Business Ideas: ಆಯಿಲ್ ಮಿಲ್ ಶುರು ಮಾಡಿ ಕೈತುಂಬ ಲಾಭಗಳಿಸಿ

ಯಾವುದೇ ವ್ಯವಹಾರ ಶುರು ಮಾಡುವ ಮುನ್ನ ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಅಗತ್ಯವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಯಾವುದೇ ಕಲಬೆರಿಕೆಯಿಲ್ಲದ ಶುದ್ಧ ಎಣ್ಣೆ ಖರೀದಿಗೆ ಆದ್ಯತೆ ನೀಡ್ತಿದ್ದಾರೆ. ನೀವು ಗಿರಣಿಯಲ್ಲಿ ಶುದ್ಧ ಎಣ್ಣೆ ತಯಾರಿಸುವ ವ್ಯವಹಾರ ಪ್ರಾರಂಭಿಸಿ ಆದಾಯಗಳಿಸಬಹುದು.
 

Business Ideas Start Oil Mill

ನಮ್ಮ ಅಗತ್ಯಗಳಲ್ಲಿ ಖಾದ್ಯ ತೈಲ ಕೂಡ ಒಂದು. ಎಣ್ಣೆ ಇಲ್ಲದೆ ಅಡುಗೆ ಮಾಡೋದೆ ಕಷ್ಟ ಎನ್ನುವ ಸ್ಥಿತಿ ಈಗಿದೆ. ಅಡುಗೆಯಿಂದ ಔಷಧಿವರೆಗೆ ಅನೇಕ ಕೆಲಸಕ್ಕೆ ಖಾದ್ಯ ತೈಲವನ್ನು ಬಳಕೆ ಮಾಡಲಾಗುತ್ತದೆ. ಭಾರತದಲ್ಲಿ ಬಹುಬೇಡಿಕೆಯಿರುವ ವಸ್ತುಗಳಲ್ಲಿ ಖಾದ್ಯ ತೈಲ ಕೂಡ ಒಂದು. ತೈಲ ಗಿರಣಿ ವ್ಯವಹಾರ ಶುರು ಮಾಡುವ ಮೂಲಕ ನೀವು  ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು. ನಾವಿಂದು ತೈಲ ಗಿರಣಿ ಶುರು ಮಾಡೋದು ಹೇಗೆ ಎಂಬುದನ್ನು ಹೇಳ್ತೆವೆ. ತೈಲ (Oil) ಗಿರಣಿ ಶುರು ಮಾಡೋದು ಹೇಗೆ? : ಎಣ್ಣೆಕಾಳು (Oilseed) ಗಳ ಬೀಜಗಳನ್ನು ಎಣ್ಣೆ ಗಿರಣಿಯಲ್ಲಿ ರುಬ್ಬುವ ಮೂಲಕ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ. ನಂತರ ಆ ಎಣ್ಣೆಯನ್ನು ಬಾಟಲಿ (Bottle) ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತದೆ. ಈ ಗಿರಣಿ ಶುರು ಮಾಡಲು ನಿಮಗೆ ಯಂತ್ರದ ಅವಶ್ಯಕತೆ ಇದೆ. ಡೀಸೆಲ್ ಚಾಲಿತ ಯಂತ್ರ ಮತ್ತು  ವಿದ್ಯುತ್ (Electric) ಚಾಲಿತ ಯಂತ್ರ ಇದ್ರಲ್ಲಿ ನೀವು ಒಂದನ್ನು ಖರೀದಿ ಮಾಡಬೇಕಾಗುತ್ತದೆ. 

ಈ ಯಂತ್ರದ ಮೂಲಕ ಸಾಸಿವೆ, ಎಳ್ಳು, ಶೇಂಗಾ ಸೇರಿದಂತೆ ಅನೇಕ ರೀತಿಯ ಎಣ್ಣೆಯನ್ನು ತೆಗೆಯಬಹುದು. ನೀವು ಗ್ರಾಹಕರ ಮನೆಗೆ ಈ ಎಣ್ಣೆಯನ್ನು ತಲುಪಿಸುವ ಮೂಲಕ ಹಣ ಸಂಪಾದನೆ ಮಾಡಬಹುದು. ತೈಲ ಗಿರಣಿ ವ್ಯವಹಾರ (Business) ವನ್ನು ಪ್ರಾರಂಭಿಸಲು ಹೂಡಿಕೆಗೆ ಹಣ, ಪರವಾನಗಿ, ಕಚ್ಚಾ ವಸ್ತು, ಯಂತ್ರೋಪಕರಣ, ಕೆಲಸಗಾರರು, ಪ್ಲಾಸ್ಟಿಕ್ ಬಾಟಲಿ, ಡಬ್ಬಗಳ ಅವಶ್ಯಕತೆಯಿರುತ್ತದೆ. ಹಾಗೆಯೇ ಗಿರಣಿ ಶುರು ಮಾಡಲು ಸೂಕ್ತ ಜಾಗದ ಅವಶ್ಯಕತೆಯಿದೆ.  

Business Ideas: ಮನೆ ಮನೆಗೂ ಬೇಕೇಬೇಕಾಗಿರೋ ಗ್ಯಾಸ್ ಸಿಲಿಂಡರ್ ಬ್ಯಸಿನೆಸ್‌ ಮಾಡಿ ಹಣ ಗಳಿಸಿ

ತೈಲ ಗಿರಣಿ ಶುರು ಮಾಡಲು ತಗಲುವ ವೆಚ್ಚ (Cost) : ಆರಂಭದಲ್ಲಿ ಸಣ್ಣ ಪ್ರಮಾಣದ ಗಿರಣಿ ಸ್ಥಾಪಿಸಲು ಸುಮಾರು 2 ರಿಂದ 3 ಲಕ್ಷ ರೂಪಾಯಿ ಹೂಡಿಕೆ (Investment) ಮಾಡಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ನೀವು ವ್ಯವಹಾರ ಶುರು ಮಾಡ್ತೀರಿ ಎಂದಾದ್ರೆ 10 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಬೇಕಾಗಬಹುದು. 

ಪರವಾನಗಿ ಅಗತ್ಯವಿದೆಯೇ? : ತೈಲ ಗಿರಣಿ ಶುರು ಮಾಡಲು ಪರವಾನಗಿ ಅಗತ್ಯವಿದೆ. ಅತಿ ಸಣ್ಣ ಪ್ರಮಾಣದಲ್ಲಿ ಶುರು ಮಾಡ್ತಿದ್ದರೆ ಪರವಾನಗಿ ಅಗತ್ಯವಿಲ್ಲ. ಆದ್ರೆ ಸ್ಥಳೀಯ ಆಡಳಿತದಿಂದ ಒಪ್ಪಿಗೆ ಪಡೆಯಬೇಕು. ವ್ಯಾಪಾರಕ್ಕೆ ಪರವಾನಗಿ ಪಡೆಯುವವರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಪರವಾನಗಿ ಪಡೆಯಬಹದು. MSME ವೆಬ್‌ಸೈಟ್‌ನಲ್ಲಿ ಹೆಸರು  ನೋಂದಾಯಿಸಿಕೊಳ್ಳಬಹುದು. ತೈಲ ತೆಗೆಯುವ ವ್ಯವಹಾರವು ಆಹಾರಕ್ಕೆ ಸಂಬಂಧಿಸಿದೆ. ಆದ್ದರಿಂದ,  ಇದಕ್ಕಾಗಿ ಎಫ್‌ಎಸ್‌ಎಸ್‌ಎಐ ಪರವಾನಗಿ ಮತ್ತು ನೋಂದಣಿ ಸಹ ಅಗತ್ಯವಾಗಿದೆ. ತೈಲ ಗಿರಣಿ ಶುರು ಮಾಡಲು ಖಾದ್ಯ ತೈಲ ಎಕ್ಸ್ಪೆಲ್ಲರ್ ಮತ್ತು ಫಿಲ್ಟರ್ ಯಂತ್ರ ಬೇಕು. ಎಕ್ಸ್ಪೆಲ್ಲರ್ ಯಂತ್ರ ಬೀಜದಲ್ಲಿರುವ ಎಣ್ಣೆಯನ್ನು ಹೊರಗೆ ತೆಗೆಯುತ್ತದೆ. ನೀವು ಎಣ್ಣೆ ತೆಗೆದ ನಂತ್ರ ಉಳಿಯುವ ಸಿಪ್ಪೆಯನ್ನು ಕೂಡ ಮಾರಾಟ ಮಾಡಬಹುದು. ಅದನ್ನು ಗೊಬ್ಬರಕ್ಕೆ ಬಳಕೆ ಮಾಡಲಾಗುತ್ತದೆ. ನೀವು ತೆಗೆದ ಎಣ್ಣೆಯನ್ನು ಫಿಲ್ಟರ್ ಮಾಡಿ ಪ್ಯಾಕಿಂಗ್ ಮಾಡಬೇಕಾಗುತ್ತದೆ. ಈ ಎರಡು ಮುಖ್ಯ ಯಂತ್ರ ಹೊರತುಪಡಿಸಿ ತೂಕದ ಯಂತ್ರ ಹಾಗೂ ಸೀಲಿಂಗ್ ಯಂತ್ರವನ್ನು ಕೂಡ ಬಳಸಬಹುದು.

ಉದ್ಯೋಗ ಕಡಿತದ ಈ ದಿನಗಳಲ್ಲಿಆರ್ಥಿಕ ಮುಗ್ಗಟ್ಟು ಎದುರಾದ್ರೆ ಏನ್ ಮಾಡ್ತೀರಾ? ಹೀಗೆ ಸಿದ್ಧತೆ ಮಾಡಿಕೊಳ್ಳಿ

ತೈಲ ಗಿರಣಿ ವ್ಯವಹಾರದಲ್ಲಿ ಲಾಭವೆಷ್ಟು? : ತೈಲದ ಗುಣಮಟ್ಟ ಇಲ್ಲಿ ಮುಖ್ಯವಾಗುತ್ತದೆ. ಹಾಗೆಯೇ ನೀವು ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಮಾಡಿ ಲಾಭ ಗಳಿಸಬಹುದು. ತೈಲ ಗಿರಣಿ ವ್ಯಾಪಾರ ಕೂಡ ಬಹಳ ಲಾಭದಾಯಕ ವ್ಯವಹಾರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇದನ್ನು ಶುರು ಮಾಡಿದ್ರೆ ವೆಚ್ಚ ಕಡಿಮೆ. ಈ ವ್ಯವಹಾರದಲ್ಲಿ ಶೇಕಡಾ 25ರಿಂದ30 ರಷ್ಟು ಲಾಭ ಗಳಿಸಬಹುದು. 

Latest Videos
Follow Us:
Download App:
  • android
  • ios