Business Ideas: ಮನೆ ಮನೆಗೂ ಬೇಕೇಬೇಕಾಗಿರೋ ಗ್ಯಾಸ್ ಸಿಲಿಂಡರ್ ಬ್ಯಸಿನೆಸ್‌ ಮಾಡಿ ಹಣ ಗಳಿಸಿ

ವ್ಯವಹಾರದಲ್ಲಿ ನಾನಾ ವಿಧವಿದೆ. ಕೆಲವೊಂದು ಬ್ಯುಸಿನೆಸ್ ನಲ್ಲಿ ಹೆಚ್ಚಿಗೆ ಹಣ ಹೂಡಿಕೆ ಮಾಡೋದು ಅನಿವಾರ್ಯ. ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚು ಲಾಭ ಬರುತ್ತೆ ಅನ್ನೋದಾದ್ರೆ ಯಾಕೆ ಬಿಡ್ಬೇಕು? ಕೈನಲ್ಲಿ ಹಣವಿದೆ ಎಂದಾದ್ರೆ ಗ್ಯಾಸ್ ಏಜೆನ್ಸಿ ಪಡೆದು ಆದಾಯ ಗಳಿಕೆ ಶುರು ಮಾಡಿ.
 

Business Ideas Lpg Gas Agency Dealership

ಗ್ಯಾಸ್ ಸಿಲಿಂಡರ್  ಇಲ್ಲದೆ ಹೋದ್ರೆ ಈಗ ಅಡುಗೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಬಳಸ್ತಿದ್ದ ಸೌದೆ ಒಲೆ, ಕಲ್ಲಿದ್ದಲು ಒಲೆಯನ್ನು ನೀವು ಹಳ್ಳಿಗಳಲ್ಲೂ ನೋಡೋದು ಕಷ್ಟವಾಗಿದೆ. ಎಲ್ಲರ ಮನೆಯಲ್ಲೂ ಗ್ಯಾಸ್ ಸಿಲಿಂಡರನ್ನು ನಾವು ಕಾಣಬಹುದು. ಮಹಿಳೆಯರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡ್ತಿದೆ. ನೀವು ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ಗ್ಯಾಸ್ ಸಿಲಿಂಡರ್ ಏಜೆನ್ಸಿ ಶುರು ಮಾಡಬಹುದು. ಸದಾ ಬೇಡಿಕೆಯಲ್ಲಿರುವ ವ್ಯವಹಾರದಲ್ಲಿ ಇದೂ ಒಂದು.

ಗ್ಯಾಸ್ ಸಿಲಿಂಡರ್ (LPG) ಡೀಲರ್‌ಶಿಪ್ ಪಡೆಯುವುದು ಹೇಗೆ ? : ಗ್ಯಾಸ್ ಏಜೆನ್ಸಿ ಡೀಲರ್ ಶಿಪ್ (Dealership) ಪಡೆಯುವುದು ಸ್ವಲ್ಪ ಕಷ್ಟ. ಆದರೆ ಅದು ಅಸಾಧ್ಯವೇನಲ್ಲ. ಇದಕ್ಕಾಗಿ ಜಾಗ ಹಾಗೂ ಹಣದ ಅವಶ್ಯಕತೆಯಿದೆ. ಗ್ಯಾಸ್ ಸಿಲಿಂಡರ್ ಏಜೆನ್ಸಿಯನ್ನು ಕಡಿಮೆ ಹಣದಲ್ಲಿ ಪಡೆಯಲು ಸಾಧ್ಯವಿಲ್ಲ. ಗ್ಯಾಸ್ ಏಜೆನ್ಸಿಗೆ ಅರ್ಜಿ ಕರೆದ ಬಗ್ಗೆ ಪತ್ರಿಕೆಯಲ್ಲಿ ವರದಿ ಬರ್ತಿರುತ್ತದೆ. ಅದನ್ನು ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.  

ಎಲ್ಪಿಜಿ ಗ್ಯಾಸ್ ಕಂಪನಿ (Company) ಗಳು :  ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಂಪನಿಗಳಿದ್ದು, ನೀವು ಇದ್ರಲ್ಲಿ ಯಾವುದಾದ್ರೂ ಒಂದು ಕಂಪನಿ ಏಜೆನ್ಸಿ ಪಡೆಯಬೇಕಾಗುತ್ತದೆ.

ಗ್ಯಾಸ್ ಏಜೆನ್ಸಿ ಪಡೆಯಲು ಅರ್ಹತೆ : ಅರ್ಜಿ ಸಲ್ಲಿಸುವ ವ್ಯಕ್ತಿ ಸ್ವಂತ ಭೂಮಿ ಹೊಂದಿರಬೇಕು. ಗ್ಯಾಸ್ ಏಜೆನ್ಸಿ ಕಚೇರಿ ಮತ್ತು ಸಿಲಿಂಡರ್ ಗೋಡೌನ್‌ಗೆ ಸಾಕಷ್ಟು ಸ್ಥಳಾವಕಾಶ ಇರಬೇಕು. 10ನೇ ತರಗತಿ ತೇರ್ಗಡೆಯಾದ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಿಮಗೆ 21 ವರ್ಷವಾಗಿರಬೇಕು. ಗ್ಯಾಸ್ ಏಜೆನ್ಸಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಹೋರಾಟಗಾರರಿಗೆ ವಯಸ್ಸಿನ ನಿರ್ಬಂಧವಿಲ್ಲ. ಅವರು 60 ವರ್ಷಗಳ ನಂತರವೂ ಗ್ಯಾಸ್ ಸಿಲಿಂಡರ್ ಏಜೆನ್ಸಿ ತೆಗೆದುಕೊಳ್ಳಲು ಸಮರ್ಥರಾಗಿರುತ್ತಾರೆ. ಅರ್ಜಿದಾರರ ವಿರುದ್ಧ ಯಾವುದೇ ಕೇಸ್ ಇರಬಾರದು. 

ಅರ್ಜಿ ಸಲ್ಲಿಸುವ ವಿಧಾನ : ಮೊದಲೇ ಹೇಳಿದಂತೆ ಯಾವ ಗ್ಯಾಸ್ ಕಂಪನಿ ಏಜೆನ್ಸಿಗೆ ಅರ್ಜಿ ಆಹ್ವಾನಿಸಿದೆ ಎಂಬುದನ್ನು ನೋಡಿ. ನಂತ್ರ ಆ ಕಂಪನಿ ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ಆನ್ಲೈನ್ ಅರ್ಜಿ ಭರ್ತಿ ಮಾಡಬೇಕು. ನಂತ್ರ ಸಂದರ್ಶನ ನಡೆಯುತ್ತದೆ. ಆ ನಂತ್ರ ದಾಖಲೆ ಹಾಗೂ ಭೂಮಿ ಪರಿಶೀಲನೆ ನಡೆಯುತ್ತದೆ. ನಂತ್ರ ಕಂಪನಿ ನಿಮಗೆ ದಿನಾಂಕವನ್ನು ನೀಡುತ್ತದೆ. ಆ ದಿನಾಂಕದೊಳಗೆ ನೀವು ಏಜೆನ್ಸಿ ಆರಂಭಿಸಬೇಕು. ಇಲ್ಲವೆಂದ್ರೆ ಕಂಪನಿ ನಿಮ್ಮ ಪರವಾನಗಿ ರದ್ದು ಮಾಡುತ್ತದೆ.

ಎಲ್ ಪಿಜಿ ಡೀಲರ್‌ಶಿಪ್ ಶುಲ್ಕ : ಸಾಮಾನ್ಯ ವರ್ಗದ ಅಡಿಯಲ್ಲಿ ಬಂದರೆ ಮತ್ತು ನಗರ ಪ್ರದೇಶದಲ್ಲಿ ಎಲ್‌ಪಿಜಿ ಡೀಲರ್‌ಶಿಪ್ ಪಡೆಯಲು ಬಯಸಿದರೆ ಅರ್ಜಿ ಸಲ್ಲಿಸುವ ಸಮಯದಲ್ಲಿ 10,000 ರೂಪಾಯಿ ಪಾವತಿಸಬೇಕು. ಅರ್ಜಿದಾರರು ಇತರೆ ಹಿಂದುಳಿದ ಜಾತಿ ಅಂದರೆ ಒಬಿಸಿ ಅಡಿಯಲ್ಲಿ ಬಂದರೆ ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿ   5,000 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿದಾರರು ಎಸ್‌ಟಿ/ಎಸ್‌ಸಿ ವರ್ಗದ ಅಡಿಯಲ್ಲಿ ಬಂದರೆ 3,000 ರೂಪಾಯಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಟೆಕ್ ಉದ್ಯೋಗಿಗಳಿಗೆ ತಲೆಬಿಸಿ: ಯಾಕೆ ದಿನ ದಿನಕ್ಕೂ ವಜಾಗೊಳ್ತಿದ್ದಾರೆ ಟೆಕ್ಕಿಗಳು ಗೊತ್ತಾ?

ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಡೀಲರ್‌ಶಿಪ್ ಪಡೆಯುವವರು ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿದ್ರೆ  8000 ರೂಪಾಯಿ, ಒಬಿಸಿ ವರ್ಗದ ಅಭ್ಯರ್ಥಿಗಳು 4000 ರೂಪಾಯಿ ಮತ್ತು ಎಸ್‌ಸಿ /ಎಸ್‌ಟಿ ವರ್ಗದ ಅಭ್ಯರ್ಥಿಗಳು 2500 ರೂಪಾಯಿ ಶುಲ್ಕ ಪಾವತಿ ಮಾಡಬೇಕು.

Business Ideas: ಕಾಲೇಜ್ ವಿದ್ಯಾರ್ಥಿಗಳಿಗೂ ಇದೆ ಗಳಿಕೆಗೆ ನಾನಾ ದಾರಿ

ಭದ್ರತಾ ಠೇವಣಿ ಎಷ್ಟು? : ಅರ್ಜಿದಾರರ ಫಾರ್ಮ್ ಅನ್ನು ಕಂಪನಿಯು ಒಪ್ಪಿಕೊಂಡರೆ ಅರ್ಜಿದಾರರು ಭದ್ರತಾ ಠೇವಣಿ ಇಡಬೇಲು. ಇದನ್ನು  ಹಿಂತಿರುಗಿಸಲಾಗುವುದಿಲ್ಲ. ನಗರ ಪ್ರದೇಶಗಳಲ್ಲಿ ಗ್ಯಾಸ್ ಏಜೆನ್ಸಿ  ತೆರೆಯಲು ಬಯಸಿದರೆ ಸುಮಾರು 50,0000 ಭದ್ರತಾ ಠೇವಣಿ ಇಡಬೇಕು. ಗ್ರಾಮದಲ್ಲಾದ್ರೆ ಸುಮಾರು 40,0000 ಠೇವಣಿ ಮಾಡಬೇಕಾಗುತ್ತದೆ. ಕನಿಷ್ಠ 15ರಿಂದ 10 ಲಕ್ಷ ಖರ್ಚು ಬರುತ್ತದೆ. ಸದಾ ಬೇಡಿಕೆಯಿರುವ ಕಾರಣ ನಷ್ಟಕ್ಕೆ ಇಲ್ಲಿ ಆಸ್ಪದವಿಲ್ಲ.

Latest Videos
Follow Us:
Download App:
  • android
  • ios