ್ಞ ಡಾನ್ ವಾಂಗ್ ಹೇಳಿದ್ದಾರೆ.

ಸಮುದ್ರ ದಂಡೆಯಲ್ಲಿ ಎಲ್ಲಿ ನೋಡಿದರೂ ಚಿನ್ನ.. ಚಿನ್ನ.. ಚಿನ್ನ..!

ಈ ಆರ್ಥಿಕ ಬಿಕ್ಕಟ್ಟಿಗೆ ಮಧ್ಯೆ ಎವರ್‌ಗ್ರ್ಯಾಂಡ್‌ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ತಮಗೆ ಸಾಲ ನೀಡಿದ ಬ್ಯಾಂಕುಗಳೊಂದಿಗೆ ಚರ್ಚೆ ಆರಂಭಿಸಿದೆ. ಈಗಿರುವ ಸಾಲದ ಅವಧಿಯನ್ನು ವಿಸ್ತರಿಸಲು ಮತ್ತು ಮತ್ತಷ್ಟು ಸಾಲ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ಈ ನಡುವೆ ಜಾಗತಿಕ ಆರ್ಥಿಕ ಕುಸಿತದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಬಿಕ್ಕಟ್ಟನ್ನು ಶೀಘ್ರದಲ್ಲೇ ಪರಿಹರಿಸದಿದ್ದರೆ, ಇದು ಜಾಗತಿಕ ಆರ್ಥಿಕತೆಯನ್ನು ವ್ಯಾಪಿಸುವ ಹೊಸ ವೈರಸ್ ಆಗಿ ಬದಲಾಗಬಹುದು ಎಂಬುವುದರಲ್ಲಿ ಅನುಮಾನವಿಲ್ಲ. 

Follow Us:
Download App:
  • android
  • ios