ವೃತ್ತಿಜೀವನಕ್ಕೆ ಗಡಿಯಾರವಿಲ್ಲ, ಚಿಂತೆ ಬಿಟ್ಟು ಕೆಲಸದಲ್ಲಿ ಮುಂದುವರಿಯಿರಿ;ಉದ್ಯೋಗಸ್ಥ ಮಹಿಳೆಗೆ ವಿನೀತಾ ಸಿಂಗ್ ಸಲಹೆ

ವೃತ್ತಿಜೀವನಕ್ಕೆ ಗಡಿಯಾರವಿಲ್ಲ. ಸಂಸಾರ, ಮಕ್ಕಳ ಕಾರಣದಿಂದ ಅಲ್ಲಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡರೂ ಚಿಂತಿಸಬೇಡಿ. ಇನ್ನೊಬ್ಬರೊಂದಿಗೆ ಹೋಲಿಕೆ ಬಿಟ್ಟು, ನಿಮ್ಮಿಷ್ಟದ ಕ್ಷೇತ್ರದಲ್ಲಿ ಮುಂದುವರಿಯಿರಿ ಎಂದು ಉದ್ಯಮಿ ವಿನೀತಾ ಸಿಂಗ್ ಉದ್ಯೋಗಸ್ಥ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. 
 

Shark Vineeta Singh shares a piece of advice for all working women writes There is no career clock anu

ನವದೆಹಲಿ (ಏ.22): ಗಂಡ, ಮನೆ, ಮಕ್ಕಳು ಇದರ ಹೊರತಾಗಿ ಬದುಕಿನಲ್ಲಿ ಏನಾದ್ರೂ ಸಾಧಿಸಬೇಕೆಂಬ ಹಂಬಲ ಹೊಂದಿರುವ ಎಲ್ಲ ಮಹಿಳೆಯರಿಗೆ  ಕಾಸ್ಮೆಟಿಕ್ ಬ್ರ್ಯಾಂಡ್ ಶುಗರ್‌ನ ಸಿಇಒ ವಿನೀತಾ ಸಿಂಗ್ ಸಾಧನೆ ಪ್ರೇರಣೆಯಾಗಬಲ್ಲದು. ಪತ್ನಿ, ತಾಯಿ, ಉದ್ಯಮಿಯಾಗಿ ವಿನೀತಾ ಸಿಂಗ್ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸೋ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅನೇಕ ಮಹಿಳೆಯರು 
ಜೀವನದಲ್ಲಿ ಇಷ್ಟೆಲ್ಲ ಜವಾಬ್ದಾರಿಗಳನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂದು ಅಚ್ಚರಿ ಪಡುತ್ತಿದ್ದಾರೆ ಕೂಡ. ಇನ್ನು ವಿನೀತಾ ಸಿಂಗ್, ಉದ್ಯಮಶೀಲತೆ, ತಾಯ್ತನ, ಸ್ವ-ಕಾಳಜಿ ಹಾಗೂ ಇನ್ನೂ ಅನೇಕ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಜೊತೆಗೆ ಉತ್ತಮ ಸಲಹೆಗಳನ್ನು ಕೂಡ ನೀಡುತ್ತಿರುತ್ತಾರೆ. ಇತ್ತೀಚಿನ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ವಿನೀತಾ ಸಿಂಗ್, ಸಮಯ ಸಾಕಾಗುತ್ತಿಲ್ಲ ಎಂಬ ಕೊರಗು ಹೊಂದಿರುವ ಎಲ್ಲ ಉದ್ಯೋಗಸ್ಥ ಮಹಿಳೆಯರಿಗೆ ಪ್ರೇರಣೆ ನೀಡುವಂತಹ ಸಲಹೆ ನೀಡಿದ್ದಾರೆ. 

ಜೈವಿಕ ಹಾಗೂ ವೃತ್ತಿ ಗಡಿಯಾರಗಳು ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ ಎಂಬುದು ಅನೇಕ ಮಹಿಳೆಯರನ್ನು ಕಾಡುತ್ತಿರುವ ಭಯ. ಒಂದಕ್ಕೆ ಮಹತ್ವ ನೀಡಿ ಅದರ ಹಿಂದೆ ಹೋದ್ರೆ ಇನ್ನೊಂದಕ್ಕೆ ಸಮಯ ಸಾಲುವುದಿಲ್ಲ. ಇದು ವೃತ್ತಿನಿರತ ಹಲವು ಮಹಿಳೆಯರ ಸಮಸ್ಯೆ. ಇದಕ್ಕೆ ವಿನೀತಾ ಸಿಂಗ್ ಅವರ ಇತ್ತೀಚಿನ ಪೋಸ್ಟ್ ಪರಿಹಾರ ನೀಡಿದೆ. 'ಮಹಿಳೆಯರೇ, ನಿಮ್ಮ ಜೈವಿಕ ಗಡಿಯಾರ ಹಾಗೂ ವೃತ್ತಿ ಗಡಿಯಾರ ಎರಡೂ ಸಂಘರ್ಷದಲ್ಲಿಲ್ಲ! ವೃತ್ತಿ ಗಡಿಯಾರ ಅನ್ನೋದು ಇಲ್ಲವೇ ಇಲ್ಲ. ವೃತ್ತಿ ಬದುಕು ದಶಕಗಳ ತನಕ ಇರುತ್ತದೆ. ಇನ್ನು ನೀವು ನಿಮ್ಮ ಸಮಾನ ವಯಸ್ಕರ ಜೊತೆಗೆ ಹೋಲಿಕೆ ಮಾಡಿಕೊಳ್ಳೋದ್ರಿಂದ ದೂರ ಉಳಿದರೆ, ಖಂಡಿತಾ ಅಲ್ಲಿ ಯಾವುದೇ ಓಟ ಅಥವಾ ಗಡಿಯಾರ ಇಲ್ಲ' ಎಂದು ವಿನೀತಾ ಸಿಂಗ್ ತಿಳಿಸಿದ್ದಾರೆ. 

1 ಕೋಟಿಯ ಕೆಲಸ ತಿರಸ್ಕರಿಸಿ ತನ್ನದೇ ಬ್ರ್ಯಾಂಡ್‌ ನಿರ್ಮಿಸಿದ ವಿನಿತಾ ಸಿಂಗ್!

ಇನ್ನು ಈ ಪೋಸ್ಟ್ ನಲ್ಲಿ ವಿನೀತಾ ಸಿಂಗ್ ತಮ್ಮ ಜೀವನದ ಅನುಭವಗಳನ್ನು ಕೂಡ ಹಂಚಿಕೊಂಡಿದ್ದಾರೆ. ವಿನೀತಾ ಸಿಂಗ್ ತಮ್ಮ ವೃತ್ತಿಜೀವನದ ಹಾದಿಯನ್ನು ನಿರ್ಧರಿಸುವ ಸಮಯದಲ್ಲೇ ಅವರ ಮಗುವಿನ ಆಗಮನವಾಯಿತು. 'ಶುಗರ್‌ ಮೊದಲ ಉತ್ಪನ್ನ ಮಾರುಕಟ್ಟೆಗೆ ಬಂದ ಸಮಯದಲ್ಲೇ ನಾನು ನನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದೆ. ಆ ಸಮಯದಲ್ಲಿ ನನ್ನ ಆಯ್ಕೆ ಬಗ್ಗೆ ನನಗೆ  ಆತ್ಮವಿಶ್ವಾಸ ಇರಲಿಲ್ಲ. ಆದರೆ, ಇತ್ತೀಚೆಗೆ ನನ್ನ ತಂದೆ ಸಂಶೋಧನೆಯಲ್ಲಿ 50 ವರ್ಷ ಪೂರ್ಣಗೊಳಿಸಿದ್ದಾರೆ. ಇದು ನನಗೆ ನಾನು ಕೂಡ ಉದ್ಯಮದಲ್ಲಿ 50 ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕು ಎಂಬ ಭಾವನೆ ಮೂಡಿಸಿದೆ. ಹಾಗೆಯೇ ನಾನು ವರ್ಷಗಳನ್ನು ಲೆಕ್ಕ ಹಾಕಲು ಪ್ರಾರಂಭಿಸಿದ್ದೇನೆ. ಇಂಥ ಸಮಯದ ಮಾಪಕದಲ್ಲಿ, ಗಡಿಯಾರ, ಓಟ, ಕೆಲವು ತಿಂಗಳ ವ್ಯತ್ಯಾಸ ಕ್ಷುಲ್ಲಕವೆನಿಸುತ್ತದೆ' ಎಂದು ವಿನೀತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉದ್ಯಮ ಪ್ರಾರಂಭಿಸಲು ಕನಿಷ್ಠ ಎಷ್ಟು ಬಂಡವಾಳ ಬೇಕು? ಸ್ಟಾರ್ಟ್ ಅಪ್ ಪ್ರಾರಂಭಿಸೋರಿಗೆ ವಿನೀತಾ ಸಿಂಗ್ ಟಿಪ್ಸ್ ಹೀಗಿದೆ

ಇನ್ನು ವಿನೀತಾ ಮಹಿಳೆಯರಿಗೆ ಸಲಹೆ ನೀಡಿದ್ದು, 'ವೃತ್ತಿಪರ ಮೈಲಿಗಲ್ಲುಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಬದಲಿಗೆ ನೀವು ಇಷ್ಟಪಡುವ ವೃತ್ತಿಯಲ್ಲಿ ವರ್ಷಗಳು ಅಲ್ಲ ದಶಕಗಳ ಕಾಲ ಇರುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಇನ್ನು ಇದೇ ಸಮಯದಲ್ಲಿ ಯಾರು ಯಾವ ವೇತನ, ಹುದ್ದೆ, ಈಕ್ವಿಟಿ ಹೊಂದಿದ್ದಾರೆ ಇತ್ಯಾದಿ ಗಣನೆಗೆ ಬರೋದಿಲ್ಲ. ಹೋಲಿಕೆ ಅಸಂತೋಷಕ್ಕೆ ಕಾರಣವಾಗಬಲ್ಲದು. ಇನ್ನು ನಿಮ್ಮನ್ನು ಸಮಯದ ಪರಿಧಿಯಲ್ಲಿಟ್ಟು ತೂಗುವುದು ಇದಕ್ಕೆ ಪರಿಹಾರ ಕೂಡ ಅಲ್ಲ. ಹಾಗೆಯೇ ಹೋಲಿಕೆ ಮಾಡಿಕೊಳ್ಳುವುದು ಕೂಡ ಪರಿಹಾರವಲ್ಲ. ತಪ್ಪಾದ ವೃತ್ತಿ ಬದುಕಿನಲ್ಲಿ ಮುಂದುವರಿಯುವ ಬಗ್ಗೆ ಚಿಂತೆ ಮಾಡಿ. ಆದರೆ, ವೇಗದ ಬಗ್ಗೆ ಅಥವಾ ಅಲ್ಲಿ ಅಥವಾ ಇಲ್ಲಿ ಕೆಲವು ಸಮಯ ನಿಲ್ಲುವ ಬಗ್ಗೆ ಹೆಚ್ಚು ಯೋಚಿಸಬೇಡಿ' ಎಂದು ವಿನೀತಾ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios