ಡಿಮಾನಿಟೈಸೇಶನ್ ಬಳಿಕ ನೋಟಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳ ರೂಪ, ಸ್ವರೂಪ ಎಲ್ಲವೂ ಬದಲಾಗುತ್ತಿದೆ. ಏನಿದು?

ನವದೆಹಲಿ (ಜು.27) ಭಾರತದಲ್ಲಿ ಕರೆನ್ಸಿ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2026ರಲ್ಲಿ ಡಿಮಾನಿಟೈಸೇಶನ್ ಮೂಲಕ 500 ರೂಪಾಯಿ, 1000 ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂಪಡೆದಿತ್ತು. ಬಳಿಕ 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ತಂದು ಭಾರಿ ಬದಲಾವಣೆ ಸೃಷ್ಟಿಸಿತ್ತು. ಇದೀಗ ಡಿಮಾನಿಟೈಸೇಶನ್ ಬಳಿಕ ಕೇಂದ್ರ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳ ಸ್ವರೂಪ ಬದಲಿಸಲು ಮುಂದಾಗಿದೆ. ಅಷ್ಟೇ ವೇಗದಲ್ಲಿ ಭಾರತದ ಎಲ್ಲಾ ಕರೆನ್ಸಿಗಳು ಹಂತ ಹಂತವಾಗಿ ಬದಲಾಗಲಿದೆ.

10, 20 ರೂಪಾಯಿ ಪ್ಲಾಸ್ಟಿಕ್ ನೋಟು

ಭಾರತದಲ್ಲಿ ಸದ್ಯ ಕರೆನ್ಸಿ ನೋಟುಗಳು ಕಾಗದ ಸ್ವರೂಪದಲ್ಲಿದೆ. ಉತ್ತಮ ಗುಣಮಟ್ಟದ ಕಾಗದ ಮೂಲಕ ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳನ್ನು ಪ್ಲಾಸ್ಟಿಕ್ ರೂಪದಲ್ಲಿ ಬಿಡುಗಡೆ ಮಾಡಲು ಪೈಲೆಟ್ ಪ್ರಾಜೆಕ್ಟ್‌ನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತು. ಇದೀಗ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಶೀಘ್ರದಲ್ಲೇ 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳು ಪ್ಲಾಸ್ಟಿಕ್ (ಪಾಲಿಮರ್) ರೂಪದಲ್ಲಿ ಕೈಸೇರಲಿದೆ.

ಕಾಗದ ನೋಟುಗಳು ಹೆಚ್ಚು ಚಲಾವಣೆ ಬಳಿಕ ಹರಿದು ಹೋಗುವುದು, ಹರಿಯುವುದು, ಕೊಳೆಯಾಗುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತದೆ. ಹೀಗಾಗಿ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆ ತರುವ ಮೂಲಕ ನೋಟುಗಳ ಸುದೀರ್ಘ ದಿನಗಳ ಕಾಲ ಬಾಳಿಕೆ ಬರುವಂತೆ ಮಾಡಲು ಪ್ಲಾನ್ ಮಾಡಲಾಗಿದೆ. ಇದರಿಂದ ಸರ್ಕಾರದ ಮೇಲಿನ ಮುದ್ರಣ ವೆಚ್ಚ ಕಡಿಮೆಯಾಗಲಿದೆ.ಒಮ್ಮೆ ಮುದ್ರಣ ಮಾಡಿದ ಬಳಿಕ ಮತ್ತೆ ಹರಿದು ನೋಟುಗಳು, ಹಾಳಾದ ನೋಟುಗಳನ್ನು ಮತ್ತೆ ಮುದ್ರಿಸುವುದರಿಂದ ವೆಚ್ಚ ಹೆಚ್ಚಾಗುತ್ತದೆ. ಆದರೆ ಪ್ಲಾಸ್ಟಿಕ್ ನೋಟುಗಳಿಂದ ಈ ಸಮಸ್ಯೆ ಬಗೆಹರಿಯಲಿದೆ.

ಮೆಟಾಲಿಕ್ ನ್ಯೂಮರಲ್ಸ್, ಮ್ಯಾಗ್ನೆಟಿಕ್ ಥ್ರೆಡ್ ಸೇರಿದಂತೆ ಕೆಲ ಆರ್‌ಬಿಐ ಸಿಗ್ನೇಚರ್‌ಗಳು ಈ ಪ್ಲಾಸ್ಟಿಕ್ ನೋಟಿನಲ್ಲಿರದೆ. ಇದರಿಂದ ನಕಲಿ ನೋಟುಗಳನ್ನು ತಡೆಯಲು ಸಹಕಾರಿಯಾಗುತ್ತದೆ. ಪ್ಲಾಸ್ಟಿಕ್ ನೋಟು ಮುದ್ರಣಕ್ಕೆ ಆರ್‌ಬಿಐ ಟೆಂಡರ್ ಕರೆದಿದೆ. ಹಲವು ಷರತ್ತುಗಳೊಂದಿಗೆ ಟೆಂಡರ್ ಕರೆಯಲಾಗಿದೆ. ಪಾಕಿಸ್ತಾನ ಹಾಗೂ ಚೀನಾ ದೇಶಗಳ ಯಾವುದೇ ಕಚ್ಚಾ ವಸ್ತುಗಳನ್ನು ಈ ನೋಟು ಮುದ್ರಣದಲ್ಲಿ ಬಳಸುವಂತಿಲ್ಲ.

2027ರಿಂದ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನೋಟುಗಳು ಭಾರತೀಯರ ಕೈಸೇರಲಿದೆ. ಮೊದಲ ಹಂತದಲ್ಲಿ 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳು ಪ್ಲಾಸ್ಟಿಕ್ ರೂಪದಲ್ಲಿ ಚಲಾವಣೆ ಆರಂಭಿಸಲಿದೆ. ಬಳಿಕ ಹಂತ ಹಂತವಾಗಿ 50 ರೂಪಾಯಿ, 100 ರೂಪಾಯಿ, 500 ರೂಪಾಯಿ ನೋಟುಗಳು ಪ್ಲಾಸ್ಟಿಕ್ ರೂಪದಲ್ಲಿ ಚಲಾವಣೆ ಆರಂಭಿಸಲಿದೆ