Business Idea : ಕಾರ್ ಡಿಟೇಲಿಂಗ್ ಶುರು ಮಾಡಿ ಹಣ ಗಳಿಸಬಹುದು ನೋಡಿ

ಕಾರ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಕಾರನ್ನು ಸ್ವಚ್ಛವಾಗಿಡೋದಲ್ಲದೆ, ಮೊದಲಿನಂತೆ ಕಾರ್ ಶೈನಿಂಗ್ ಆಗಿರಬೇಕು ಅಂತಾ ಎಲ್ಲರೂ ಬಯಸ್ತಾರೆ. ಸಣ್ಣ ಗೀರು ಬಿದ್ರೂ ಕೆಲವರಿಗೆ ಅಳು ಬರುತ್ತೆ. ಜನರ ಈ ಕಾರ್ ಪ್ರೀತಿ ನಿಮ್ಮ ಗಳಿಕೆಗೆ ದಾರಿಯಾಗಬಹುದು. 
 

Business Idea Car Detailing

ಸ್ವಂತ ವ್ಯವಹಾರ ಶುರು ಮಾಡೋದು ಸವಾಲಿನ ಕೆಲಸ. ಆರಂಭದಲ್ಲಿ ಯಾವ ವ್ಯವಹಾರ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಹೂಡಿಕೆ ಮಾಡ್ಬೇಕು. ಆರಂಭದಲ್ಲಿ ಹೆಚ್ಚಿನ ಹಣ ಹೂಡಬೇಕೆಂದ್ರೆ ನಮ್ಮ ಬಳಿ ಸಾಕಷ್ಟು ಹಣವಿರಬೇಕು ಇಲ್ಲವೆ ಸಾಲ ಮಾಡಲು ಧೈರ್ಯ ಬೇಕು. ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದಾದ ಅನೇಕ ವ್ಯವಹಾರಗಳಿವೆ. ನಾವಿಂದು ಅದ್ರಲ್ಲಿ ಒಂದನ್ನು ನಿಮಗೆ ಹೇಳ್ತೇವೆ.

ಕಾರ್ (Car) ಡಿಟೇಲಿಂಗ್ (Detailing) ವ್ಯವಹಾರ ಎಂದರೇನು? ಕಾರಿನ ಬಗ್ಗೆ ಪ್ರತಿಯೊಬ್ಬರಿಗೂ ಪ್ರೀತಿ ಇದ್ದೇ ಇರುತ್ತದೆ. ನಿಯಮಿತವಾಗಿ ಕಾರನ್ನು ಸ್ವಚ್ಛಗೊಳಿಸಲು, ಅದನ್ನು ಸರಿಯಾಗಿಟ್ಟುಕೊಳ್ಳಲು ಬಯಸುತ್ತಾರೆ. ಕಾಲ ಬದಲಾದಂತೆ ಕಾರಿನ ಸರ್ವಿಸಿಂಗ್ (Servicing) ವಿಧಾನ ಬದಲಾಗಿದೆ. ಈಗ ಕಾರನ್ನು ಡಿಟೇಲಿಂಗ್ ಟೆಕ್ನಾಲಜಿ ಬಳಸಿ ಕ್ಲೀನ್ ಮಾಡಲಾಗುತ್ತದೆ. ಇದ್ರಲ್ಲಿ ಬರಿ ಕಾರಿನ ಧೂಳು ತೆಗೆಯುವ ಕೆಲಸ ಮಾತ್ರ ನಡೆಯೋದಿಲ್ಲ, ಕಾರಿನ ಪ್ರತಿ ಭಾಗ ಸ್ವಚ್ಛವಾಗುವ ಜೊತೆಗೆ ಹೊಳಪು ಬರುತ್ತದೆ. ನೀವು ಕೂಡ ಕಾರ್ ಡಿಟೇಲಿಂಗ್ ಕೆಲಸ ಶುರು ಮಾಡ್ಬಹುದು. 

8 ವರ್ಷಕ್ಕೆ ದುಪ್ಪಟ್ಟಾದ ಭಾರತೀಯರ ಆದಾಯ: ಪ್ರಧಾನಿ ಮೋದಿ ಆಡಳಿತದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

ಕಾರ್ ಡಿಟೇಲಿಂಗ್ ಬ್ಯುಸಿನೆಸ್ ಗೆ ಬೇಕಾಗುವ ಬಂಡವಾಳ : ಈ ವ್ಯವಹಾರದಲ್ಲಿ ಹೂಡಿಕೆಯು ವ್ಯಾಪಾರ ಮತ್ತು ಭೂಮಿಯ ಮೇಲೆ ಅವಲಂಬಿತವಾಗಿರುತ್ತದೆ. ನೀವು ದೊಡ್ಡ ವ್ಯಾಪಾರವನ್ನು ಪ್ರಾರಂಭಿಸಿದರೆ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ. ಸಣ್ಣ ವ್ಯಾಪಾರವನ್ನು ಪ್ರಾರಂಭಿಸಿದರ ಕಡಿಮೆ ಹೂಡಿಕೆ ಸಾಕು. ಸ್ವಂತ ಜಾಗವಿದ್ದರೆ ಇನ್ನಷ್ಟು ಹಣ ಉಳಿಸಬಹುದು. ಬಾಡಿಗೆ ಪಡೆದು ಕೆಲಸ ಶುರು ಮಾಡ್ತಿದ್ದರೆ ಆರಂಭದಲ್ಲಿ ಬಾಡಿಗೆ, ಆಂತರಿಕ ಕೆಲಸ, ಯಂತ್ರ ಎಲ್ಲ ಸೇರಿ ನೀವು ಸುಮಾರು 5 ಲಕ್ಷದಿಂದ 10 ಲಕ್ಷದವರೆಗೆ ಹೂಡಿಕೆ ಮಾಡಬೇಕು. 

ನೀವು 300ರಿಂದ 600 ಚದರ ಅಡಿ ಜಾಗವನ್ನು ಹೊಂದಿರಬೇಕಾಗುತ್ತದೆ. ಜನನಿಬಿಡಿ ಪ್ರದೇಶದಲ್ಲಿ ನಿಮ್ಮ ವ್ಯವಹಾರ ಶುರು ಮಾಡಬೇಕು. ರಾಂಡಮ್ ಪಾಲಿಶರ್, ರಾಂಡಮ್ ಆರ್ಬಿಟಲ್ ಪಾಲಿಶರ್ಸ್, ಕಾರ್ಪೆಟ್ ಎಕ್ಸ್ಟ್ರಾಕ್ಟರ್ಸ್, ಆವಿ ಸ್ಟೀಮರ್ಗಳು, ನೀರಿನ ತೊಟ್ಟಿಗಳು ಸೇರಿದಂತೆ ಅನೇಕ ವಸ್ತುಗಳ ಅವಶ್ಯಕತೆ ಇದಕ್ಕಿರುತ್ತದೆ.

ಕಾರ್ ಡಿಟೇಲಿಂಗ್ ವ್ಯವಹಾರಕ್ಕೆ ಅಗತ್ಯವಿರುವ ದಾಖಲೆ : ಕಾರ್ ಡಿಟೇಲಿಂಗ್ ವ್ಯವಹಾರಕ್ಕೆ ನೋಂದಣಿ ಮತ್ತು ಪರವಾನಗಿ ಅಗತ್ಯವಿದೆ. ನೀವು ಐಡಿಯಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್ ನೀಡಬಹುದು. ವಿಳಾಸದ ಪುರಾವೆಯಾಗಿ ಪಡಿತರ ಚೀಟಿ, ವಿದ್ಯುತ್ ಬಿಲ್ ನೀಡಬಹುದು. ಅಲ್ಲದೆ. ಪಾಸ್‌ಬುಕ್‌ನೊಂದಿಗೆ ಬ್ಯಾಂಕ್ ಖಾತೆ,  ಫೋಟೋ ಇಮೇಲ್ ಐಡಿ, ಫೋನ್ ಸಂಖ್ಯೆ ನೀಡಬೇಕಾಗುತ್ತದೆ. 

Money Saving Tips: ಹೂಡಿಕೆ ಮಾಡುವ ಮುನ್ನ ಮಹಿಳೆಯರು ಈ ಸಂಗತಿ ತಿಳಿದಿರ್ಬೇಕು

ಕಾರ್ ಡಿಟೇಲಿಂಗ್ ವ್ಯವಹಾರದಲ್ಲಿ ಲಾಭ : ನೀವು ನೀಡುವ ಸೇವೆಗಳ ಪ್ರಕಾರ ಗ್ರಾಹಕರಿಂದ ಹಣವನ್ನು ತೆಗೆದುಕೊಳ್ಳಲಾಗುತ್ತದೆ. ಕಾರಿನ ಸೇವೆಗಳಂತೆ ಗ್ರಾಹಕರು ಪಾವತಿಸಬೇಕಾಗುತ್ತದೆ. ನೀವು ಯಾವ ಸೇವೆಗೆ ಎಷ್ಟು ಹಣ ಪಡೆಯುತ್ತೀರಿ ಹಾಗೂ ಯಾವೆಲ್ಲ ಸೇವೆ ನೀಡ್ತೀರಿ ಎಂಬುದನ್ನು ಆಧರಿಸಿರುತ್ತದೆ. ಹಾಗೆ ನೀವು ಕೊಡುವ ಸೇವೆ ಮೇಲೆ ಗ್ರಾಹಕರು ಮತ್ತೆ ಮತ್ತೆ ನಿಮ್ಮ ಬಳಿ ಬರ್ತಾರೆ. ಸ್ಥಳೀಯ ಕಾರ್ ಡಿಟೇಲಿಂಗ್ ಮಾಲೀಕರಿಂದ ಅವರು ತಿಂಗಳಿಗೆ ಎಷ್ಟು ಪಡೆಯುತ್ತಿದ್ದಾರೆ ಎಂಬುದನ್ನು ವಿಚಾರಿಸಬಹುದು. ನಂತ್ರ ನೀವು ಮುಂದಿನ ಹೆಜ್ಜೆ ಇಡೋದು ಒಳ್ಳೆಯದು. 

ಕಾರ್ ಡಿಟೇಲಿಂಗ್ ವ್ಯವಹಾರದ ಮಾರ್ಕೆಟಿಂಗ್ : ಯಾವುದೇ ವ್ಯಾಪಾರಕ್ಕೆ ಮಾರ್ಕೆಟಿಂಗ್ ಸಹ ಅಗತ್ಯವಿದೆ. ನೀವು ಮಾರ್ಕೆಟಿಂಗ್ ಮಾಡಲು ಉತ್ತಮ ಮಾರ್ಗವೆಂದರೆ ಪ್ರಚಾರಕ್ಕಾಗಿ ಸ್ಥಳೀಯ ಟಿವಿಯಲ್ಲಿ ಜಾಹೀರಾತುಗಳನ್ನು ನೀಡಬಹುದು. ಕರಪತ್ರವನ್ನು ಹಂಚಬಹುದು. ವಾಟ್ಸ್ ಅಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕವೂ ನೀವು ಪ್ರಚಾರ ಮಾಡಬಹುದು. ಅನೇಕರು ಮನೆ ಮನೆಗೆ ಹೋಗಿ ಕರಪತ್ರ ನೀಡ್ತಾರೆ. ಅಗತ್ಯವೆನ್ನಿಸಿದ್ರೆ ನೀವು ಈ ಕೆಲಸ ಕೂಡ ಮಾಡಬೇಕಾಗುತ್ತದೆ. 
 

Latest Videos
Follow Us:
Download App:
  • android
  • ios