Asianet Suvarna News Asianet Suvarna News

ಮಗ ಶ್ರೀಮಂತ ಉದ್ಯಮಿ ಅನ್ನೋದೇ ಪೋಷಕರಿಗೆ ತಿಳಿದಿಲ್ಲ, ಹೇಳಿದರೆ ಬದಲಾಗಲಿದೆ ಚಿತ್ರಣ!

ಮಕ್ಕಳು ಎಷ್ಟು ಸಂಪಾದಿಸುತ್ತಾರೆ, ಏನಾಗಿದ್ದಾರೆ, ಅವರ ಸಾಧನೆ ಏನು ಅನ್ನೋದು ಬಹುತೇಕರಿಗೆ ತಿಳಿದಿಲ್ಲದಿದ್ದರೂ, ಪೋಷಕರು, ಕುಟುಂಬಕ್ಕೆ ತಿಳಿದಿರುತ್ತದೆ. ಆದರೆ ಇಲ್ಲೊಬ್ಬ ಕೋಟಿ ಕೋಟಿ ರೂಪಾಯಿ ಆದಾಯದ ಶ್ರೀಮಂತ ಉದ್ಯಮಿ. ಆದರೆ ಪೋಷಕರಿಗೆ ತನ್ನ ಮಗ ಶ್ರೀಮಂತ ಅನ್ನೋದೇ ತಿಳಿದಿಲ್ಲ. ಈಗಲೂ ತನ್ನ ಮಗ ಬ್ಯಾಂಕ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದುಕೊಂಡಿದ್ದಾರೆ. ಇತ್ತ ಪೋಷಕರ ಮುಂದೆ ಕೈಯಲ್ಲಿ ವಾಚು ಕಟ್ಟದೆ ಸಾಮಾನ್ಯರಂತೆ ಓಡಾಡುತ್ತಾನೆ. ಅವರಲ್ಲಿ ತನ್ನ ಶ್ರೀಮಂತಿಕೆ ಹೇಳಿದರೆ ಅಂದಿಗೆ ಎಲ್ಲಾ ಚಿತ್ರಣ ಬದಲಾಗಲಿದೆ ಅನ್ನೋದು ಈತನ ವಾದ.
 

Cant tell parents about my income wealth they would disown says Switzerland millionaire who own e commerce business ckm
Author
First Published Mar 3, 2023, 6:39 PM IST

ಜ್ಯೂರಿಚ್(ಮಾ.03) ಈತನ ವಯಸ್ಸು ಕೇವಲ 26. ಇ ಕಾಮರ್ಸ್ ಮೂಲಕ ಸಣ್ಣ ಉದ್ಯಮ ಆರಂಭಿಸಿ ಇಂದು ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದಾನೆ. ಪ್ರತಿ ತಿಂಗಳ ಆದಾಯ 83.69 ಲಕ್ಷ ರೂಪಾಯಿ.ಸ್ಟಾರ್ಟ್ ಅಪ್ ಸೇರಿದಂತೆ  ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿ ಅಲ್ಲಿಂದಲೂ ಆದಾಯ ಗಳಿಸುತ್ತಿದ್ದಾರೆ. ಈತನ ಬಳಿಕ ಐಷಾರಾಮಿ ಕಾರುಗಳಿವೆ. ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ವಾಚ್ ಸೇರಿದಂತೆ ಹಲವು ವಸ್ತುಗಳಿವೆ. ಆದರೆ ಪೋಷಕರ ಮುಂದೆ ಈತ ಚಪ್ಪಲ್ ಹಾಕಿ, ಸಾಮಾನ್ಯ ಜೀನ್ಸ್ ಬಟ್ಟೆ ಧರಿಸಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾನೆ. ಕಾರಣ ಈತ ಅತ್ಯಂತ ಶ್ರೀಮಂತ ಅನ್ನೋದು ಪೋಷಕರಿಗೆ ಗೊತ್ತಿಲ್ಲ. ಪೋಷಕರಿಗೆ ಹೇಳುವ ಪ್ರಯತ್ನ ಮಾಡಿದರೆ ತನ್ನನ್ನು ನೋಡುವ ದೃಷ್ಟಿಕೋನವೇ ಬದಲಾಗಲಿದೆ ಅನ್ನೋದು ಈತನ ವಾದ. ಅಷ್ಟಕ್ಕೂ ಈತನ ಹೆಸರು ಗಿಸೆಪ್ ಫ್ಯೂರೆಂಟಿನೋ. ಹುಟ್ಟಿದ್ದು ಇಟಲಿಯ ಸಿಸಿಲಿಯಲ್ಲಿ. ಸದ್ಯ ಸ್ವಿಟ್ಜರ್‌ಲೆಂಡ್‌ನ ಜ್ಯೂರಿಚ್‌ನಲ್ಲಿ ಕೋಟಿ ಕೋಟಿ ರೂಪಾಯಿ ಒಡೆಯ. 

ಗಿಸೆಪ್ ಫ್ಯೂರೆಂಟಿನೋ ಹಾಗೂ ಪೋಷಕರು ಸಿಸಿಲಿ ನಿವಾಸಿಗಳಾಗಿದ್ದರು. ಆದರೆ ಇಟಲಿಯ ಸಿಸಿಲಿಯಲ್ಲಿ ಮಾಫಿಯಾ ಗ್ಯಾಂಗ್ ಹೆಚ್ಚು. ಇಲ್ಲಿ ದುಡಿದು ತಿನ್ನುವವರು ಕಡಿಮೆ. ಬಹುತೇಕರು ಮಾಫಿಯಾ ಗ್ಯಾಂಗ್ ಮೂಲಕವೇ ಹಣ ಸಂಪಾದಿಸುತ್ತಿದ್ದಾರೆ. ಮಾಫಿಯಾ ಉಪಟಳ, ಮಗನ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಗಿಸೆಪ್ ಫ್ಯೂರೆಂಟಿನೋ ಪೋಷಕರು ಸಿಸಿಲಿಯಿಂದ ಸ್ವಿಟ್ಜರ್‌ಲೆಂಡ್‌ಗೆ ಸ್ಥಳಾಂತರಗೊಂಡರು. 

ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

ಓದಿನಲ್ಲಿ ಮುಂದಿದ್ದ ಗಿಸೆಪ್ ಫ್ಯೂರೆಂಟಿನೋ 16ನೇ ವಯಸ್ಸಿನಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದ. ಬಳಿಕ ಇದೇ ಬ್ಯಾಂಕ್‌ನಲ್ಲಿ ಉದ್ಯೋಗದ ಆಫರ್ ನೀಡಿದ್ದರು. ಆರಂಭಿಕ ಹಂತದಲ್ಲಿ ಗಿಸೆಪ್ ಫ್ಯೂರೆಂಟಿನೋ ಸ್ವಿಸ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ಸೇರಿಕೊಂಡ. ಪೋಷಕರಿಗೆ ಎಲ್ಲಿಲ್ಲದ ಸಂಭ್ರಮ ಇದಾಗಿತ್ತು. ತಾವು ಇಟಲಿ ಮಾಫಿಯಾ ನಗರದಿಂದ ಸ್ಥಳಾಂತರವಾದ ಕಾರಣ ಮಗನ ಭವಿಷ್ಯ ಉತ್ತಮವಾಗಿದೆ ಎಂದು ಸಂಭ್ರಮಿಸಿದರು. 

ಇತ್ತ ಗಿಸೆಪ್ ಫ್ಯೂರೆಂಟಿನೋ ಕೂಡ ಉತ್ತಮ ಗಣನಡತೆ ರೂಢಿಸಿಕೊಂಡಿದ್ದಾನೆ. ತನ್ನ 23ನೇ ವಯಸ್ಸಿಗೆ ಸ್ವಿಸ್ ಬ್ಯಾಂಕ್ ಉದ್ಯೋಗ ತೊರೆದು ಸ್ವಂತ ಉದ್ಯಮ ಆರಂಭಿಸಿದ. ಇ ಕಾಮರ್ಸ್ ಮೂಲಕ ಆನ್‌ಲೈನ್ ಮಾರಾಟ ಶುರುಮಾಡಿದೆ. ಬಟ್ಟೆ, ಫ್ಯಾಶನ್ ಸೇರಿದಂತೆ ಹಲವು ವಸ್ತುಗಳನ್ನು ಇ ಕಾಮರ್ಸ್ ಮೂಲಕ ಮಾರಾಟ ಆರಂಭಿಸಿದೆ. ಬಳಿಕ ಹಂತ ಹಂತವಾಗಿ ಬ್ಯೂಸಿನೆಸ್ ವಿಸ್ತರಿಸಿದ.

ಗಿಸೆಪ್ ಫ್ಯೂರೆಂಟಿನೋ ಶಾಲಾ ದಿನಗಳಲ್ಲಿ ಸಿಸಿಲಿಯಲ್ಲಿ ಕಳೆದಿದ್ದ. ಸಿಸಿಲಿ ಜೊತೆ ಗಿಸೆಪ್ ಫ್ಯೂರೆಂಟಿನೋ ಉತ್ತಮ ಸಂಪರ್ಕವಿದೆ. ಆದರೆ ತನ್ನ ಬ್ಯೂಸಿನೆಸ್‌ನಲ್ಲಿ ತೊಡಗಿಸಿಕೊಂಡ ಗಿಸೆಪ್ ಫ್ಯೂರೆಂಟಿನೋ ಮತ್ತೆ ಹಿಂತಿರುಗಿ ನೋಡಿಲ್ಲ. ಇದೀಗ ಪ್ರತಿ ತಿಂಗಳು 83.69 ಲಕ್ಷ ರೂಪಾಯಿ ತನ್ನ 3ಸಿಸಿ ಗ್ರೂಪ್ ಎಜಿ ಕಂಪನಿಯಿಂದ ಆದಾಯ ಪಡೆಯುತ್ತಿದ್ದಾರೆ. ಈತನ ಬಳಿಕ ಮೆಕ್ಲರೆನ್, ಮರ್ಸಿಡೀಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಸ್ವಿಟ್ಜರ್‌ಲೆಂಡ್ ಹಲವು ಭಾಗದಲ್ಲಿ ಮನೆ ಖರೀದಿಸಿದ್ದಾನೆ. ದುಬೈ, ಸೌತ್ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಹಾಲಿಡೇಯನ್ನು ಕಳೆಯುತ್ತಾನೆ.

ತಾನು ಇಷ್ಟು ದೊಡ್ಡ ಶ್ರೀಮಂತ ಅನ್ನೋದನ್ನು ಮನೆಯವರಿಗೆ ಹೇಳಿಲ್ಲ. ತನ್ನ ಮಗ ಇನ್ನೂ ಬ್ಯಾಂಕ್ ಉದ್ಯೋಗಿ ಎಂದೇ ಪೋಷಕರು ನಂಬಿದ್ದಾರೆ. ಕೆಲಸದ ನಿಮಿತ್ತ ಈತ ಜ್ಯೂರಿಚ್‌ನಲ್ಲಿದ್ದರೆ, ತಂದೆ ತಂದೆ ಈಗಲೂ ಸ್ವಿಟ್ಜರ್‌ಲೆಂಡ್‌ನ ಹಳ್ಳಿಯಲ್ಲಿ ವಾಸವಿದ್ದಾರೆ. ತಾನು ಮನೆಗೆ ಬರುವಾಗ ಐಷಾರಾಮಿ ಕಾರು, ವಾಚು, ಬಟ್ಟೆ ಯಾವುದು ತರುವುದಿಲ್ಲ. ಸಾಮಾನ್ಯರಂತೆ ಬಂದು ಪೋಷಕರ ಮುಂದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾನೆ. ಇದಕ್ಕೆ ಕಾರಣ ತಾನು ಶ್ರೀಮಂತ ಎಂದು ಹೇಳಿದರೆ ಈ ದುಡ್ಡು ಸಂಪಾದನೆ ಮಾಫಿಯಾ ಗ್ಯಾಂಗ್‌ನಿಂದ ಬಂದಿದೆ ಎಂದುಕೊಳ್ಳುತ್ತಾರೆ.

 

ಅಪ್ಪನ 60 ವರ್ಷದ ಹಳೇ ಪಾಸ್​ಬುಕ್​ನಿಂದ ಮಗನಿಗೆ ಸಿಕ್ಕಿದ್ದು ಕೋಟಿ ಕೋಟಿ ರೂ.!

ಅವರಿಗೆ ಇ ಕಾಮರ್ಸ್ ಗೊತ್ತಿಲ್ಲ. ಕೂಲಿ ಕೆಲಸ ಮಾಡಿ ಸಾಕಿದ್ದಾರೆ. ಇದೀಗ ಇ ಕಾಮರ್ಸ್ ಕೆಲಸ ಎಂದರೆ ಅರ್ಥವಾಗಿಲ್ಲ. ಈ ಶ್ರೀಮಂತಿಕೆ ಹಿಂದೆ ಮಾಫಿಯಾ ದುಡ್ಡು ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಹೇಳಿಲ್ಲ. ಅವರ ಮುಂದೆ ಸಾಮಾನ್ಯರಂತೆ ಇರುವುದು ನನಗೆ ಇಷ್ಟ. ಅವರು ಸಂತೋಷದಿಂದ ಇದ್ದಾರೆ ಇಷ್ಟು ಸಾಕು ಎನ್ನುತ್ತಿದ್ದಾನೆ ಗಿಸೆಪ್ ಫ್ಯೂರೆಂಟಿನೋ. 

ಸಿಸಿಲಿಯಿಂದ ಬಂದವರು ಶ್ರೀಮಂತರಾಗಿದ್ದಾರೆ ಎಂದರೆ ಎಲ್ಲರೂ ಮಾಫಿಯಾ ಹಣ ಎಂದೇ ಭಾವಿಸುತ್ತಾರೆ. ಹೀಗಾಗಿ ನಾನು ಹೇಳುವ ಪ್ರಯತ್ನ ಮಾಡಿಲ್ಲ ಎಂದು ಗಿಸೆಪ್ ಫ್ಯೂರೆಂಟಿನೋ ಹೇಳಿದ್ದಾರೆ.
 

Follow Us:
Download App:
  • android
  • ios