Asianet Suvarna News Asianet Suvarna News

ಇಶಾಳನ್ನು ಮೆಚ್ಚಿ ಆಕೆಗಾಗಿ 5,000 ಕೋಟಿ ರೂ ಹೂಡಿಕೆ ಮಾಡಿದ ಅಂಬಾನಿ

ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ 5,000 ಕೋಟಿ ರೂ.ಗಳ ಮೊತ್ತವನ್ನು ಹೂಡಿಕೆ ಮಾಡಲಾಗುವುದು ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇದು ಅವರ ಮಗಳು ಇಶಾ ಅಂಬಾನಿ ನೇತೃತ್ವದ ಕಂಪನಿ. ಹಾಗಾದರೆ ನಿಶಾ ತಂದೆ ಮೆಚ್ಚುವಷ್ಟು ಹಂತಕ್ಕೆ ಬೆಳೆದದ್ದು ಹೇಗೆ ಎಂಬ ಡೀಟೇಲ್ಸ್ ಇಲ್ಲಿದೆ.

Mukesh Ambani to invest Rs 5,000 crore in Isha Ambani led firm, RIL plans Rs 14,200 crore investment suh
Author
First Published Aug 18, 2023, 1:11 PM IST

ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ 5,000 ಕೋಟಿ ರೂ.ಗಳ ಮೊತ್ತವನ್ನು ಹೂಡಿಕೆ ಮಾಡಲಾಗುವುದು ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇದು ಅವರ ಮಗಳು ಇಶಾ ಅಂಬಾನಿ ನೇತೃತ್ವದ ಕಂಪನಿ. ಹಾಗಾದರೆ ನಿಶಾ ತಂದೆ ಮೆಚ್ಚುವಷ್ಟು ಹಂತಕ್ಕೆ ಬೆಳೆದದ್ದು ಹೇಗೆ ಎಂಬ ಡೀಟೇಲ್ಸ್ ಇಲ್ಲಿದೆ.

ಇಂದು ಮುಕೇಶ್‌ ಅಂಬಾನಿ ದೇಶ-ವಿದೇಶಗಳಲ್ಲಿ ತುಂಬಾ ಖ್ಯಾತಿ ಪಡೆದ ಉದ್ಯಮಿ. 2002ರಲ್ಲಿ ತಮ್ಮ ತಂದೆ ಧೀರೂಭಾಯಿ ಅಂಬಾನಿಯವರ ನಿಧನದ ನಂತರ, ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್’ನ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅಂದಿನಿಂದ ರಿಲಯನ್ಸ್‌ ಸಂಸ್ಥೆಯನ್ನು ಯಶಸ್ಸಿನ ಉನ್ನತ ಶಿಖರದತ್ತ ದಾಪುಗಾಲು ಇಡುತ್ತಿದೆ. ಇದೀಗ ಆ ಸಂಸ್ಥೆಯು 17 ಟ್ರಿಲಿಯನ್‌ಗಿಂತಲೂ ಹೆಚ್ಚು ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಇಶಾ ಕಂಪನಿಯಲ್ಲಿ 5,000 ಕೋಟಿ ರೂ. ಹೂಡಿಕೆ

ರಿಲಯನ್ಸ್ ಸಂಸ್ಥೆಯ ಯಶಸ್ಸಿನಲ್ಲಿ ಮುಖೇಶ್ ಅಂಬಾನಿ ಜತೆಯಲ್ಲಿ ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿ ಕೂಡ ಭಾಗಿಯಾಗಿದ್ದಾರೆ. ರಿಲಯನ್ಸ್ ಸಂಸ್ಥೆಯು ತನ್ನ ಅಂಗಸಂಸ್ಥೆಗಳಲ್ಲಿ ಗಣನೀಯ ಹೂಡಿಕೆ ಮಾಡುತ್ತಾ ಬಂದಿದೆ. ಈ ವರ್ಷದಲ್ಲಿ ಸುಮಾರು ರೂ 14,200 ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ. ಅದರಲ್ಲಿ 5,000 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಕುರಿತು ಮುಖೇಶ್ ಅಂಬಾನಿ ಘೋಷಣೆ ಮಾಡಿದ್ದಾರೆ.
 
ಬಿಸಿನೆಸ್ ಐಕಾನ್ ಇಶಾ ಅಂಬಾನಿ

ಭಾರತದ ಉದ್ಯಮಿ ಮುಖೇಶ್ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ಬಂಗಾರದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಜನಿಸಿದಳು. ಅವರ ಅಜ್ಜ ಧೀರೂಭಾಯಿ ಅಂಬಾನಿ ಕುಟುಂಬದ ಏಕೈಕ ಹೆಣ್ಣು ಮಗುವನ್ನು ತುಂಬಾ ಇಷ್ಟಪಡುತ್ತಿದ್ದರು. ಅವರು ಇಶಾಳ ಫೋಟೋ ನೋಡದೆ ತಮ್ಮ ದಿನವನ್ನು ಪ್ರಾರಂಭಿಸುತ್ತಿರಲಿಲ್ಲ. ಇನ್ನು ಇಶಾ ಕೂಡ ತಾತಾ ತಂದೆಯ ಹಾಗೆ ತುಂಬಾ ಚುರುಕಾಗಿ ಬೆಳೆದಿದ್ದು, ಬಿಸಿನೆಸ್ ಮಾಡುವಲ್ಲಿ ತುಂಬಾ ಚುರುಕಾಗಿದ್ದಾರೆ. 

ನಿಮ್ಮ ಮನೆಯಲ್ಲಿ ವೇಸ್ಟ್ ವಸ್ತುಗಳು ಇವೆಯೇ?; ಅವುಗಳನ್ನು ಸೇಲ್ ಮಾಡಿ ಹಣ ಗಳಿಸಿ..!

ಇಶಾ ಅಂಬಾನಿಯನ್ನು 2022 ರಲ್ಲಿ ರಿಲಯನ್ಸ್ ರೀಟೇಲ್‌ನ ಹೊಸ ನಾಯಕಿ ಎಂದು ಘೋಷಣೆ ಮಾಡಲಾಯಿತು. ಆ ವೇಳೆಯಲ್ಲಿ ಸಂಸ್ಥೆಯು 2 ಲಕ್ಷ ಕೋಟಿ ರೂ. ವಹಿವಾಟು ಸಾಧಿಸಲು ಸಾಧ್ಯವಾಗಿತ್ತು. ನಂತದಲ್ಲಿ ಇಶಾ ನೇತೃತ್ವದಲ್ಲಿ ರಿಲಯನ್ಸ್ ರೀಟೇಲ್‌ ಅನೇಕ ರೀತಿಯ ಬ್ರ್ಯಾಂಡ್‌ಗಳನ್ನು ಹುಟ್ಟುಹಾಕಿದ್ದು, ಭಾರತದಲ್ಲಿ ಎಲ್ಲೆಡೆ ಲಭ್ಯತೆ ಇದೆ. ಇಶಾ ಅಂಬಾನಿ ಸೈಕಾಲಜಿ ಮತ್ತು ಏಷ್ಯನ್ ಸ್ಟಡೀಸ್‌ನಲ್ಲಿ ಪದವಿ ಪಡೆದಿದ್ದು, ನ್ಯೂಯಾರ್ಕ್‌ನ ಪ್ರಸಿದ್ಧ ವ್ಯಾಪಾರ ಸಲಹೆಗಾರರಾದ ಮೆಕಿನ್ಸೆ ಮತ್ತು ಕಂಪನಿಯೊಂದಿಗೆ ವ್ಯಾಪಾರ ವಿಶ್ಲೇಷಕರಾಗಿ ಕೆಲಸ ಮಾಡಿದ್ದಾರೆ.

Mukesh Ambani to invest Rs 5,000 crore in Isha Ambani led firm, RIL plans Rs 14,200 crore investment suh

Follow Us:
Download App:
  • android
  • ios