Asianet Suvarna News Asianet Suvarna News

ಹೆಚ್ಚಲಿದೆ ಜನಸಾಮಾನ್ಯರ ಜೇಬಿನ ಮೇಲಿನ ಹೊರೆ: ಮೇ 1ರಿಂದ ಈ ಹಣಕಾಸು ನಿಯಮಗಳಲ್ಲಿ ಬದಲಾವಣೆ

ಮೇ ತಿಂಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. 
 

Changes in saving account charges credit card rules special FD deadlines 5 money changes in May 2024 anu
Author
First Published Apr 28, 2024, 11:57 AM IST | Last Updated Apr 28, 2024, 11:57 AM IST

ನವದೆಹಲಿ (ಏ.28): ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಹಣಕಾಸಿಗೆ ಸಂಬಂಧಿಸಿದ ಒಂದಿಷ್ಟು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಇವು ಜನರ ಹಣಕಾಸಿನ ಸ್ಥಿತಿ ಮೇಲೆ  ನೇರ ಪರಿಣಾಮ ಬೀರುತ್ತವೆ. ಹೀಗಾಗಿ ಈ ನಿಯಮಗಳ ಬಗ್ಗೆ ಒಂದಿಷ್ಟು ಮಾಹಿತಿ ಹೊಂದಿರೋದು ಅಗತ್ಯ. ಈ ಬದಲಾವಣೆಗಳು ಹಣದ ವೆಚ್ಚ ಹಾಗೂ ಹೂಡಿಕೆ ಮೇಲೆ ಕೂಡ ಪರಿಣಾಮ ಬೀರಲಿವೆ. ಏಪ್ರಿಲ್ ತಿಂಗಳು ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮೇ ತಿಂಗಳಿಂದ ಹಣಕಾಸಿಗೆ ಸಂಬಂಧಿಸಿದ ಒಂದಿಷ್ಟು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹಾಗಾದ್ರೆ ಮೇ ತಿಂಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ.

1.ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ: ವಿವಿಧ ಬ್ಯಾಂಕುಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಮೇ 1ರಿಂದ ಬದಲಾವಣೆಯಾಗಲಿದೆ. ಯೆಸ್ ಬ್ಯಾಂಕ್ ವೆಬ್ ಸೈಟ್ ಪ್ರಕಾರ ಉಳಿತಾಯ ಖಾತೆಗಳ ವಿವಿಧ ರೂಪಾಂತರಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ನಲ್ಲಿ ಬದಲಾವಣೆ ಮಾಡಲಾಗಿದೆ. ಅಕೌಂಟ್ ಪ್ರೊ ಮ್ಯಾಕ್ಸ್ ಅಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ 50 ಸಾವಿರ ರೂ. ಇನ್ನು ಗರಿಷ್ಠ ಶುಲ್ಕಕ್ಕೆ ಒಂದು ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ. ಪ್ರೊ ಪ್ಲಸ್, ಯೆಸ್ ಎಸೆನ್ಸ್ ಎಸ್ ಎ, ಎಸ್ ರೆಸ್ಪೆಕ್ಟ್ ಎಸ್ಎ ಖಾತೆಗಳಲ್ಲಿ ಗರಿಷ್ಠ ಶುಲ್ಕವನ್ನು 25 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಪ್ರೊ ಮ್ಯಾಕ್ಸ್ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್ 50 ಸಾವಿರ ರೂ. 

ಬೆಲೆಯೇರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗುಡ್ ನ್ಯೂಸ್; ಜೂನ್ ಬಳಿಕ ಆಹಾರ ಪದಾರ್ಥಗಳ ಬೆಲೆ ಇಳಿಕೆ

2.ವಾರ್ಷಿಕ ಶುಲ್ಕದಲ್ಲಿ ಪರಿಷ್ಕರಣೆ: ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಗೆ ಸಂಬಂಧಿಸಿದ ಸೇವಾ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕವನ್ನು ನಗರ ಪ್ರದೇಶಗಳಲ್ಲಿ 200ರೂ.ಗೆ ಪರಿಷ್ಕರಿಸಲಾಗಿದೆ. ಹಾಗೆಯೇ ಗ್ರಾಮೀಣ ಭಾಗಗಳಲ್ಲಿ ಈ ಶುಲ್ಕ 99ರೂ. ಇದರ ಹೊರತಾಗಿ ಗ್ರಾಹಕರು 25ಕ್ಕೂ ಹೆಚ್ಚು ಲೀವ್ಸ್ ಹೊಂದಿರುವ ಚೆಕ್ ಬುಕ್ ತೆಗೆದುಕೊಳ್ಳಲು ಕೂಡ ಶುಲ್ಕ ಪಾವತಿಸಬೇಕಾಗುತ್ತದೆ. ಐಎಂಪಿಎಸ್ ವಹಿವಾಟಿನ ಮೊತ್ತವನ್ನು ಪ್ರತಿ ವಹಿವಾಟಿಗೆ  2.50ರೂ.ನಿಂದ 15ರೂ.ಗೆ ನಿಗದಿಪಡಿಸಲಾಗಿದೆ. 

3.ಹಿರಿಯ ನಾಗರಿಕರಿಗೆ ವಿಶೇಷ ಎಫ್ ಡಿಗಳಲ್ಲಿ ಹೂಡಿಕೆ: ಎಚ್ ಡಿಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರ ವಿಶೇಷ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಇದು ವಿಶೇಷ ಹಿರಿಯ ನಾಗರಿಕರ ಎಫ್ ಡಿ ಯೋಜನೆಯಾಗಿದ್ದು, ಹೆಚ್ಚಿನ ಬಡ್ಡಿದರ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯನ್ನು 2020ರ ಮೇನಲ್ಲಿ ಪ್ರಾರಂಭಿಸಲಾಯಿತು. ಇನ್ನು ಈ ಯೋಜನೆಯಲ್ಲಿ ಹೂಡಿಕೆಯ ಕೊನೆಯ ದಿನಾಂಕವನ್ನು 2024ರ ಮೇ 10ರ ತನಕ ವಿಸ್ತರಿಸಲಾಗಿದೆ. 

ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಯಾವಾಗ ರೈತರ ಖಾತೆ ಸೇರುತ್ತೆ? ಇಲ್ಲಿದೆ ಮಾಹಿತಿ

4.ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ: ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪ್ರತಿ ತಿಂಗಳ ಮೊದಲ ದಿನ ಬದಲಾವಣೆ ಮಾಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ನಿಗದಿಪಡಿಸುತ್ತವೆ. 14 ಕೆಜಿ ಗೃಹ ಬಳಕೆ ಹಾಗೂ 19 ಕೆಜಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳ ದರವನ್ನು ತೈಲ ಮಾರುಕಟ್ಟೆ ಕಂಪನಿಗಳು ನಿಗದಿಪಡಿಸುತ್ತವೆ. 2024ರ ಮಾರ್ಚ್ ತಿಂಗಳಲ್ಲಿ ಚುನಾವಣಾ ದಿನಾಂಕ ಘೋಷಿಸುವ ಕೆಲವು ದಿನಗಳ ಮುನ್ನ ಕೇಂದ್ರ ಸರ್ಕಾರ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 100ರೂ. ಕಡಿತಗೊಳಿಸಿತ್ತು. 

5.ಕ್ರೆಡಿಟ್ ಕಾರ್ಡ್ ಶುಲ್ಕ: ಐಡಿಎಫ್ ಸಿ ಹಾಗೂ ಯೆಸ್ ಬ್ಯಾಂಕ್ ದಿನಬಳಕೆ ಬಿಲ್ ಪಾವತಿಗಳಿಗೆ ಶೇ.1ರಷ್ಟು ಜಿಎಸ್ ಟಿ ವಿಧಿಸುತ್ತದೆ. ಅದೇ ಯೆಸ್ ಬ್ಯಾಂಕ್ ಗ್ರಾಹಕರಿಗೆ ಈ ಮಿತಿ 15,000ರೂ. ಒಂದೇ ಬಿಲ್ಲಿಂಗ್ ಸೈಕಲ್ ನಲ್ಲಿ ಐಡಿಎಫ್ ಸಿ ಇದನ್ನು  20,000ರೂ.ಗೆ ಹೆಚ್ಚಿಸಿದೆ. ಹೊಸ ಶುಲ್ಕಗಳು ಮೇ 1ರಿಂದ ಜಾರಿಗೆ ಬರಲಿವೆ. 

Latest Videos
Follow Us:
Download App:
  • android
  • ios