MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 1 ವರ್ಷದ ಯುಟ್ಯೂಬ್‌ ಆದಾಯವನ್ನು, ಬ್ಯುಸಿನೆಸ್‌ನಲ್ಲಿ 1 ತಿಂಗಳಿಗೆ ದುಡಿತೀನಿ:‌ ಪ್ರಗ್ನೆನ್ಸಿ ಟ್ರೋಲ್ ಬಗ್ಗೆ ಮಧು ಗೌಡ

1 ವರ್ಷದ ಯುಟ್ಯೂಬ್‌ ಆದಾಯವನ್ನು, ಬ್ಯುಸಿನೆಸ್‌ನಲ್ಲಿ 1 ತಿಂಗಳಿಗೆ ದುಡಿತೀನಿ:‌ ಪ್ರಗ್ನೆನ್ಸಿ ಟ್ರೋಲ್ ಬಗ್ಗೆ ಮಧು ಗೌಡ

Youtuber Madhu Gowda: ಕನ್ನಡ ಯುಟ್ಯೂಬರ್‌ ಮಧು ಗೌಡ, ಪ್ರಗ್ನೆನ್ಸಿ ವಿಡಿಯೋ ಮಾಡಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಇವರೊಬ್ಬರೇ ತಾಯಿ ಆಗ್ತಿರೋದಾ? ಮಗು ಹೆರೋದಾ ಎಂದು ಅನೇಕರು ಕಾಮೆಂಟ್‌ ಮಾಡಿದ್ದರು, ಟ್ರೋಲ್‌ ಮಾಡಿದ್ದರು. ಇದಕ್ಕೆ ಮಧು ಗೌಡ ಅವರು ತಿರುಗೇಟು ನೀಡಿದ್ದಾರೆ. 

2 Min read
Author : Padmashree Bhat
Published : Mar 20 2026, 02:49 PM IST
Share this Photo Gallery
  • FB
  • TW
  • Linkdin
  • Whatsapp
18
ಮಧು ಗೌಡ ಹೇಳಿದ್ದೇನು?
Image Credit : Asianet News

ಮಧು ಗೌಡ ಹೇಳಿದ್ದೇನು?

ನನ್ನ ಪ್ರಗ್ನೆನ್ಸಿ ರಿವೀಲ್ ವಿಡಿಯೋಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ಮಾತಾಡಿದ್ರು. ಅದರ ವಿಚಾರದ ಬಗ್ಗೆ 99% ಜನ ಪಾಸಿಟಿವ್ ಆಗಿ ಮಾತಾಡಿದ್ದೀರಾ. ನಾವು ಪ್ರಗ್ನೆನ್ಸಿ ವಿಡಿಯೋ ರಿವೀಲ್ ಮಾಡಿದ್ ತಕ್ಷಣ ಕೆಲವೊಬ್ಬರು ವಿಡಿಯೋಗಳನ್ನು ಮಾಡಿ ಹಾಕಿದ್ದಾರೆ.

28
ಯಾರು ಮಗು ಹೆತ್ತಿಲ್ವಾ? ಇವಳೊಬ್ಬಳೇ ಹೆರೋದಾ?
Image Credit : madhu gowda instagram

ಯಾರು ಮಗು ಹೆತ್ತಿಲ್ವಾ? ಇವಳೊಬ್ಬಳೇ ಹೆರೋದಾ?

ಯಾರೂ ಕೂಡ ಪ್ರಪಂಚದಲ್ಲಿ ಆಗದೆ ಇರೋ ಥರ ತಾಯಿ ಆಗ್ತಾ ಇದಾಳೆ ಇವಳು. ಯಾರು ಮಗು ಹೆತ್ತಿಲ್ವಾ? ಮಗು ಹುಟ್ಟೋಕೂ ಮುಂಚೆನೇ ಹಿಂಗೆ, ಇನ್ನು ಮಗು ಆದ್ಮೇಲೆ ಹೆಂಗಪ್ಪ ಇವ್ರು. ಇಷ್ಟೊಂದು ಓವರ್, ಆಕ್ಷನ್, ಇಷ್ಟೊಂದು ಶೋ ಆಫ್. ಈ ಜಗತ್ತಿನಲ್ಲಿ ನಾನು ಮೊದಲು ತಾಯಿ ಆಗ್ತಿರೋದು, ನಾನೇ ಫಸ್ಟ್‌ ಮಗು ಹೆರುತ್ತಿರೋದು ಎಂದು ಹೇಳೋದಿಲ್ಲ. ತಾಯಿಯಾಗೋ ಫೀಲಿಂಗ್ ಆ ಖುಷಿ ಅದು ನಮಗೆ ಮಾತ್ರ ಗೊತ್ತಿರುತ್ತದೆ. 

ನೋಡೋರ ಕಣ್ಣಗೆ ಅದು ಅಷ್ಟು ಎಫೆಕ್ಟಿವ್ ಅಂತ ಅನಿಸೋದಿಲ್ಲ. ಆ ಭಾವನೆಗಳು ನಿಮ್ಮ ಫ್ಯಾಮಿಲಿಗಳಲ್ಲಿ ನಡೆದಿದ್ರೆ ಅದು ನಿಮಗೆ ಗೊತ್ತಿರುತ್ತೆ. ಈ ಪ್ರಪಂಚದಲ್ಲಿ ಕೋಟ್ಯಂತರ ಜನ ಹೆಣ್ಣು ಮಕ್ಕಳು, ತಾಯಿಯಂದಿರು ಆಗಿರ್ತಾರೆ. ಅವರ ಫ್ಯಾಮಿಲಿಗೆ ಮಾತ್ರ ಆ ಒಂದು ಕ್ಷಣ ಹೆಂಗೆ ಅನ್ಸುತ್ತೆ ಅಂತ ಮಾತ್ರ ಗೊತ್ತಿರುತ್ತದೆ.

Related Articles

Related image1
Youtuber Madhu Gowda: ಬೆಳೆದರೆ ಹೀಗ್‌ ಬೆಳಿಬೇಕ್!‌ ಹೊಸ ಸಾಹಸಕ್ಕಿಳಿದ ಅತ್ತಿಗೆ-ನಾದಿನಿ ಮಧು ಗೌಡ, ನಿಶಾ ರವೀಂದ್ರ!
Related image2
ಉಡುಪಿ ದೋಣಿ ದುರಂತಕ್ಕೆ ಬಲಿಯಾದ ಯುವತಿ ದಿಶಾ: ಗೆಳತಿಯ ಸಾವಿಗೆ ಕಣ್ಣೀರಿಟ್ಟ ಯೂಟ್ಯೂಬರ್ ಮಧು ಗೌಡ, ನಿಶಾ!
38
ಹೆಣ್ಣು ಮಕ್ಕಳೇ ಮಾತಾಡಿದ್ದಾರೆ
Image Credit : Asianet News

ಹೆಣ್ಣು ಮಕ್ಕಳೇ ಮಾತಾಡಿದ್ದಾರೆ

ತಂದೆ ಆಗೋ ಫೀಲಿಂಗ್ ಆಗಿರಬಹುದು ಅಥವಾ ತಾಯಿ ಆಗೋ ಫೀಲಿಂಗ್ ಆಗಿರಬಹುದು ಅವರಿಗೆ ಮಾತ್ರ ಅದು ಅನುಭವಕೆ ಮಾಡಲು ಸಾಧ್ಯ. ನಾನು ನೋಡಿದ ಮಟ್ಟಿಗೆ ಬಹುತೇಕ ಹೆಣ್ಣು ಮಕ್ಕಳು ಕಾಮೆಂಟ್‌ ಪಾಸ್‌ ಮಾಡಿದ್ದಾರೆ. ಒಂದು ಮಹಿಳೆ, ಇನ್ನೊಂದು ಮಹಿಳೆ ಬಗ್ಗೆ ಕಾಮೆಂಟ್‌ ಮಾಡಿರೋದು ಬೇಸರ ಉಂಟು ಮಾಡಿದೆ.

48
ನಿಶಾಗೆ ನಿಜಕ್ಕೂ ಖುಷಿ ಆಯ್ತು
Image Credit : madhu gowda instagram

ನಿಶಾಗೆ ನಿಜಕ್ಕೂ ಖುಷಿ ಆಯ್ತು

ನನ್ನ ನಾದಿನಿ ನಿಶಾ ಹೇಗೆ ರಿಯಾಕ್ಟ್‌ ಮಾಡಿದಳು ಎಂದು ಕೇಳಿದ್ರಿ, ಹಾಗೆಯೇ ನಾನು ವಿಡಿಯೋ ಮಾಡಿ ಹಾಕಿದೆ. ಅದನ್ನು ಕೆಲವರು ಇಮಿಟೇಟ್‌ ಮಾಡಿದರು. ಅತ್ತೆ ಆಗ್ತಾಳೆ ಎನ್ನುವ ಫೀಲಿಂಗ್ ಅವಳಿಗೆ ಮಾತ್ರ ಗೊತ್ತಿರುತ್ತದೆ. ಮಗು ಬರ್ತಾ ಇದೆ ಎಂದಾಗ ಫ್ಯಾಮಿಲಿಗೆ ಆಗುವ ಖುಷಿನೇ ಬೇರೆ. ನಿಖಿಲ್‌, ನಮ್ಮ ಫ್ಯಾಮಿಲಿಯಲ್ಲಿ ಇದು ಮೊದಲ ಮಗು.

58
ಸಿಂಪಲ್‌ ಆಗಿ ವಿಡಿಯೋ ಮಾಡಿದೆವು
Image Credit : Asianet News

ಸಿಂಪಲ್‌ ಆಗಿ ವಿಡಿಯೋ ಮಾಡಿದೆವು

ನಾನು ಮೂರು ತಿಂಗಳಿಂದ ಪ್ರಗ್ನೆನ್ಸಿ ವಿಷಯವನ್ನು ಎಲ್ಲಿಯೂ ಹೇಳಿರಲಿಲ್ಲ. ಆದರೆ ನೀವು ಪ್ರಗ್ನೆಂಟ್‌ ಹೌದೋ? ಇಲ್ಲವೋ ಎಂದು ಕೆಲವರು ಕಾಮೆಂಟ್‌ ಮಾಡಿದರು. ಇನ್ನು ಗ್ರ್ಯಾಂಡ್‌ ಆಗಿ ಕೂಡ ಸೆಟ್‌ ಹಾಕದೆ, ನಾವು ಸಿಂಪಲ್‌ ಆಗಿ, ನಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ವಿಡಿಯೋ ಮಾಡಿ ಹಾಕಿದೆ.

68
ಕಂಟೆಂಟ್‌ಗೋಸ್ಕರ ಪ್ರಗ್ನೆಂಟ್‌ ಆಗಿಲ್ಲ
Image Credit : Asianet News

ಕಂಟೆಂಟ್‌ಗೋಸ್ಕರ ಪ್ರಗ್ನೆಂಟ್‌ ಆಗಿಲ್ಲ

ಕಂಟೆಂಟ್‌ಗೋಸ್ಕರ ನಾನು ಪ್ರಗ್ನೆಂಟ್‌ ಆಗಿದ್ದೀನಿ ಎಂದು ಕೆಲವರು ಹೇಳಿದ್ದರು. ಯುಟ್ಯೂಬ್‌ ಚಾನೆಲ್‌ ಎತ್ತಬೇಕು ಎಂದು ಹೀಗೆ ಮಾಡಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ದಿನದಿಂದ ದಿನಕ್ಕೆ ಯುಟ್ಯೂಬ್‌ ವ್ಯೂಸ್‌ ಜಾಸ್ತಿ ಆಗಿದೆ. ಕೆಲ ತಿಂಗಳುಗಳ ಕಾಳ ನಾನು ವಿಡಿಯೋ ಹಾಕಿಲ್ಲವಾದರೂ ಕೂಡ ಒಳ್ಳೆಯ ವ್ಯೂಸ್‌ ಬಂದಿತ್ತು.

78
ಜೀ, ಕಲರ್ಸ್‌ನಿಂದ ಆಫರ್‌ ಬಂದಿತ್ತು
Image Credit : madhu gowda instagram

ಜೀ, ಕಲರ್ಸ್‌ನಿಂದ ಆಫರ್‌ ಬಂದಿತ್ತು

ಒಂದು ವರ್ಷದಲ್ಲಿ ಯುಟ್ಯೂಬ್‌ನಿಂದ ಸಿಗೋ ಹಣವನ್ನು, ಬ್ಯುಸಿನೆಸ್‌ನಲ್ಲಿ ಒಂದು ತಿಂಗಳಿನಲ್ಲೇ ದುಡಿಯುತ್ತೇನೆ. ಯುಟ್ಯೂಬ್‌ ನನ್ನ ಫ್ಯಾಷನ್‌ ಅಷ್ಟೇ. ದುಡ್ಡಿಗೋಸ್ಕರ ನಾವು ಯುಟ್ಯೂಬ್‌ ಮಾಡ್ತಿಲ್ಲ. ದುಡಿಯಬೇಕು ಎಂದಿದ್ದರೆ, ನಾನು ಕೇವಲ ಯುಟ್ಯೂಬ್‌ ಮಾಡಿಕೊಂಡು ಇರುತ್ತಿದ್ದೆ. ನನಗೆ ಜೀ, ಕಲರ್ಸ್‌ ಕನ್ನಡದಿಂದ ಕಪಲ್‌ ಶೋಗಳಿಂದ ಆಫರ್‌ ಬಂದ್ರೂ ಕೂಡ ನಾವು ಹೋಗಿರಲಿಲ್ಲ, ನನಗೆ ಟಿವಿ ಇಷ್ಟ, ಯುಟ್ಯೂಬ್‌ ಇಷ್ಟ.

88
ನೀವು ಯುಟ್ಯೂಬ್‌ ಮಾಡಿ, ಯಾರು ಬೇಡ ಅಂದ್ರು?
Image Credit : Instagram

ನೀವು ಯುಟ್ಯೂಬ್‌ ಮಾಡಿ, ಯಾರು ಬೇಡ ಅಂದ್ರು?

ನಾವು ನಿಮ್ಮ ಯುಟ್ಯೂಬ್‌ ವಿಡಿಯೋ ನೋಡೋದಿಕ್ಕೆ ನಿಮಗೆ ಹಣ ಬರುತ್ತದೆ ಎಂದು ಕೆಲವರು ಹೇಳಿದ್ದಾರೆ. ನೀವು ಯುಟ್ಯೂಬ್‌ ಮಾಡಿ, ಹಣ ಗಳಿಸಿ, ಅದನ್ನು ಬಿಟ್ಟು ಬೇರೆಯವರಿಗೆ ನೆಗೆಟಿವ್‌ ಮಾತನಾಡಬೇಡಿ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ನನ್ನ ಮಗು ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ, ಕುಟುಂಬಕ್ಕೆ ಬೇಸರ ಆಗುವಂತೆ ಮಾತನಾಡಿದ್ರೆ ನಾನು, ಕ್ರಮ ಕೈಗೊಳ್ತೀನಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಯೂಟ್ಯೂಬರ್
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
ಗರ್ಭಧಾರಣೆ
Latest Videos
Recommended Stories
Recommended image1
Anupama Gowdaಗೆ ಮತ್ತೆ ಲವ್ ಆಗಿದ್ಯಾ? ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಗೆಳೆಯ ಯಾರು?
Recommended image2
6 ವರ್ಷ ಒಟ್ಟಿಗಿದ್ದು ಕೈಕೊಟ್ಟಳು, ಇನ್ನೊಬ್ಬಳು ಬೇಗನೇ ಬಿಟ್ಟುಹೋದಳು: ರಾಜ್​ ಬಿ. ಶೆಟ್ಟಿ ಸೀಕ್ರೆಟ್​ ರಿವೀಲ್
Recommended image3
ಸುಳ್ಳು ಹರಡಿದ್ರು ..ಪಳನಿ ದೇವಸ್ಥಾನದಲ್ಲಿ ಹಾಗೆ ಮಾಡಿದೆ, 3 ತಿಂಗಳಿಗೆ ಜೈಲಿಗೆ ಹೋದ್ರು : ಚೈತ್ರಾ ಕುಂದಾಪುರ
Related Stories
Recommended image1
Youtuber Madhu Gowda: ಬೆಳೆದರೆ ಹೀಗ್‌ ಬೆಳಿಬೇಕ್!‌ ಹೊಸ ಸಾಹಸಕ್ಕಿಳಿದ ಅತ್ತಿಗೆ-ನಾದಿನಿ ಮಧು ಗೌಡ, ನಿಶಾ ರವೀಂದ್ರ!
Recommended image2
ಉಡುಪಿ ದೋಣಿ ದುರಂತಕ್ಕೆ ಬಲಿಯಾದ ಯುವತಿ ದಿಶಾ: ಗೆಳತಿಯ ಸಾವಿಗೆ ಕಣ್ಣೀರಿಟ್ಟ ಯೂಟ್ಯೂಬರ್ ಮಧು ಗೌಡ, ನಿಶಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved