ಆನ್ಲೈನ್‌ನಲ್ಲಿ ಆಹಾರ ತಲುಪಿಸುವ ವೇದಿಕೆ ಝೊಮ್ಯಾಟೋದ ಸಹ ಸಂಸ್ಥಾಪಕ ಹಾಗೂ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಗುಂಜನ್‌ ಪಟಿದಾರ್‌ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನವದೆಹಲಿ: ಆನ್ಲೈನ್‌ನಲ್ಲಿ ಆಹಾರ ತಲುಪಿಸುವ ವೇದಿಕೆ ಝೊಮ್ಯಾಟೋದ ಸಹ ಸಂಸ್ಥಾಪಕ ಹಾಗೂ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಗುಂಜನ್‌ ಪಟಿದಾರ್‌ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಟಿದಾರ್‌ ಝೊಮ್ಯಾಟೋದ ಆರಂಭಿಕ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದು, ಕಂಪನಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಕಳೆದ 10 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಅವರು, ಇಲ್ಲಿಂದ ಮುಂದಕ್ಕೆ ಕಂಪನಿಯನ್ನು ನಡೆಸಲು ಬೇಕಾದ ನಾಯಕರನ್ನು ಸಹ ತಯಾರಿಸಿದ್ದಾರೆ. ಝೊಮ್ಯಾಟೋ ಕಟ್ಟುವಲ್ಲಿ ಅವರ ಶ್ರಮವನ್ನು ವರ್ಣಿಸುವುದು ಅಸಾಧ್ಯ’ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ರಾಜೀನಾಮೆಗೆ ಕಾರಣವನ್ನು ಕಂಪನಿ ಬಹಿರಂಗಪಡಿಸಿಲ್ಲ. ಕಳೆದ ವರ್ಷವೂ ಸಹ ಝೊಮ್ಯಾಟೋದಿಂದ ಪ್ರಮುಖ ಹುದ್ದೆಗಳಲ್ಲಿದ್ದ ಕೆಲವರು ರಾಜೀನಾಮೆ ನೀಡಿದ್ದರು.


ಆನಲೈನ್‌ ಫುಡ್‌ ಆರ್ಡರ್ ಮಾಡುವ ಮುನ್ನ ಇದು ತಿಳಿದಿರಿ

ಫುಡ್‌ ಡೆಲಿವರಿ ಬಾಯ್‌ಗಳಿಂದ ಲೈಂಗಿಕ ದೌರ್ಜನ್ಯ: ಆ್ಯಪ್ ಆಧಾರಿತ ಕಂಪನಿಗಳಿಗೆ ವಾರ್ನಿಂಗ್