ಕೇಂದ್ರದ ನಿಯಮಕ್ಕೆ ತಲೆಬಾಗಿದ ಚೀನಾ ಮೊಬೈಲ್‌ ದೈತ್ಯ, ಭಾರತದ ಕಂಪನಿಗಳ ಜೊತೆ ಒಪ್ಪಂದ!

ಒಪ್ಪೋ ಹಾಗೂ ವಿವೋ ಕಂಪನಿಗಳು ಈಗಾಗಲೇ ಭಾರತದಲ್ಲಿ ದೊಡ್ಡ ಉತ್ಪಾದನಾ ಘಟನೆಗಳನ್ನು ಹೊಂದಿದೆ. ಈ ಘಟನೆಗಳು ಬಿಬಿಕೆ ಗ್ರೂಪ್‌ನ ಪ್ರಮುಖ ಬ್ರ್ಯಾಂಡ್‌ಗಳಾದ ಒಪ್ಪೋ, ವಿವೋ, ರಿಯಲ್‌ಮೀ, ಒನ್‌ ಪ್ಲಸ್‌ ಹಾಗೂ ಐಕ್ಯೂ ಬ್ರ್ಯಾಂಡ್‌ನ ಮೊಬೈಲ್‌ಗಳನ್ನು ತಯಾರಿಸುತ್ತಿದ್ದವು.

China largest mobile phone maker BBK Group Joins  Dixon Technologies Karbonn Group for manufacturing of phones san

ನವದೆಹಲಿ (ಫೆ.20): ಕೊನೆಗೂ ಚೀನಾದ ಅತಿದೊಡ್ಡ ಮೊಬೈಲ್‌ ಉತ್ಪಾದಕ ಕಂಪನಿ ಬಿಬಿಕೆ ಗ್ರೂಪ್‌ ಭಾರತೀಯ ಮೂಲದ ಉತ್ಪಾದಕರೊಂದಿಗೆ ಫೋನ್‌ಗಳ ನಿರ್ಮಾಣಕ್ಕೆ ಕೈಜೋಡಿಸಿದೆ. ಪ್ರಮುಖವಾಗಿ ಡಿಕ್ಸಾನ್‌ ಟೆಕ್ನಾಲಜೀಸ್‌ ಹಾಗೂ ಕಾರ್ಬನ್‌ ಗ್ರೂಪ್‌ ಕಂಪನಿಗಳೊಂದಿಗೆ ಒಪ್ಪೋ, ವಿವೋ ಹಾಗೂ ರಿಯಲ್‌ ಮೀ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದನೆ ಮಾಡುವ ಒಪ್ಪಂದ ಮಾಡಿಕೊಂಡಿದೆ.ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಪಡೆಯಲು ಉತ್ಸುಕರಾಗಿರುವ ಈ ಕಂಪನಿಗೆ, ಸ್ಥಳೀಯ ಉತ್ಪಾದಕ ಕಂಪನಿಗಳನ್ನು ತನ್ನ ಪಾಲುದಾರರನ್ನಾಗಿ ಮಾಡಿಕೊಳ್ಳಲೇಬೇಕಿತ್ತು. ಕೇಂದ್ರ ಸರ್ಕಾರ ತನ್ನ ಪಿಎಲ್‌ಐ ಯೋಜನೆಗಳ ಪ್ರಮುಖ ನಿಯಮವೇ ಇದಾಗಿದ್ದು, ಯಾವುದೇ ಕಂಪನಿಗಳು ಇದರ ಪ್ರಯೋಜನ ಪಡೆಯಬೇಕಾದಲ್ಲಿ, ಆ ಕಂಪನಿಗಳು ತನ್ನ ಉತ್ಪಾದನೆಯನ್ನು ಭಾರತೀಯ ಮೂಲದ ಕಂಪನಿಗಳ ಮೂಲಕವೇ ಮಾಡಿಕೊಳ್ಳಬೇಕಿದೆ.

ಒಪ್ಪೋ ಮತ್ತು ವಿವೋ ಈಗಾಗಲೇ ಭಾರತದಲ್ಲಿ ದೊಡ್ಡ ಉತ್ಪಾದನಾ ಘಟಕಗಳನ್ನು ಹೊಂದಿವೆ. ಈ ಘಟಕಗಳು ಬಿಬಿಕೆ ಗ್ರೂಪ್ ಬ್ರಾಂಡ್‌ಗಳ ಸಂಪೂರ್ಣ ಶ್ರೇಣಿಯ ಮೊಬೈಲ್‌ಗಳನ್ನು ಉತ್ಪಾದನೆ ಮಾಡುತ್ತವೆ, ಉದಾಹರಣೆಗೆ ಒಪ್ಪೋ, ವಿವೋ, ರಿಯಲ್‌ಮೀ, ಒನ್‌ಪ್ಲಸ್‌ ಮತ್ತು ಐಕ್ಯೂ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದನೆ ಮಾಡುತ್ತದೆ. ಈ ಹಿಂದೆ ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳ ವಿರುದ್ಧ ಭಾರತ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಪ್ರಸ್ತುತ ಕ್ರಮವು ಬಂದಿದೆ. ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳು ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರದ ಸರ್ಕಾರ ಏಜೆನ್ಸಿಗಳ ಹೆಚ್ಚಿನ ಕಟ್ಟುಪಾಡುಗಳಿಂದಾಗಿ ಸಾಮರ್ಥ್ಯ ವಿಸ್ತರಣೆಗಾಗಿ ತಮ್ಮ ಸ್ವಂತ ಸ್ಥಾವರಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಬಗ್ಗೆ ಬಹಳ ಎಚ್ಚರಿಕೆಯಿಂದಿವೆ. ಕಸ್ಟಮ್ಸ್ ಸುಂಕ ಮತ್ತು ಆದಾಯ ತೆರಿಗೆ ವಂಚನೆಯಿಂದ ಹಿಡಿದು ಮನಿ ಲಾಂಡರಿಂಗ್‌ ಸೇರಿದಂತೆ ಹಲವು ಕೇಸ್‌ಗಳನ್ನು ಈ ಕಂಪನಿಗಳು ಎದುರಿಸುತ್ತಿವೆ.

ಒಪ್ಪೋ ಹಾಗೂ ವಿವೋ ಇಲ್ಲಿಯವರೆಗೂ ಪಿಎಲ್‌ಐ ಲಾಭಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿರಲಿಲ್ಲ. ಈಗಾಗಲೇ ದೇಶದಲ್ಲಿ ಸ್ಯಾಮ್‌ಸಂಗ್‌ ಕಂಪನಿ ಪಿಎಲ್‌ಐ ಲಾಭ ಪಡೆದುಕೊಳ್ಳುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರದ ನಿಯಮದ ಅನುಸಾರ ದೇಶದ ಕಾಂಟ್ರಾಕ್ಟ್‌ ಮ್ಯಾನುಫ್ಯಾಕ್ಟರರ್‌ ಜೊತೆ ಕೈಜೋಡಿಸಲೇಬೇಕಾದ ಅನಿವಾರ್ಯತೆಗೆ ಚೀನಾದ ಕಂಪನಿಗಳು ಸಿಲುಕಿದ್ದವು. ಬಿಬಿಕೆ ಗ್ರೂಪ್ 2022-23 ರಲ್ಲಿ 81,870 ಕೋಟಿ ರೂಪಾಯಿ ಆದಾಯದೊಂದಿಗೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ.

ಉತ್ಪಾದನೆ ಮತ್ತು ಡಿಸ್ಟ್ರಿಬ್ಯೂಷನ್‌ಗಾಗಿ ಸ್ಥಳೀಯ ಭಾರತೀಯ ಕಂಪನಿಯೊಂದಿಗೆ ಕೈಜೋಡಿಸಲು ಮತ್ತು ಪ್ರಮುಖ ನಿರ್ವಹಣಾ ಸ್ಥಾನಗಳಲ್ಲಿ ಭಾರತೀಯ ಕಾರ್ಯನಿರ್ವಾಹಕರನ್ನು ನೇಮಿಸಲು ಚೀನಾದ ಮೊಬೈಲ್ ಫೋನ್ ಸಂಸ್ಥೆಗಳಿಗೆ ಸರ್ಕಾರವು ಸೂಚಿಸಿತ್ತು ಎಂದು ಈ ಹಿಂದೆ ವರದಿಯಾಗಿತ್ತು. ಚೀನಾದ ಕಂಪನಿಗಳು ಭಾರತದಲ್ಲಿ ತಮ್ಮ ಮೌಲ್ಯವರ್ಧನೆಯ ಚಟುವಟಿಕೆಗಳನ್ನು ಹೆಚ್ಚಿಸುವುದು, ಘಟಕಗಳನ್ನು ಸ್ಥಳೀಯವಾಗಿ ಉತ್ಪಾದಿಸುವುದು ಇದರ ಪ್ರಮುಖ ಗುರಿಯಾಗಿತ್ತುಕಳೆದ ತಿಂಗಳು, ಡಿಕ್ಸನ್ ವ್ಯವಸ್ಥಾಪಕ ನಿರ್ದೇಶಕ ಅತುಲ್ ಲಾಲ್ ಕಂಪನಿಯು ಎರಡು ದೊಡ್ಡ ಜಾಗತಿಕ ಫೋನ್ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸಲಿದೆ ಎಂದು ಹೇಳಿದರು. "ಮುಂದಿನ ಎರಡು ತಿಂಗಳುಗಳಲ್ಲಿ ಅತಿದೊಡ್ಡ ಜಾಗತಿಕ ಬ್ರಾಂಡ್‌ಗಳ ಜೊತೆ  ಉತ್ಪಾದನೆಯನ್ನು ಪ್ರಾರಂಭಿಸಬೇಕು. ಇದು ಮುಂದಿನ ನಾಲ್ಕರಿಂದ ಆರು ತಿಂಗಳೊಳಗೆ ಪ್ರಾರಂಭವಾಗಬೇಕು' ಎಂದು ಹೇಳಿದ್ದಾರೆ.

ಒಂದು ಕೋಟಿ ಸಂಬಳ ಪಡೆಯುವ ಈಕೆ ಕೆಲಸ ಏನು ಗೊತ್ತಾ?

ಮಾರುಕಟ್ಟೆ ಟ್ರ್ಯಾಕರ್ ಕೌಂಟರ್‌ಪಾಯಿಂಟ್ ರಿಸರ್ಚ್ ಡೇಟಾವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2023 ರ ಕ್ಯಾಲೆಂಡರ್ ವರ್ಷದಲ್ಲಿ ವಿವೋ, ಒಪ್ಪೋ ಮತ್ತು ಒನ್‌ಪ್ಲಸ್ ತಮ್ಮ ಮಾರುಕಟ್ಟೆ ಪಾಲನ್ನು ಎರಡು ಶೇಕಡಾ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ ಎಂದು ಹೇಳಿದೆ, ಆದರೆ Xiaomi ಮತ್ತು Realme 2023ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ತ್ರೈಮಾಸಿಕಕ್ಕೆ  ವರ್ಷದಿಂದ ವರ್ಷಕ್ಕೆ ಸುಧಾರಣೆಗಳನ್ನು ಕಂಡಿವೆ.

830 ಕೋಟಿಗೆ ರೋಲ್ಟಾ ಇಂಡಿಯಾ ಕಂಪನಿ ಖರೀದಿಗೆ ನಿರ್ಧಾರ ಮಾಡಿದ ಬಾಬಾ ರಾಮ್‌ದೇವ್‌!

ಬಿಬಿಕೆ ಗ್ರೂಪ್‌ ಭಾರತದಲ್ಲಿ ಎರಡು ಪ್ರಧಾನ ಸೇಲ್ಸ್‌ ವಿಭಾಗವನ್ನು ಹೊಂದಿದೆ. ಒಪ್ಪೋ ಮೊಬೈಲ್ಸ್‌ ಇಂಡಿಯಾ ಒಪ್ಪೋ, ಒನ್‌ಪ್ಲಸ್‌ ಹಾಗೂ ರಿಯಲ್‌ ಮೀ ಬ್ರ್ಯಾಂಡ್‌ಗಳ ಮಾರಾಟವನ್ನು ನೋಡಿಕೊಂಡರೆ, ವಿವಿಯೋ ಮೊಬೈಲ್‌ ಇಂಡಿಯಾ ವಿವೋ ಹಾಗೂ ಐಕ್ಯೂ ಮೊಬೈಲ್‌ಗಳ ಮಾರಾಟವನ್ನು ನೋಡಿಕೊಳ್ಳುತ್ತದೆ. ಇತ್ತೀಚಿನ ಒಪ್ಪೋ ಮೊಬೈಲ್‌ ಇಂಡಿಯಾದ ಆರ್ಥಿಕ ವರದಿಯಲ್ಲಿ ಕಂಪನಿ ತನ್ನ ಮಾರಾಟದಲ್ಲಿ ಶೇ. 9ರಷ್ಟು ಇಳಿಕೆ ಕಂಡಿದೆ ಎಂದು ಹೇಳಿದೆ. 2022-23ರಲ್ಲಿ ಕಂಪನಿ 51,994 ಕೋಟಿ ರೂಪಾಯಿ ಅದಾಯ ಪಡೆದಿದ್ದಾಗಿ ತಿಳಿಸಿದೆ. ಇನ್ನು ವಿವೋ ಮೊಬೈಲ್‌ ತನ್ನ ಮಾರಾಟದಲ್ಲಿ ಶೇ. 11ರಷ್ಟು ಏರಿಕೆಯಾಗಿದ್ದು, 29,875 ಕೋಟಿ ತಲುಪಿದೆ.

Latest Videos
Follow Us:
Download App:
  • android
  • ios