ವೆನೆಜುಲಾ(ಡಿ. 14)  ಕೊರೋನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿ ನಾಳಿನ ಬದುಕು ಹೇಗೋ ಎಂದು ಯೋಚನೆ ಮಾಡುತ್ತಿದ್ದ ಈ ಗ್ರಾಮದ ಹಣೆಬರಹ ಒಂದೆ ದಿನಕ್ಕೆ ಬದಲಾಗಿದೆ. ಸಮುದ್ರ ಚಿನ್ನದ ಗಣಿಯಾಗಿ ಮಾರ್ಪಟ್ಟಿದೆ.

ದಕ್ಷಿಣ ಅಮೆರಿಕಾದ ವೆನೆಜುಲಾದ ಸಮುದ್ರ ತೀರ ಚಿನ್ನದ ನಿಕ್ಷೇಪವಾಗಿದೆ. 25 ವರ್ಷದ ಯೋಹನ್ ಲಾರೇಸ್ ಮೊದಲು ಸಮುದ್ರ ತೀರದಲ್ಲಿ ಚಿನ್ನ ಕಂಡಿದ್ದಾರೆ.  ವಸ್ತುವೊಂದು ಹೊಳೆಯುತ್ತಿರುವುದನ್ನು ಕಂಡುನ ಹತ್ತಿರ ಹೋಗಿ  ನೋಡಿದಾಗ ಚಿನ್ ಎಂಬುದು ಗೊತ್ತಾಗಿದೆ. 

ಚಿನ್ನದ ದರದಲ್ಲಿ ಭಾರೀ ಕುಸಿತ.. ಡಿ. 14 ರ ದರ

ನಾನು ಚಿನ್ನ ಕೈಗೆ ಎತ್ತಿಕೊಂಡು ಖುಷಿಯಿಂದ ಕುಣಿದೆ ಎಂದು ಯುವಕ ಮಾಧ್ಯಮವೊಂದಕ್ಕೆ ನೀಡಿದ  ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಯುವಕ ತನ್ನ ಮಾವನಿಗೆ ವಿಚಾರ ತಿಳಿಸಿದ್ದಾನೆ ಅಲ್ಲಿಂದ ಸುದ್ದಿ ಹಬ್ಬಿ ಸುಮಾರು ಎರಡು ಸಾವಿರಕ್ಕೂ ಅಧಿಕ ಗ್ರಾಮಸ್ಥರು ಆಗಮಿಸಿ ಟ್ರೆಸರ್ ಹಂಟ್  ಆರಂಭಿಸಿದ್ದಾರೆ.

ಚಿನ್ನದ ರಿಂಗ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿದ್ದು  ಆಹಾರಕ್ಕಾಗಿ ಅವನ್ನು ಗ್ರಾಮಸ್ಥರು  1500  ಡಾಲರ್ ಗೆ ಮಾರಾಟ ಮಾಡಿದ್ದಾರೆ.

ಚಿನ್ನ ಸಿಲಕ್ಕಿರುವ ಗ್ವಾಕಾದ ಸುದ್ದಿ ಎಲ್ಲ ಕಡೆ ಪಸರಿಸಿದೆ. ಮೀನು ಸರಬರಾಜು ಮಾಡುತ್ತಿದ್ದ ಇಲ್ಲಿನ ಮೀನುಗಾರರ ಮೇಲೆ ಕೊರೋನಾ ಕೆಟ್ಟ ಪರಿಣಾಮ ಬೀರಿದ್ದು ಸಿಕ್ಕ ಚಿನ್ನ ಅವರ ಹೊಟ್ಟೆ ತುಂಬಿಸಲು ನೆರವಾಗಿದೆ. ಚಿನ್ನದ ರಿಂಗ್ ಗಳು ಎಲ್ಲಿಂದ ಸಮುದ್ರ ತೀರಕ್ಕೆ ಬಂದು ಬಿದಗ್ದಿದ್ದವು ಎಂಬ ಮಾಹಿತಿ ಇಲ್ಲ.