ಬೆಂಗಳೂರು(ಜು.09): ನಂದಿನಿ ಪನ್ನೀರ್‌ ಬಳಕೆ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸಲು ಕೆಎಂಎಫ್‌ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ 85 ರು. ಮೌಲ್ಯದ ಪ್ರತಿ 200 ಗ್ರಾಂ ನಂದಿನಿ ಪನ್ನೀರ್‌ ಖರೀದಿಸುವವರಿಗೆ 75 ರು. ಮೌಲ್ಯದ 100 ಗ್ರಾಂ ನಂದಿನಿ ಚೀಸ್‌ ಸ್ಲೈಸ್‌ ಉಚಿತವಾಗಿ ನೀಡಲಿದೆ.

ಬುಧವಾರ ಈ ಯೋಜನೆಗೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಸಾಂಕೇತಿಕವಾಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ ಯೋಜನೆ ಜುಲೈ 8 ರಿಂದ ಐದು ದಿನಗಳಿಗೆ ಮಾತ್ರ ಸೀಮಿತವಾಗಿದ್ದು ಸುಮಾರು 12 ಮೆಟ್ರಿಕ್‌ ಟನ್‌ ನಂದಿನಿ ಚೀಸ್‌ ಸ್ಲೈಸ್‌ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

 3 ತಿಂಗಳು ಕೆಡದ ‘ನಂದಿನಿ ತೃಪ್ತಿ’ ಹಾಲು ಮಾರುಕಟ್ಟೆಗೆ!

ಚೀಸ್‌ನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್‌, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಾಗಿರುವುದರಿಂದ ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಹಲ್ಲುಗಳನ್ನು ಧೃಡಗಳಿಸಲು ಸಹಾಯಕಾರಿಯಾಗಿದೆ. ವಿಟಮಿನ್‌ ’ಬಿ’ ಅಂಶವು ರಕ್ತದೊತ್ತಡದ ತೊಂದರೆಗಳನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ ಎಂದು ಮಾಹಿತಿ ನೀಡಿದರು.

ವಿವಿಧ ಶ್ರೇಣಿಯಲ್ಲಿ ಲಭ್ಯ: 

ನಂದಿನಿ ಪನೀರ್‌ ಶ್ರೇಣಿ 1 ಕೆಜಿ, 200 ಗ್ರಾಂ ಪ್ಯಾಕ್‌ಗಳಲ್ಲಿ ಲಭ್ಯವಿದೆ. ಅಂತೆಯೇ ನಂದಿನಿ ಪ್ರೋಸೆಸ್ಡ್‌ ಚೀಸ್‌ ಬ್ಲಾಕ್‌ 200 ಗ್ರಾಂ, 500 ಗ್ರಾಂ, 1 ಕೆಜಿ, ನಂದಿನಿ ಪ್ರೋಸೆಸ್ಡ್‌ ಕ್ಯೂಬ್ಸ್‌ 200 ಗ್ರಾಂ, 500 ಗ್ರಾಂ, 1 ಕೆಜಿ ಹಾಗೂ ನಂದಿನಿ ಮೊಜ್ಹರೆಲ್ಲಾ ಬ್ಲಾಕ್‌ ಅಥವಾ ಶ್ರೇಡೆಡ್‌ ಚೀಸ್‌ 200 ಗ್ರಾಂ, 1 ಕೆಜಿ, ನಂದಿನಿ ಸ್ಲೈಸ್‌ ಚೀಸ್‌- 100ಗ್ರಾಂ, 200 ಗ್ರಾಂ, 750 ಗ್ರಾಂ ಗಳಲ್ಲಿ ಗ್ರಾಹಕರಿಗೆ ಸಿಗಲಿದೆ.