ಒಂದು ಕೋಟಿ ಸಂಬಳ ಪಡೆಯುವ ಈಕೆ ಕೆಲಸ ಏನು ಗೊತ್ತಾ?
ಕೋಟಿಗಟ್ಟಲೆ ಸಂಬಳ ಪಡೆಯಬೇಕು ಎಂಬ ಕನಸಿದೆ. ಆದ್ರೆ ಯಾವ ಕೆಲಸಕ್ಕೆ ಇಷ್ಟೊಂದು ಪೇ ಮಾಡ್ತಾರೆ ಅನ್ನೋದೇ ಅನೇಕರಿಗೆ ಗೊತ್ತಿಲ್ಲ. ನಿಮಗೆ ಸಂಬಳವೇ ಮುಖ್ಯ. ಉಳಿದದ್ದೆಲ್ಲ ಆಮೇಲೆ ಎನ್ನುವವರಾದ್ರೆ ಈಕೆ ಕೆಲಸದ ಬಗ್ಗೆ ತಿಳಿದ್ಕೊಂಡು ಟ್ರೈ ಮಾಡಿ.
ಉದ್ಯೋಗಿಗಳ ಸಂಬಳ ಉದ್ಯೋಗಕ್ಕೆ ತಕ್ಕಂತಿರುತ್ತದೆ. ಕೆಲ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆ ಸಂಬಳ ಏರಿಕೆ, ಬಡ್ತಿ ಜೊತೆ ನಾನಾ ಸೌಲಭ್ಯ ಉದ್ಯೋಗಿಗೆ ಸಿಗುತ್ತದೆ. ಮತ್ತೆ ಕೆಲ ಉದ್ಯೋಗದಲ್ಲಿ, ಉದ್ಯೋಗಿ ನಿವೃತ್ತಿ ಹೊಂದುವವರೆಗೂ ಒಂದೇ ಸಂಬಳದಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಳ್ಳೆ ಉದ್ಯೋಗದ ಹುಡುಕಾಟ ಈಗ ಪ್ರತಿಯೊಬ್ಬರ ಗುರಿ. ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸ ಇದ್ರೂ ಜನರು ಕೋಟಿಯಲ್ಲಿ ಬರುವ ಹಾಗೂ ಕೆಲ ವೋಚರ್, ಪ್ರವಾಸ, ಉಚಿತ ಸೌಲಭ್ಯ ಸಿಗುವ ಕೆಲಸಕ್ಕೆ ನಿರಂತರ ಹುಡುಕಾಟ ನಡೆಸುತ್ತಿರುತ್ತಾರೆ. ಕೋಟ್ಯಾಂತರ ರೂಪಾಯಿ ಸಂಬಳ ಬರುವ ಕೆಲಸ ಬೇಕು ಅಂದ್ರೆ ಕೆಲವೊಂದು ವಿಷ್ಯದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕು. ಮನೆಯಿಂದ ದೂರ ಇರ್ಬೇಕು, ರಿಸ್ಕ್ ತೆಗೆದುಕೊಳ್ಳಬೇಕು. ಕೋಟ್ಯಾಂತರ ರೂಪಾಯಿ ಸಂಬಳ ಬರುತ್ತೆ ಅಂದ್ರೆ ಜನರು ಅದಕ್ಕೂ ಸಿದ್ಧರಿದ್ದಾರೆ. ಆದ್ರೆ ಅಂಥ ಕೆಲಸ ಎಲ್ಲಿ ಸಿಗುತ್ತೆ ಎಂಬುದೇ ಕೆಲವರಿಗೆ ತಿಳಿದಿಲ್ಲ. ಟಿಕ್ ಟಾಕ್ ನಲ್ಲಿ ಹುಡುಗಿಯೊಬ್ಬಳು ತನ್ನ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾಳೆ. ಆಕೆ ಮಾಡುವ ಕೆಲಸ ಹಾಗೂ ಆಕೆ ಸಂಬಳ ಕೇಳಿದ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.
ಆಕೆ ಹೆಸರು ಶಮ್ಸ್ ಅಲ್ಬಯಾತಿ (Shams Albayati). ವಯಸ್ಸು 27 ವರ್ಷ. ಆಕೆ ಮಾಡ್ತಿರುವ ಕೆಲಸಕ್ಕೆ ಒಂದು ಕೋಟಿ (Crore) ರೂಪಾಯಿ ಸಂಬಳ (Salary) ಸಿಗ್ತಿದೆ. ಬರೀ ಸಂಬಳ ಮಾತ್ರವಲ್ಲ ಎಲ್ಲ ರೀತಿಯ ಐಷಾರಾಮಿ (luxury) ಸೌಲಭ್ಯ ಆಕೆಗೆ ಸಿಗ್ತಿದೆ. ರೆಸಾರ್ಟ್ ನಲ್ಲಿ ಸಿಗುವಂತ ಸೌಲಭ್ಯ ಆಕೆಗೆ ಸಿಗ್ತಿದ್ದು, ಕೋಟಿಗಟ್ಟಲೆ ಹಣ ಗಳಿಸಿದ್ರೂ ಖರ್ಚು ಮಾತ್ರ ಕಡಿಮೆ. ಹಾಗಾಗಿ ಎಲ್ಲ ಹಣವನ್ನು ತನ್ನ ಹವ್ಯಾಸ ಪೂರೈಸಿಕೊಳ್ಳಲು ಬಳಸಿಕೊಳ್ತಿದ್ದಾಳೆ. ಒಂದಿಷ್ಟು ಹಣವನ್ನು ಉಳಿತಾಯ ಮಾಡ್ತಿದ್ದಾಳೆ.
ಫ್ರೀ ಫುಡ್, ಮಲಗೋಕೆ ರೂಮ್; ಅಬ್ಬಬ್ಬಾ...ಮೈಕ್ರೋಸಾಫ್ಟ್ ಕಂಪೆನಿಯೊಳಗೆ ಏನುಂಟು..ಏನಿಲ್ಲ..!
ಶಮ್ಸ್ ಅಲ್ಬಯಾತಿ ಮಾಡ್ತಿರುವ ಕೆಲಸ ಏನು? : ಗೂಗಲ್, ಫೇಸ್ಬುಕ್, ಅಮೆಜಾನ್ ಸೇರಿದಂತೆ ಯಾವುದೋ ಐಟಿ ಕಂಪನಿಯಲ್ಲಿ ಶಮ್ಸ್ ಅಲ್ಬಯಾತಿ ಕೆಲಸ ಮಾಡ್ತಿರಬಹುದು ಎಂದು ನೀವು ಭಾವಿಸಿದ್ದರೆ ತಪ್ಪು. ಶರ್ಮ್ ಅಲ್ಬಯಾತಿ ಒಬ್ಬ ಇಂಜಿನಿಯರ್. ಆಕೆ ವಿಶ್ವದ ಅತ್ಯಂತ ಭವ್ಯವಾದ ತೈಲ ರಿಗ್ ಅಂದರೆ ತೈಲ ಗಣಿಗಾರಿಕೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಮನೆಯಿಂದ ದೂರವಿರುವ ಶಮ್ಸ್ ಅಲ್ಬಯಾತಿಗೆ ಸಂಬಳ ಗಮನ ಸೆಳೆದಿದೆ. ಅಲ್ಲಿ ಸೌಲಭ್ಯ, ಜಿಮ್ ಸೌಕರ್ಯಗಳು ಮನೆ ನೆನಪನ್ನು ಕಡಿಮೆ ಮಾಡಿವೆ. ತೈಲ ಗಣಿಗಾರಿಕೆಯಲ್ಲಿ ಹಾಳಾದ, ಕೆಟ್ಟು ನಿಂತ ಯಂತ್ರಗಳ ದೋಷ ಪತ್ತೆ ಮಾಡುವುದು ಶರ್ಮ್ಸ್ ಅಲ್ಬಯಾತಿ ಕೆಲಸ.
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ವಸ್ತ್ರಸಂಹಿತೆ ಬಿಡುಗಡೆ ಮಾಡಿದ ಸರ್ಕಾರ: ಜೀನ್ಸ್ ಪ್ಯಾಂಟ್, ಶೂ ನಿಷೇಧ
ಶರ್ಮ್ಸ್ ಅಲ್ಬಿಯಾತಿ ಪ್ರಕಾರ ಆಕೆ ಒಂದು ಕೋಟಿ ನಾಲ್ಕು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾಳೆ. ಇಲ್ಲಿ ಆಕೆ ಸಾಕಷ್ಟು ವಿಷ್ಯವನ್ನು ಕಲಿತಿದ್ದಾಳೆ. ಈ ಹಿಂದೆ ಮೆಕ್ಸಿಕೋ, ನಾರ್ವೆ, ಮಾಲ್ಟಾ, ಕುವೈತ್, ಲೆಬನಾನ್ ಮತ್ತು ಯುಎಇಯಲ್ಲಿ ಕೆಲಸ ಮಾಡಿರುವ ಶಮ್ಸ್, ಅಲ್ಲಿಗಿಂತ ತೈಲ ಗಣಿಗಾರಿಕೆಯಲ್ಲಿ ಹೆಚ್ಚಿನ ಸೌಲಭ್ಯ ಸಿಗುತ್ತೆ ಎನ್ನುತ್ತಾಳೆ. ತೈಲ ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಶರ್ಮ್ಸ್ ಗೆ ಆಹಾರದ ಬಗ್ಗೆಯೂ ಚಿಂತೆ ಇಲ್ಲ. ಉತ್ತಮ ಬಾಣಸಿಗರಿಂದ ಆರೋಗ್ಯಕರ ಆಹಾರವನ್ನು ಆಕೆಗೆ ನೀಡಲಾಗುತ್ತದೆ. ವೈದ್ಯಕೀಯ ಸೌಲಭ್ಯ ಕೂಡ ಲಭ್ಯವಿದೆ.
ತೈಲ ಗಣಿಗಾರಿಕೆ ಕ್ಷೇತ್ರವನ್ನು ಬಹಳ ಅಪಾಯಕಾರಿ ಎಂದು ನೋಡಲಾಗುತ್ತದೆ. ಆದ್ರೆ ಶರ್ಮ್ಸ್ ಇದನ್ನು ತಳ್ಳಿ ಹಾಕಿದ್ದಾಳೆ. ಶರ್ಮ್ಸ್ ಪ್ರಕಾರ ಇದ್ರಲ್ಲಿ ಅಪಾಯವೇನಿಲ್ಲ. ದುರಂತ ಸಂಭವಿಸುವ ಮುನ್ಸೂಚನೆ ಕಂಡು ಬಂದ್ರೆ ರಿಂಗ್ ತೆಗೆಯಲಾಗುತ್ತದೆ. ಇಲ್ಲಿ ಗೇಮಿಂಗ್ ಝೋನ್, ಮ್ಯೂಸಿಕ್ ರೂಮ್, ಸ್ಪಾ ಸೇರಿದಂತೆ ಅನೇಕ ಸೌಲಭ್ಯ ಲಭ್ಯವಿದೆ ಎನ್ನುತ್ತಾಳೆ ಶರ್ಮ್ಸ್.