ಮನೆ ಕೊಳ್ಳೋದು ಡೆಡ್ ಇನ್ವೆಸ್ಟ್‌ಮೆಂಟ್ ಅಂತಾರಲ್ಲ, ಹಾಗಾದ್ರೆ ಬಾಡಿಗೆ ಮನೆಯೇ ಬೆಸ್ಟಾ?

ಬಾಡಿಗೆ ಮನೆ ಹಾಗೂ ಸ್ವಂತ ಮನೆ ಇದ್ರಲ್ಲಿ ಯಾವುದು ಒಳ್ಳೆಯದು ಎನ್ನುವ ಪ್ರಶ್ನೆ ಅನೇಕ ಬಾರಿ ನಮ್ಮನ್ನು ಕಾಡುತ್ತದೆ. ಅವರವರ ಅನುಕೂಲಕ್ಕೆ ತಕ್ಕಂತೆ ಜನರು ಬಾಳ್ವೆ ಮಾಡಬೇಕಾದ ಕಾರಣ ಇಲ್ಲಿ ಯಾವುದೂ ಕೆಟ್ಟದ್ದಿಲ್ಲ. 
 

buying home or renting which brings profit best investment roo

ಸ್ವಂತಕ್ಕೊಂದು ಸೂರಿದ್ರೆ ಎಷ್ಟು ಚೆಂದ ಅಲ್ವಾ? ಪದೇ ಪದೇ ಈ ಬಾಡಿಗೆ ಮನೆ ಹುಡುಕಾಟ ನಡೆಸೋದು ಕಷ್ಟ. ಬಾಡಿಗೆ ಮನೆಗೆ ನೀಡುವ ಹಣವನ್ನೇ ಬಡ್ಡಿ ಕಟ್ಟಿದ್ರೂ ಹೊಸ ಮನೆ ಬರ್ತಾ ಇತ್ತು. ಮೊನ್ನೆಯಷ್ಟೇ ಅವರೊಂದು ಹೊಸ ಮನೆ ಖರೀದಿಸಿದ್ದಾರೆ, ಸ್ನೇಹಿತೆ ಹೊಸ ಮನೆ ಬುಕ್ ಮಾಡುವ ಪ್ಲಾನ್‌ನಲ್ಲಿದ್ದಾಳೆ… ಹೀಗೆ ಮನೆ ಖರೀದಿ ಬಗ್ಗೆ ಬಾಡಿಗೆ ಮನೆಯಲ್ಲಿರುವ ಪ್ರತಿಯೊಬ್ಬ ಮಹಿಳೆ ಮಾತನಾಡ್ತಾಳೆ. ಈಗಿನ ದುಬಾರಿ ಜೀವನದಲ್ಲಿ ಬಾಡಿಗೆ ಮನೆ ಅಥವಾ ಸ್ವಂತ ಮನೆ ಇದ್ರಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆ ಏಳುತ್ತದೆ. ದುಡಿಯುತ್ತಿರುವ ಮಹಿಳೆ ಆರ್ಥಿಕವಾಗಿ ಸ್ವಾತಂತ್ರವಾಗಿದ್ದರೂ, ಆಕೆ ಸ್ವಂತ ಮನೆ ಖರೀದಿಗೆ ಏಕಾಏಕಿ ನಿರ್ಧರಿಸುವುದು ಕಷ್ಟ. ಅರೆ ಕಾಲಿಕ ಕೆಲಸದಲ್ಲಿರಲಿ, ಸ್ವಂತ ವ್ಯಾಪಾರ ಮಾಡ್ತಿರಲಿ ಇಲ್ಲ ಸರ್ಕಾರಿ ಕೆಲಸದಲ್ಲಿರಲಿ, ಪ್ರತಿಯೊಬ್ಬ ಮಹಿಳೆ ಮನೆ ಖರೀದಿ ಮಾಡುವ ನಿರ್ಧಾರಕ್ಕೆ ಬರುವ ಮೊದಲು ಸ್ವಂತ ಮನೆ ಹಾಗೂ ಬಾಡಿಗೆ ಮನೆಯಲ್ಲಿ ಯಾವುದು ಬೆಸ್ಟ್ ಎಂಬುದನ್ನು ತಿಳಿಯಬೇಕು. 

ಮನೆ (Home) ಖರೀದಿ ಮಾಡುವುದು ಬಟ್ಟೆ ಖರೀದಿ (Purchase) ಮಾಡಿದಂತೆ ಅಥವಾ ಮನೆಯ ಯಾವುದೋ ವಸ್ತು ಖರೀದಿ ಮಾಡಿದಂತೆ ಅಲ್ಲ. ಅದನ್ನು ನೀವು ಸಾಮಾನ್ಯ ಶಾಪಿಂಗ್ (shopping) ಎಂದು ಪರಿಗಣಿಸಲು ಸಾಧ್ಯವಿಲ್ಲ. ಮನೆ ಖರೀದಿ ಮಾಡುವ ವೇಳೆ ದೊಡ್ಡ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಬ್ಯಾಂಕ್ ನಿಮಗೆ ಸಾಲ ನೀಡುತ್ತದೆಯಾದ್ರೂ ಅದು ಶೇಕಡಾ 80ರಷ್ಟು ಸಾಲವನ್ನು ಮಾತ್ರ ನೀಡುತ್ತದೆ. ಉಳಿದ ಹಣವನ್ನು ನೀವೇ ಹೊಂದಿಸಿಕೊಳ್ಳಬೇಕು. ಅಷ್ಟು ಹಣ ನಿಮ್ಮಲ್ಲಿ ಇದ್ಯಾ ಎಂಬುದನ್ನು ನೀವು ಮೊದಲು ಗಮನಿಸಬೇಕು.

ವೃತ್ತಿಜೀವನಕ್ಕೆ ಗಡಿಯಾರವಿಲ್ಲ, ಚಿಂತೆ ಬಿಟ್ಟು ಕೆಲಸದಲ್ಲಿ ಮುಂದುವರಿಯಿರಿ;ಉದ್ಯೋಗಸ್ಥ ಮಹಿಳೆಗೆ ವಿನೀತಾ ಸಿಂಗ್ ಸಲಹೆ

ಮನೆ ಖರೀದಿ ವಿಷ್ಯ ಬಂದಾಗ ವಿವಾಹಿತ ಮಹಿಳೆ ಹಾಗೂ ಒಂಟಿ ಮಹಿಳೆಯನ್ನು ಬೇರೆ ಬೇರೆಯಾಗಿ ನೋಡಬೇಕಾಗುತ್ತದೆ. ವಿವಾಹಿತ ಮಹಿಳೆ ಮನೆ ಖರೀದಿ ಮಾಡುವುದು ಸುಲಭವಲ್ಲ. ಆಕೆ ಜೊತೆ ಆಕೆ ಸಂಸಾರ ಕೂಡ ಇರುವುದರಿಂದ ಅವರ ಖರ್ಚು – ವೆಚ್ಛಗಳು, ಮನೆ ಖರೀದಿ ಸಮಯದಲ್ಲಿ ಬರುವ ಸಮಸ್ಯೆ, ಉಳಿತಾಯದ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ. ಅದೇ ಒಂಟಿ ಮಹಿಳೆಯಾಗಿದ್ದರೆ ಕೆಲಸ ಸಿಕ್ಕ ತಕ್ಷಣ ಒಂದು ಮೊತ್ತವನ್ನು ಉಳಿತಾಯಕ್ಕೆ ಮೀಸಲಿಟ್ಟು, ಮನೆ ಖರೀದಿಗೆ ಪ್ಲಾನ್ ಶುರು ಮಾಡಬಹುದು. 

ಸ್ವಂತ ಮನೆ ಅಥವಾ ಬಾಡಿಗೆ ಮನೆ ಇದ್ರಲ್ಲಿ ಯಾವುದು ಬೆಸ್ಟ್ ಎಂಬ ಚರ್ಚೆಗಿಂತ ಯಾವಾಗ ಯಾವುದು ಬೆಸ್ಟ್ ಎಂಬ ಬಗ್ಗೆ ಫೋಕಸ್ ಮಾಡ್ಬೇಕು ಎನ್ನುತ್ತಾರೆ ತಜ್ಞರು. ನೀವು ದೀರ್ಘಕಾಲ ವಾಸ ಮಾಡಬೇಕಾದ ಸ್ಥಳ ನಿರ್ಧಾರವಾದ್ಮೇಲೆ ಅಲ್ಲಿಯೇ ಮನೆ ಖರೀದಿಗೆ ಪ್ಲಾನ್ ಮಾಡಬಹುದು. ತಜ್ಞರ ಪ್ರಕಾರ, ಒಂಟಿ ಮಹಿಳೆ ಅವಶ್ಯವಾಗಿ ಸ್ವಂತ ಮನೆ ಖರೀದಿ ಮಾಡಬೇಕು. ಆಕೆ ವಾಸಮಾಡಲು ಇಷ್ಟಪಡುವ, ಆಕೆಗೆ ಯೋಗ್ಯವೆನ್ನಿಸಿರುವ ಜಾಗದಲ್ಲಿ ಮನೆ ಖರೀದಿ ಮಾಡಬೇಕು. ಒಂಟಿ ಮಹಿಳೆಯರು ಭವಿಷ್ಯದ ಸುರಕ್ಷತೆಗಾಗಿಯೂ ಮನೆ ಖರೀದಿ ಮಾಡುವುದು ಮುಖ್ಯವಾಗುತ್ತದೆ. 

ಅಬ್ಬಬ್ಬಾ..ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಮಕ್ಕಳ ಮದ್ವೆಗೆ ಖರ್ಚು ಮಾಡಿರೋದು ಇಷ್ಟೊಂದು ಕೋಟಿನಾ?

ನಗರ ಪ್ರದೇಶದಲ್ಲಿ ಬಾಡಿಗೆ ಮನೆ ಸಿಗೋದು ಈಗ ಕಷ್ಟ. ಲಿವ್ ಇನ್ ನಲ್ಲಿರುವ ಜನರಿಗೆ ಬಾಡಿಗೆ ಮನೆ ಹುಡುಕೋದು ಕಷ್ಟ. ಪದೇ ಪದೇ ಬಾಡಿಗೆ ಮನೆ ಹುಡುಕಾಟ, ಮನೆ ಬದಲಾವಣೆ, ಮಾಲೀಕರ ಜೊತೆ ಕಿತ್ತಾಟ ಒಂದು ವಯಸ್ಸಿನ ನಂತ್ರ ಕಷ್ಟವಾಗುತ್ತದೆ. ವಯಸ್ಸಾದಂತೆ ಸ್ವಂತಕ್ಕೊಂದು ಮನೆ ಬೇಕು ಎನ್ನುವ ಹಂಬಲ ಹೆಚ್ಚಾಗುತ್ತದೆ. ಅಂತಿಮವಾಗಿ ಹೇಳೋದಾದ್ರೆ ಮನೆ ಖರೀದಿಸುವುದು ಅಥವಾ ಮನೆ ಬಾಡಿಗೆಗೆ ನೀಡುವುದು ಯಾವುದೇ ಪುರುಷ ಅಥವಾ ಮಹಿಳೆಯ ಸಂಪೂರ್ಣ ವೈಯಕ್ತಿಕ ನಿರ್ಧಾರವಾಗಿದೆ. ಈ ನಿರ್ಧಾರವು ಅವನ ವಿವಿಧ ಅಗತ್ಯಗಳು, ಅಂಶಗಳು ಮತ್ತು ಸಂದರ್ಭಗಳನ್ನು ಅವಲಂಬಿಸಿರುತ್ತದೆ.

Latest Videos
Follow Us:
Download App:
  • android
  • ios