ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

ಭಾರತ ಅಸಮಾನತೆಯ ದೇಶ. ಕೆಲವರ ಕೈನಲ್ಲಿ ಹಣ ಕುಣಿದಾಡ್ತಿದ್ರೆ ಮತ್ತೆ ಕೆಲವರ ಕೈನಲ್ಲಿ ಬಿಡಿಗಾಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶ್ರೀಮಂತ ಜನರು ದೇಶ ಬಿಡ್ತಿದ್ದಾರೆ. ಪಾಶ್ಚಾತ್ಯ ದೇಶದಲ್ಲಿ ಹೂಡಿಕೆ ಮಾಡುವ ಮೂಲಕ ಅಲ್ಲಿನ ಪೌರತ್ವ ಪಡೆಯುತ್ತಿದ್ದಾರೆ.
 

Indias Billionaires Are Giving Up Their Countrys Citizenship

ಭಾರತದಲ್ಲಿ ಶ್ರೀಮಂತರ ಸಂಖ್ಯೆಗೇನೂ ಕಡಿಮೆಯಿಲ್ಲ. ಆದ್ರೆ ಈ ಶ್ರೀಮಂತದಲ್ಲಿ ದೊಡ್ಡ ಬದಲಾವಣೆಯೊಂದು ಈಗ ಕಾಣಿಸ್ತಿದೆ. ಅನೇಕ ಶ್ರೀಮಂತರ ನಮ್ಮ ದೇಶವನ್ನು ತೊರೆಯುತ್ತಿದ್ದಾರೆ. ಅದಕ್ಕೆ ಅವರು ರೆಸಿಡೆನ್ಸಿ ಬಾಯ್ ಇನ್ವೆಸ್ಟ್ಮೆಂಟ್ ( ಹೂಡಿಕೆ ಮೂಲಕ ನಿವಾಸ) ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಭಾರತೀಯ ಪೌರತ್ವವನ್ನು ತ್ಯಜಿಸಿದ ಈ ಶ್ರೀಮಂತರನ್ನು ಹೆಚ್ ಎನ್ ಐ ಅಥವಾ ಡಾಲರ್ ಮಿಲಿಯನೇರ್ ಎಂದು ಕರೆಯಲಾಗುತ್ತದೆ. ನಾವಿಂದು ಹೂಡಿಕೆ ಮೂಲಕ ನಿವಾಸ ಅಂದ್ರೇನು ಹಾಗೆ ಅದಕ್ಕೆ ನಮ್ಮ ಬಳಿ ಎಷ್ಟು ಆಸ್ತಿ ಹೊಂದಿರಬೇಕು, ಹಾಗೆ ಮಿಲಿಯನೇರ್ ಗಳು ಭಾರತವನ್ನು ತ್ಯಜಿಸಲು ಕಾರಣವೇನು ಎಂಬುದನ್ನು ನಿಮಗೆ ಹೇಳ್ತೇವೆ.

ಭಾರತ (India) ದ ನಾಗರಿಕತೆ ತ್ಯಜ್ಯಿಸಿದ್ದಾರೆ ಇಷ್ಟೊಂದು ಜನ : ನಿಮಗೆ ಅಚ್ಚರಿಯಾಗ್ಬಹುದು ಆದ್ರೆ ಈ ಅಂಕಿ ಸತ್ಯವಾಗಿದೆ. ವಿದೇಶಾಂಗ (Foreign) ವ್ಯವಹಾರಗಳ ಸಚಿವಾಲಯದ ಪ್ರಕಾರ, 2022 ರಲ್ಲಿ 2 ಲಕ್ಷದ 25 ಸಾವಿರ ಭಾರತೀಯರು, ಭಾರತದ ಪೌರತ್ವವನ್ನು ತ್ಯಜಿಸಿದ್ದಾರೆ. ಪೌರತ್ವ (Citizenship) ತ್ಯಜಿಸುವ ವಿಷ್ಯದಲ್ಲಿ 2011 ರಿಂದ 2022 ರವರೆಗಿನ ಸಂಖ್ಯೆ ನೋಡಿದ್ರೆ ಇದು ಅತ್ಯಧಿಕವಾಗಿದೆ.

ಯುಪಿಐ ಪಾವತಿ ಅಪ್ಲಿಕೇಷನ್ ಬಳಸುತ್ತಿದ್ದೀರಾ? ಹಾಗಾದ್ರೆ ಮರೆಯದೆ ಈ 5 ಟಿಪ್ಸ್ ಫಾಲೋ ಮಾಡಿ  

ಶ್ರೀಮಂತ (Rich) ರು ಭಾರತವನ್ನು ತೊರೆಯಲು ಪ್ರಮುಖ ಕಾರಣವೇನು ಗೊತ್ತಾ? : ಭಾರತವನ್ನು ತೊರೆಯಲು ನಾನಾ ಕಾರಣವಿದೆ. ಅದ್ರಲ್ಲಿ ಮುಖ್ಯವಾಗಿ ಉತ್ತಮ ಅವಕಾಶ, ಆರೋಗ್ಯ ರಕ್ಷಣೆ, ಉತ್ತಮ ಜೀವನ ಮಟ್ಟ ಮತ್ತು ಉತ್ತಮ ಶಿಕ್ಷಣ ಸೇರಿದಂತೆ ಅನೇಕ ಕಾರಣಕ್ಕೆ ಜನರು ದೇಶವನ್ನು ತೊರೆಯುತ್ತಿದ್ದಾರೆ. 2019ರಲ್ಲಿ ಕುಟುಂಬವೊಂದು ಭಾರತವನ್ನು ತೊರೆದು ಕೆನಡಾಕ್ಕೆ ಪ್ರಯಾಣ ಬೆಳೆಸಿತ್ತು. ಐದು ವರ್ಷಗಳ ಕಾಲ ಕೆನಡಾದಲ್ಲಿ ನೆಲೆ ನಿಂತ ಕುಟುಂಬ 2022ರಲ್ಲಿ ಕಾಯಂ ಪೌರತ್ವಕ್ಕೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಕಾರಣವೇನು ಎಂಬುದನ್ನು ಕೂಡ ಕುಟುಂಬ ಹೇಳಿದೆ. ಮಗುವಿನ ಶಾಲೆಯನ್ನು ಆಗಾಗ ಬದಲಿಸುವುದು ಸರಿಯಲ್ಲವೆಂದು ಒಂದು ಕಾರಣ ನೀಡಿದ ಕುಟುಂಬ ಇದ್ರ ಜೊತೆ ಆಘಾತಕಾರಿ ಸಂಗತಿ ಹೇಳಿದೆ. ಅದೇನೆಂದ್ರೆ ಭಾರತದ ಮಾಲಿನ್ಯ. ಕುಟುಂಬ ದೆಹಲಿಯಲ್ಲಿ ವಾಸ ಮಾಡ್ತಿದ್ದ ವೇಳೆ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತಂತೆ. ಕೆನಡಾಕ್ಕೆ ಬಂದ್ಮೇಲೆ ಉಸಿರಾಟದ ಸಮಸ್ಯೆಯಿಲ್ಲವಂತೆ. ಭಾರತಕ್ಕೆ ಹೋಲಿಸಿದ್ರೆ ಕೆನಡಾದಲ್ಲಿ ಶುದ್ಧ ಗಾಳಿಯಿದೆ ಎನ್ನುತ್ತದೆ ಕುಟುಂಬ. 

ಯಾರು ಪೌರತ್ವ ಬದಲಿಸಬಹುದು? : ಮೊದಲೇ ಹೇಳಿದಂತೆ ಶ್ರೀಮಂತರು ಭಾರತ ಬಿಟ್ಟು ಬೇರೆ ದೇಶದ ಪೌರತ್ವ ಪಡೆಯುತ್ತಿದ್ದಾರೆ. ಇವರನ್ನು ಹೆಚ್ ಎನ್ ಐ ಎಂದು ಕರೆಯಲಾಗುತ್ತದೆ. ಹೆಚ್ ಎನ್ ಐ ಗಳು ಅಂದ್ರೆ ಅವರ ಒಟ್ಟೂ ಆಸ್ತಿ ಒಂದು ಮಿಲಿಯನ್ ಡಾಲರ್ಗಿಂತ ಹೆಚ್ಚಿರಬೇಕು. ಒಂದು ಮಿಲಿಯನ್ ಡಾಲರ್ ಅಂದ್ರೆ ಸುಮಾರು 8. 2 ಕೋಟಿ ರೂಪಾಯಿಯಾಗಿರುತ್ತದೆ. ಭಾರತದಲ್ಲಿ ಇಷ್ಟು ಆಸ್ತಿ ಹೊಂದಿರುವವರ ಸಂಖ್ಯೆ ಸುಮಾರು 3 ಲಕ್ಷ 47 ಸಾವಿರವಿದೆ. ದೆಹಲಿ, ಮುಂಬೈ ಸೇರಿದಂತೆ ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಪುಣೆ, ಚೆನ್ನೈ, ಗುರ್ಗಾಂವ್ ಮತ್ತು ಅಹಮದಾಬಾದ್ ನಗರ ಪ್ರದೇಶದ ಜನರನ್ನು ಮಾತ್ರ 2021ರಲ್ಲಿ ಲೆಕ್ಕ ಹಾಕಿ ಈ ಮಾಹಿತಿ ನೀಡಲಾಗಿದೆ.  

Business Ideas : ಈ ವ್ಯಾಪಾರ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ ವಿಷಯದಲ್ಲಿ ಭಾರತ  ಅಮೆರಿಕ, ಚೀನಾ ಮತ್ತು ಜಪಾನ್ ನಂತರ ನಾಲ್ಕನೇ ಸ್ಥಾನದಲ್ಲಿದೆ. ಈ ವ್ಯಕ್ತಿಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.  
ಕಳೆದ ಕೆಲ ವರ್ಷಗಳಲ್ಲಿ ಅಮೆರಿಕಾದ EB-5 ವೀಸಾಗೆ ಬೇಡಿಕೆ ಹೆಚ್ಚಾಗಿದೆ. ಆಸ್ಟ್ರೇಲಿಯಾದ ಗ್ಲೋಬಲ್ ಟ್ಯಾಲೆಂಟ್ ಇಂಡಿಪೆಂಡೆಂಟ್ ವೀಸಾ, ಪೋರ್ಚುಗಲ್‌ನ ಗೋಲ್ಡನ್ ವೀಸಾ ಮತ್ತು ಗ್ರೀಸ್‌ನ ರೆಸಿಡೆನ್ಸ್ ಬೈ ಇನ್ವೆಸ್ಟ್‌ಮೆಂಟ್ ಪ್ರೋಗ್ರಾಂ ಸಾಕಷ್ಟು ಪ್ರಸಿದ್ಧವಾಗಿದೆ. ಹೂಡಿಕೆ ನಿವಾಸಿಗಳಿಗೆ ಇಷ್ಟೊಂದು ಹಣ ಏಕೆ ಬೇಕು ಎಂದು ನೀವು ಪ್ರಶ್ನೆ ಕೇಳಬಹುದು. ದೇಶದ ಖಾಯಂ ನಿವಾಸಿಯಾಗಲು ಆಸ್ತಿಯನ್ನು ಖರೀದಿ ಮಾಡ್ಬೇಕಾಗುತ್ತದೆ. ಇದು ಬೇರೆ ಬೇರೆ ದೇಶದಲ್ಲಿ ಬೇರೆಬೇರೆಯಾಗಿದೆ. ಪೋರ್ಚುಗಲ್ ನ ಪೌರತ್ವ ಪಡೆಯಲು 4. 5 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡುವ ಜೊತೆಗೆ 10 ಪೋರ್ಚುಗೀಸರಿಗೆ ಉದ್ಯೋಗ ನೀಡ್ಬೇಕು. 
 

Latest Videos
Follow Us:
Download App:
  • android
  • ios