ನವದೆಹಲಿ(ನ.02):   GST ಪರಿಹಾರದ 2ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.  ಭಾರತ ಸರ್ಕಾರದ ಹಣಕಾಸು ಸಚಿವಾಲಯ, GST ಪರಿಹಾರ ಸೆಸ್ ಕೊರತೆಯನ್ನು ಪೂರೈಸಲು ರಾಜ್ಯಗಳಿಗೆ ವಿಶೇಷ ಯೋಜನೆ ಅಡಿಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಕ್ಕೆ 6,000 ಕೋಟಿ ರೂಪಾಯಿ ಹಣ ಕೇಂದ್ರ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರಕ್ಕೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್

ಮೊತ್ತವನ್ನು ಸರಾಸರಿ ಸರಾಸರಿ 4.42 ರಷ್ಟು ಇಳುವರಿಯಲ್ಲಿ ಸಂಗ್ರಹಿಸಲಾಗಿದ್ದು, ಅದೇ ಬಡ್ಡಿದರದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ವಲಯಕ್ಕೆ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಜಿಎಸ್‌ಟಿ ಪರಿಹಾರ ಹಣದಿಂದ  ರಾಜ್ಯಗಳು  ಹಾಗೂ ಕೇಂದ್ರಾಡಳಿತ ವಲಯಗಳು ಸಾಲ ಪಡೆಯುವ ವೆಚ್ಚಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ರಾಜ್ಯಗಳ ಮೇಲಿನ ಹೆಚ್ಚಿನ ಹೊರೆ ಕಡಿಮೆಯಾಗಲಿದೆ . ಇದುವರೆಗೆ ಕೇಂದ್ರ ಹಣಕಾಸು ಸಚಿವಾಲಯವು 12,000 ಕೋಟಿ ರೂ. ಬಿಡುಗಡೆ ಮಾಡಿದೆ.

ಕೊಳ್ಳುವ ಶಕ್ತಿ ಹೆಚ್ಚಳಕ್ಕೆ ನಿರ್ಮಲಾ 73 000 ಕೋಟಿ ಪ್ಯಾಕೇಜ್, ಕೇಂದ್ರ ನೌಕರರಿಗೆ ಬಂಪರ್!.

 21 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಜಿಎಸ್‌ಟಿ ಪರಿಹಾರದಲ್ಲಿ ಆಯ್ಕೆ I ಆರಿಸಿಕೊಂಡಿದೆ. ಇನ್ನು ಜಿಎಸ್‌ಟಟಿ ಪರಿಹಾರ  ಸೆಸ್ ಬಿಡುಗಡೆಗೆ ಬದಲಾಗಿ ಭಾರತ ಸರ್ಕಾರ ಸಂಗ್ರಹಿಸಿದ  ಸಾಲಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ವಲಯಕ್ಕೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ.