Business Idea: ಕಡಿಮೆ ಹೂಡಿಕೆ ಹೆಚ್ಚಿನ ಆದಾಯ; ಈ ಋತುವಿನಲ್ಲಿ ರಾಖಿ ಬ್ಯುಸಿನೆಸ್ ಮಾಡಿ ಸಂಪಾದನೆ ಮಾಡಿ!

ಅನೇಕರು ಖಾಲಿ ಸಮಯದಲ್ಲಿ ಸೈಡ್ ಬ್ಯುಸಿನೆಸ್ ಮಾಡುವ ಆಲೋಚನೆ ಮಾಡ್ತಾರೆ. ನಿಮಗೂ ಸಮಯ ಸಿಗ್ತಿದೆ ಅಂದ್ರೆ ಈ ಹಬ್ಬದ ಋತುವನ್ನು ಸದುಪಯೋಗಪಡಿಸಿಕೊಳ್ಳಿ. ಮನೆಯಲ್ಲೇ ಈ ವ್ಯವಹಾರ ಪ್ರಾರಂಭಿಸಿ ಹಣ ಸಂಪಾದನೆ ಮಾಡಿ. 

Business Idea Start Rakhi Making And Selling On Raksha Bandhan  roo

ಹಬ್ಬಗಳ ಋತು ಶುರುವಾಗಿದೆ. ಒಂದಾದ್ಮೇಲೆ ಒಂದು ಹಬ್ಬ ಬರಲಿದೆ. ಅದ್ರಲ್ಲಿ ರಾಖಿ ಹಬ್ಬ ಕೂಡ ಸೇರಿದೆ. ಈಗಾಗಲೇ ಮಾರುಕಟ್ಟೆಗೆ ರಾಖಿಗಳು ದಾಳಿ ಇಟ್ಟಿವೆ. ವೆರೈಟಿ ವೆರೈಟಿ ರಾಖಿಗಳನ್ನು ನೀವು ನೋಡ್ಬಹುದು. ಬ್ಯುಸಿನೆಸ್ ಮಾಡುವ ಐಡಿಯಾದಲ್ಲಿ ನೀವಿದ್ರೆ ಈ ರಾಖಿ ಉದ್ಯಮಕ್ಕೆ ಲಗ್ಗೆ ಇಡಬಹುದು. ಮನೆಯಲ್ಲೇ ಕುಳಿತು ನೀವು ರಾಖಿ ತಯಾರಿಸಿ ಸಣ್ಣ ಪ್ರಮಾಣದಲ್ಲಿಯೂ ವ್ಯಾಪಾರ ಶುರು ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ರಾಖಿ ಬ್ಯುಸಿನೆಸ್ ಶುರು ಮಾಡ್ತೀರಿ ಅಂದ್ರೆ ಅದಕ್ಕೂ ಅವಕಾಶವಿದೆ. 

ರಾಖಿ (Rakhi) ಹಬ್ಬದ ಸಂದರ್ಭದಲ್ಲಿ ಸಾವಿರ ಕೋಟಿ ಮೌಲ್ಯದ ರಾಖಿಗಳು ಮಾರಾಟವಾಗ್ತವೆ. ನೀವು ಸುಂದರವಾದ, ಆಕರ್ಷಕವಾದ, ಕಡಿಮೆ ಬೆಲೆಯ ರಾಖಿಗಳನ್ನು ತಯಾರಿಸಿ, ಮಾರಾಟ ಮಾಡಿ ಹಣ ಗಳಿಸಬಹುದು. ಚೀನಾ (China) ದಿಂದ ಭಾರತ (India) ಕ್ಕೆ ಬರುವ ರಾಖಿಗಳ ಸಂಖ್ಯೆ ಹೆಚ್ಚು. ಪ್ರತಿ ವರ್ಷ ಭಿನ್ನ ಡಿಸೈನನ ಕೋಟ್ಯಾಂತರ ರಾಖಿ, ಚೀನಾದಿಂದ ಭಾರತಕ್ಕೆ ಬರುತ್ತದೆ. ಮೇಕ್ ಇನ್ ಇಂಡಿಯಾದಿಂದ ಸ್ಪೂರ್ತಿಗೊಂಡ ಅನೇಕ ಭಾರತೀಯರು, ಚೀನಾವನ್ನು ಮಣಿಸುವ ಯತ್ನದಲ್ಲಿದ್ದಾರೆ. ನೀವು ಮನೆಯಲ್ಲೇ ರಾಖಿ ತಯಾರಿಸಿ, ದೊಡ್ಡ ಮಟ್ಟದಲ್ಲಿ ಆದಾಯ ಗಳಿಸಬಹುದು.

ಮಗಳಿಗಾಗಿ ಮುಖೇಶ್ ಅಂಬಾನಿಯಿಂದ ₹5,000 ಕೋಟಿ ಹೂಡಿಕೆ; ತಂದೆಯನ್ನು ಇಶಾ ಮೆಚ್ಚಿಸಿದ್ದು ಹೇಗೆ..?

ರಾಖಿ ತಯಾರಿಸಲು ಎಷ್ಟು ಹೂಡಿಕೆ ಅಗತ್ಯ : ನೀವು ಅಲಂಕಾರಿಕ ರಾಖಿ ತಯಾರಿಸ್ತೀರಿ ಅಂದ್ರೆ ಮನೆಯಲ್ಲೇ ಸಣ್ಣದಾಗಿ ಇದನ್ನು ಶುರು ಮಾಡಿ. 20 ಸಾವಿರದಿಂದ 50 ಸಾವಿರ ರೂಪಾಯಿ ಒಳಗೆ ನೀವು ಈ ವ್ಯವಹಾರ ಶುರು ಮಾಡಬಹುದು. ರಾಖಿ ತಯಾರಿಸಲು ರೇಷ್ಮೆ ದಾರ, ಮಣಿ, ಪೇಪರ್ ಸೇರಿದಂತೆ ಅಲಂಕಾರಿಕ ವಸ್ತುಗಳು ಬೇಕಾಗುತ್ತದೆ. ಇದೆಲ್ಲವೂ ನಿಮ್ಮ ಸ್ಥಳೀಯ ಮಾರುಕಟ್ಟೆಯಲ್ಲೇ ನೀವು ಖರೀದಿ ಮಾಡ್ಬಹುದು. ದೊಡ್ಡ ಪ್ರಮಾಣದಲ್ಲಿ ನೀವು ರಾಖಿ ತಯಾರಿಸುತ್ತಿದ್ದರೆ ಹೋಲ್ ಸೆಲ್ ಮಾರುಕಟ್ಟೆಯಿಂದ ಖರೀದಿ ಮಾಡಿದ್ರೆ ಕಡಿಮೆ ಬೆಲೆಗೆ ಸಿಗುತ್ತದೆ. ನೀವು ಮಶಿನ್ ಇಲ್ಲದೆಯೇ ರಾಖಿ ತಯಾರಿಸಬಹುದು. ಡಿಸೈನ್ ಎಷ್ಟು ಸುಂದರವಾಗಿದೆಯೋ ಅದ್ರ ಆಧಾರದ ಮೇಲೆ ರಾಖಿ ಮಾರಾಟವಾಗುತ್ತದೆ. ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್ ಕಂಟೆಂಟ್, ಸೂಪರ್ ಮ್ಯಾನ್, ಕ್ರಿಕೆಟರ್, ಸಿನಿಮಾ ಕಲಾವಿದರ ಫೋಟೋ ಬಳಸಿಯೂ ನೀವು ರಾಖಿ ತಯಾರಿಸಬಹುದು. 

ಸಾಲದ ಮೇಲೆ ಬ್ಯಾಂಕ್ ದಂಡ ರೂಪದಲ್ಲಿ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ; ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ RBI

ರಾಖಿ ಬ್ಯುಸಿನೆಸ್ ನಿಂದ ಸಿಗುತ್ತೆ ಎಷ್ಟು ಆದಾಯ? :  ನೀವು ನಿಮ್ಮ ರಾಖಿಯನ್ನು ಹೇಗೆ ತಯಾರಿಸುತ್ತೀರಿ ಹಾಗೆ ಹೇಗೆ ಮಾರ್ಕೆಟ್ ಮಾಡ್ತೀರಿ ಎನ್ನುವ ಆಧಾರದ ಮೇಲೆ ನೀವು ಆದಾಯ ಗಳಿಸಬಹುದು. ನಗರದಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ನೀವು ರಾಖಿ ತಯಾರಿಸಿ ಮಾರಾಟ ಮಾಡಬಹುದು. ನೀವು ಒಂದೆರಡು ತಿಂಗಳ ಮೊದಲೇ ರಾಖಿ ತಯಾರಿಕೆ ಪೂರ್ಣಗೊಳಿಸಿದ್ದು, ನಿಮ್ಮ ಬಳಿ ಹೆಚ್ಚು ಸ್ಟಾಕ್ ಇದೆ ಎಂದಾದ್ರೆ ನೀವು ನಿಮ್ಮ ಹತ್ತಿರದ ಅಂಗಡಿಗಳಿಗೆ ಇದನ್ನು ನೀಡ್ಬಹುದು. ಅದೇ ನೀವು ಈಗ ರಾಖಿ ತಯಾರಿಸಲು ಶುರು ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅದು ಮಾರಾಟವಾಗಬೇಕು ಎಂದಾದ್ರೆ ನೀವು ಹೆಚ್ಚಿನ ಜಾಹೀರಾತನ್ನು ನೀಡ್ಬೇಕಾಗುತ್ತದೆ.

ನೀವು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ ಅಪ್ ನಲ್ಲಿ ನಿಮ್ಮ ರಾಖಿ ಫೋಟೋ, ಬೆಲೆಯನ್ನು ಪೋಸ್ಟ್ ಮಾಡ್ಬೇಕು. ಕೈನಿಂದಲೇ ತಯಾರಿಸಿದ ರಾಖಿಯಾಗಿರುವ ಕಾರಣ ಬೆಲೆ ಸ್ವಲ್ಪ ಹೆಚ್ಚಿದ್ದರೂ ಜನರು ಖರೀದಿ ಮಾಡ್ತಾರೆ. ಗ್ರಾಹಕರ ಇಚ್ಛೆಯಂತೆ ಕಸ್ಟಮ್ ರಾಖಿಯನ್ನು ಕೂಡ ನೀವು ಮಾಡಿಕೊಡುವವರಾಗಿದ್ದರೆ ಮತ್ತಷ್ಟು ಹಣವನ್ನು ನೀವು ಗಳಿಸಬಹುದು. ಮಾರುಕಟ್ಟೆಯಲ್ಲಿ ಡಿಸೈನ್ ರಾಖಿ ಬೆಲೆ 100 – 150 ರೂಪಾಯಿ ಇದೆ. ನೀವು ಚೆಂದದ ರಾಖಿ ತಯಾರಿಸುವ ಕಲೆ ಹೊಂದಿದ್ದರೆ ಈ ಋತುವಿನಲ್ಲಿ ಅದ್ರ ಸದುಪಯೋಗಪಡೆದುಕೊಳ್ಳಿ. ರಾಖಿ ತಯಾರಿಸಿ ಸಾವಿರಾರು ರೂಪಾಯಿ ಗಳಿಸಿ. 

Latest Videos
Follow Us:
Download App:
  • android
  • ios