Asianet Suvarna News Asianet Suvarna News

3 ತಿಂಗಳು ಕೆಡದ ‘ನಂದಿನಿ ತೃಪ್ತಿ’ ಹಾಲು ಮಾರುಕಟ್ಟೆಗೆ!

3 ತಿಂಗಳು ಕೆಡದ ‘ನಂದಿನಿ ತೃಪ್ತಿ’ ಹಾಲು ಮಾರುಕಟ್ಟೆಗೆ| ಇನ್ನೆರಡು ದಿನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ

Nandini Trupti Milk Enters To Market Which Can Be Used For 3 Months
Author
Bangalore, First Published Apr 1, 2020, 9:35 AM IST

ಬೆಂಗಳೂರು(ಏ.01): ರೆಫ್ರಿಜರೇಟರ್‌ (ಫ್ರೀಜ್‌) ಇಲ್ಲದೆ ಮೂರು ತಿಂಗಳ ಕಾಲ ಕೆಡದಂತೆ ಇಡಬಹುದಾದ ‘ನಂದಿನಿ ತೃಪಿ’್ತ ಹೆಸರಿನ ಹಾಲನ್ನು ಇನ್ನೆರಡು ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡ್‌ಲೈಫ್‌ ಮಾದರಿಯಲ್ಲಿ ನಂದಿನಿ ತೃಪ್ತಿ ಹಾಲನ್ನು 90 ದಿನಗಳ ಕಾಲ ಹಾಳಾಗದಂತೆ ಸಂಸ್ಕರಿಸಲಾಗಿರುತ್ತದೆ. ಐದು ಪದರುಗಳಿರುವ ಫ್ಲೆಕ್ಸಿಪ್ಯಾಕ್‌ನಲ್ಲಿ ಹಾಲನ್ನು ಸಂರಕ್ಷಿಸಲಾಗಿರುತ್ತದೆ. ಪ್ರಸ್ತುತ ಆರು ತಿಂಗಳು ಕೆಡದಂತೆ ಇಡಬಹುದಾದ ಗುಡ್‌ಲೈಫ್‌ ಹಾಲಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅದಕ್ಕೆ ಪೂರಕವಾಗಿ ನಂದಿನಿ ತೃಪ್ತಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದರು.

ನಂದಿನಿ ತೃಪ್ತಿ ಹಾಲು ಪ್ರತಿ ಲೀಟರ್‌ಗೆ .46 ಇದ್ದು, ಅರ್ಧ ಲೀಟರ್‌ಗೆ .23 ನಿಗದಿ ಪಡಿಸಲಾಗಿದೆ. ಗುಡ್‌ಲೈಫ್‌ ಹಾಲಿಗೆ ಹೋಲಿಕೆ ಮಾಡಿದರೆ ನಂದಿನಿ ತೃಪ್ತಿ ಹಾಲಿನ ಬೆಲೆ .4 ಕಡಿಮೆ ಇದೆ. ನಗರದ ನಂದಿನಿಯ ಎಲ್ಲ ಪಾರ್ಲರ್‌ಗಳಲ್ಲಿ ನಂದಿನಿ ತೃಪ್ತಿ ಹಾಲು ಲಭ್ಯವಾಗಲಿದೆ ಎಂದರು.

ಹೆಚ್ಚುವರಿ ಹಾಲು ಪೌಡರ್‌

ಪ್ರಸ್ತುತ ಹಾಲಿನ ಬೇಡಿಕೆ ಕಡಿಮೆಯಾಗಿರುವ ಕಾರಣ 9 ಲಕ್ಷ ಲೀಟರ್‌ ಹಾಲು ಮತ್ತು 1.50 ಲಕ್ಷ ಲೀಟರ್‌ ಮೊಸರನ್ನು ಮಾರಾಟ ಮಾಡಲಾಗುತ್ತಿದೆ. 4 ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಆಗಿ ಪರಿವರ್ತಿಸಲಾಗುತ್ತಿದೆ. ನಂದಿನಿ ಪಾರ್ಲರ್‌ಗಳಲ್ಲಿ ಹಾಲು ವಿತರಣೆಗೆ ಮತ್ತು ಹಾಲು ಸಂಗ್ರಹಿಸುವ ಹಾಗೂ ಸರಬರಾಜು ಮಾಡುವ ಪ್ರತಿಯೊಬ್ಬರು ಕೊರೋನಾ ಹರಡದಂತೆ ಸಾಕಷ್ಟುಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios