ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರಬೆಳ್ಳಿ ಬೆಲೆಯಲ್ಲಿ ಇಳಿಕೆ, ಚಿನ್ನದ ದರ ಬಹುತೇಕ ಸ್ಥಿರಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿಯ ದರ ಹೇಗಿದೆ 

ಬೆಂಗಳೂರು (ಜ.17): ದೇಶದಲ್ಲಿ ಯಾವುದಕ್ಕಾದರೂ ಬೇಡಿಕೆ ಕಡಿಮೆಯಾದರೂ, ಚಿನ್ನ (Gold), ಬೆಳ್ಳಿಯ (Silver) ವಿಚಾರದಲ್ಲಿ ಬೇಡಿಕೆ ಕಡಿಮೆ ಆಗುವ ಮಾತೇ ಇರುವುದಿಲ್ಲ. ನಿರಂತರವಾಗಿ ಏರಿಳಿತ ಕಾಣುತ್ತಲೇ ಇರುವ ಚಿನ್ನ ಬೆಳ್ಳಿ ದರದ (Price) ಮೇಲೆ ಅಂತಾರಾಷ್ಟ್ರೀಯ ವಿಚಾರಗಳು ಸಾಕಷ್ಟು ಪ್ರಭಾವ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಸಣ್ಣ ಬದಲಾವಣೆಗಳೂ ಕೂಡ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಲ್ಲುದು. ಪ್ರಸ್ತುತ ಇಡೀ ಜಗತ್ತು ಕೋವಿಡ್-19 ನ ಸಂಭಾವ್ಯ ಮೂರನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿದೆ. ಭಾರತದಲ್ಲೂ ಇದರ ಪ್ರಭಾವವಿದ್ದು, ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂಗಳನ್ನು ವಿವಿಧ ರಾಜ್ಯಗಳಲ್ಲಿ ಹೇರಲಾಗಿದೆ. ಇದರಲ್ಲಿ ಆಭರಣ ಮಳಗೆಗೆ ಹೋಗಿ ಚಿನ್ನ, ಬೆಳ್ಳಿಯ ಆಭರಣ ಖರೀದಿ ಮಾಡುವುದಕ್ಕಿಂತ, ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದ ಬಳಿಕ ಈ ಬಗ್ಗೆ ಚಿಂತೆ ಮಾಡುವುದು ಒಳಿತು. 

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ದೇಶದಲ್ಲಿನ ಚಿನ್ನದ ಸಂಗ್ರಹ ಕೂಡ ಬೆಲೆ ನಿರ್ಧರಣೆ ಮೇಲೆ ಪರಿಣಾಮ ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿ ಮೇಲೆ ಖರೀದಿಸೋದು ಅಥವಾ ಹೂಡಿಕೆ ಮಾಡೋದು ಅಂದ್ರೆ ಲಕ್ಷಾಂತರ ರೂಪಾಯಿ ವ್ಯವಹಾರವಾಗಿರೋ ಕಾರಣ ಯಾವುದೇ ನಿರ್ಧಾರ ಕೈಗೊಳ್ಳೋ ಮುನ್ನ ಮಾರುಕಟ್ಟೆ ದರ ಪರಿಶೀಲನೆ ನಡೆಸೋದು ಅಗತ್ಯ. ಹಾಗಾದ್ರೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ (ಜ.18) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವುದರ ವಿವರ ಇಲ್ಲಿದೆ.

Add Asianetnews Kannada as a Preferred SourcegooglePreferred

"
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,970ರೂ.ಇದ್ದು, 20 ರೂಪಾಯಿ ಕಡಿಮೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,070 ರೂ.ಇದ್ದು, 20 ರೂ ಇಳಿಕೆಯಾಗಿದೆ.. ಇನ್ನು ಬೆಳ್ಳಿ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದ್ದು. ಒಂದು ಕೆ.ಜಿ.ಬೆಳ್ಳಿಯಲ್ಲಿ 3800 ರೂಪಾಯಿ ಕಡಿಮೆಯಾಗಿದೆ. ನಿನ್ನೆ 65,500ರೂ.ಇದ್ದ ಬೆಳ್ಳಿ ದರ ಇಂದು 61,700 ರೂಪಾಯಿ ಆಗಿದೆ.

ಕಾನ್ಪುರದ ಮನೆಯಲ್ಲಿ ಕಳ್ಳತನ, ಅಮೆರಿಕದಿಂದ CCTVಯಲ್ಲಿ ಲೈವ್ ನೋಡಿದ ಮಾಲೀಕ, ಮುಂದೆ ನಡೆದಿದ್ದೇ ಬೇರೆ!
ದೆಹಲಿಯಲ್ಲಿ ಹೇಗಿದೆ?

ದೆಹಲಿಯಲ್ಲಿ (Delhi)ಕೂಡ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,140ರೂ. ಆಗಿದ್ದು, ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,430 ರೂ. ಇತ್ತು, ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿ ಕೂಡ 300 ರೂಪಾಯಿ ಕಡಿಮೆಯಾಗಿದೆ. ನಿನ್ನೆ 62 ಸಾವಿರವಿದ್ದ 1 ಕೆಜಿ ಬೆಳ್ಳಿ ದರ ಇಂದು 61,700 ರೂಪಾಯಿ ಆಗಿದೆ.

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ (Mumbai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 47,090 ದರವೇ ಉಳಿದುಕೊಂಡಿದೆ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ದರದಲ್ಲೂ ಯಾವುದೇ ಬದಲಾವಣೆಯಾಗದೆ 49,090 ಯಲ್ಲಿದೆ. 1 ಕೆಜಿ ಬೆಳ್ಳಿ ದರದಲ್ಲಿ 300 ರೂಪಾಯಿ ಇಳಿಕೆಯಾಗಿದ್ದು, 61,700 ರೂಪಾಯಿ ತಲುಪಿದೆ.

Assembly Elections: 3 ರಾಜ್ಯ ಬಿಜೆಪಿಗೆ, 2 ಅತಂತ್ರ!
ಚೆನ್ನೈಯಲ್ಲಿ ದರ ಹೀಗಿದೆ

ಚೆನ್ನೈಯಲ್ಲಿ (Chennai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 20 ರೂಪಾಯಿ ಇಳಿಕೆಯಾಗಿದೆ. ನಿನ್ನೆ 45, 340 ಇದ್ದ ದರ ಇಂದು 45,320 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 20 ರೂಪಾಯಿ ಇಳಿಕೆಯಾಗಿದ್ದು, 49, 420 ರೂಪಾಯಿಗೆ ಇಳಿದಿದೆ. ಇನ್ನು 1 ಕೆಜಿ ಬೆಳ್ಳಿ ದರದಲ್ಲಿ 300 ರೂಪಾಯಿ ಏರಿಕೆಯಾಗಿದ್ದು, 65,800 ರೂಪಾಯಿ ಆಗಿದೆ.