Asianet Suvarna News Asianet Suvarna News

Business Idea : ಹೆಂಗಳೆಯರನ್ನು ಸೆಳೆಯುವ ಈ ಬ್ಯುಸಿನೆಸ್ ನೀಡುತ್ತೆ ಲಾಭ

ಯಾವ್ದು ಬಂಗಾರ, ಯಾವುದು ಕೃತಕ ಅನ್ನೋದೆ ಈಗ ಗೊತ್ತಾಗಲ್ಲ. ಬಂಗಾರದ ಡಿಸೈನ್ ನಾಚಿಸುವ ಆಭರಣಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಮಹಿಳೆಯರನ್ನು ಹೆಚ್ಚು ಆಕರ್ಷಿಸುವ ಈ ಆಭರಣಗಳು ಕೈತುಂಬಾ ಆದಾಯ ತಂದು ಕೊಡುತ್ವೆ.
 

Business Idea Artificial Jewelry Business
Author
First Published Feb 7, 2023, 3:05 PM IST

ಮಹಿಳೆ ಅಂದ್ರೆ ಆಭರಣ ಎನ್ನುವ ಮಾತಿದೆ. ಬಹುತೇಕ ಎಲ್ಲ ಮಹಿಳೆಯರು ಕೂಡ ಆಭರಣ ಪ್ರಿಯರು. ಚಿನ್ನ – ಬೆಳ್ಳಿಯ ಆಭರಣ ಮಾತ್ರವಲ್ಲ ಕೃತಕ ಆಭರಣ ಧರಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಡ್ರೆಸ್ ಗೆ ತಕ್ಕಂತೆ ಅಲಂಕಾರ ಮಾಡಿಕೊಳ್ಳಲು ಬಯಸುವ ಮಹಿಳೆಯರು ಬಂಗಾರ, ಬೆಳ್ಳಿಗಿಂತ ಕೃತಕ ಆಭರಣಕ್ಕೆ ಹೆಚ್ಚು ಆಕರ್ಪಿತರಾಗ್ತಾರೆ. ಇದೇ ಕಾರಣಕ್ಕೆ ಕೃತಕ ಆಭರಣಕ್ಕೆ ಬೇಡಿಕೆ ಹೆಚ್ಚಿದೆ. ಕೃತಕ ಆಭರಣದ ವ್ಯಾಪಾರಸ್ಥರು ಉತ್ತಮ ಲಾಭಗಳಿಸ್ತಾರೆ. ನೀವೂ ವ್ಯಾಪಾರ ಮಾಡುವ ಆಲೋಚನೆಯಲ್ಲಿದ್ದರೆ ಕೃತಕ ಆಭರಣ ಕ್ಷೇತ್ರಕ್ಕೆ ಕಾಲಿಡಬಹುದು. ನಾವಿಂದು ಕೃತಕ ಆಭರಣ ವ್ಯಾಪಾರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೇವೆ.

ಕೃತಕ (Artificial)  ಆಭರಣದ ವ್ಯಾಪಾರ (Business) ಶುರು ಮಾಡೋದು ಹೇಗೆ? : ಕೃತಕ ಆಭರಣ (Jewelery) ವನ್ನು ನೀವು ಸಣ್ಣದಾಗಿ ಶುರು ಮಾಡ್ತೇನೆ ಅಂದ್ರೆ ಮನೆಯಿಂದಲೇ ಇದನ್ನು ಶುರು ಮಾಡಬಹುದು. ನಿಮ್ಮ ಸುತ್ತಲಿನ ಜನರಿಗೆ ಅದನ್ನು ಮಾರಾಟ ಮಾಡಬಹುದು. ಇಲ್ಲವೆ ಆನ್ಲೈನ್ ಮೂಲಕ ಮಾರಾಟ ಮಾಡಿ ಹಣಗಳಿಸಬಹುದು. ಈಗ ಇ ಕಾಮರ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ನೀವು ಈ ವ್ಯಾಪಾರ ಶುರು ಮಾಡಬಹುದು. ಇದ್ರಲ್ಲಿ ನಿಮ್ಮ ಖರ್ಚೇನು ಇರೋದಿಲ್ಲ. ನೀವು ಇ ಕಾಮರ್ಸ್ ವೆಬ್ಸೈಟ್ ನಲ್ಲಿರುವ ಆಭರಣಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದ್ರೆ ಸಾಕು. ವಿತರಣೆ ಜವಾಬ್ದಾರಿ ಕೂಡ ಕಂಪನಿ ಹೊರುತ್ತದೆ. ನಿಮಗೆ ಕಂಪನಿ ಕಮಿಷನ್ ನೀಡುತ್ತದೆ. ಆದ್ರೆ ನಾವಿಂದು ಕೃತಕ ಆಭರಣದ ಅಂಗಡಿ ತೆರೆಯುವ ಬಗ್ಗೆ ಮಾಹಿತಿ ನೀಡ್ತೇವೆ. ನೀವು ಅಂಗಡಿ ತೆರೆಯುತ್ತೀರಿ ಅಂದ್ರೆ ಮೊದಲು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಜನನಿಬಿಡ ಪ್ರದೇಶದಲ್ಲಿ ಅಂಗಡಿ ಶುರು ಮಾಡಿ. ಅಂಗಡಿ ಮುಂದೆ ಸ್ವಲ್ಪ ಜಾಗವನ್ನು ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿ. ನಿಮ್ಮ ಅಂಗಡಿಗೆ ಸುಂದರವಾದ ಹೆಸರನ್ನು ಇಡಬೇಕು. ಇದು ಜನರು ನಿಮ್ಮ ಅಂಗಡಿ ಗುರುತಿಸಲು ಸುಲಭವಾಗುತ್ತದೆ. 

ನೀವು ಈಗ ಸ್ವಂತ ಮನೆ ಖರೀದಿಸಲು ಆರ್ಥಿಕವಾಗಿ ಸಶಕ್ತರಾ? ಪತ್ತೆ ಹಚ್ಚೋದು ಹೇಗೆ?

ಕೃತಕ ಆಭರಣ ಮಳಿಗೆಗೆ ನೋಂದಣಿ ಮತ್ತು ಪರವಾನಗಿ : ನೀವು  ಹಳ್ಳಿ ಅಥವಾ ನಗರದಲ್ಲಿ  ಸಣ್ಣ ಪ್ರಮಾಣದಲ್ಲಿ ಆಭರಣ ಅಂಗಡಿಯನ್ನು ತೆರೆದರೆ ನೀವು ಅದಕ್ಕೆ ಜಿಎಸ್‌ಟಿ ನೋಂದಣಿ ಮಾಡಬೇಕಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಆಭರಣ ಅಂಗಡಿಯನ್ನು ತೆರೆಯುತ್ತಿದ್ದರೆ, ಇದಕ್ಕಾಗಿ ನೀವು ಜಿಎಸ್ಟಿ ನೋಂದಣಿ  ಮಾಡಬೇಕಾಗುತ್ತದೆ. 

ಕೃತಕ ಆಭರಣ ಮಳಿಗೆ ಪ್ರಚಾರ : ಈಗಿನ ದಿನಗಳಲ್ಲಿ ಪ್ರಚಾರ ಬಹಳ ಮುಖ್ಯ. ಮಳಿಗೆ ಉದ್ಘಾಟನೆಗೆ ನೀವು ಗರಿಷ್ಠ ಸಂಖ್ಯೆಯ ಜನರನ್ನು ಆಹ್ವಾನಿಸಬೇಕು. ನಿಮ್ಮ ವ್ಯಾಪಾರವನ್ನು ನೀವು ಪರಿಚಯಿಸಬೇಕು. ಸುತ್ತಮುತ್ತಲಿನ ಪ್ರದೇಶದಲ್ಲಿ ನೀವು ಟೆಂಪ್ಲೇಟ್ ಅನ್ನು ವಿತರಿಸಬಹುದು. ಟ್ರೆಂಡಿಂಗ್ ವಿನ್ಯಾಸದ ಆಭರಣಗಳನ್ನು ಇಟ್ಟುಕೊಂಡರೆ ಇದರಿಂದ ನಿಮಗೆ ಉತ್ತಮ ಲಾಭವೂ ಸಿಗುತ್ತದೆ. ಆನ್ಲೈನ್ ಮೂಲಕವೂ ನೀವು ಪ್ರಚಾರ ಕಾರ್ಯ ಮಾಡಬೇಕು. ಹಾಗೆಯೇ ಆನ್ಲೈನ್ ಮಾರಾಟದ ಸೌಲಭ್ಯ ಹೊಂದಿರಬೇಕು. 

ಕೃತಕ ಆಭರಣ ವ್ಯಾಪಾರಕ್ಕೆ ತಗಲುವ ವೆಚ್ಚ : ಆಭರಣ ವ್ಯಾಪಾರವು ಕಡಿಮೆ ವೆಚ್ಚದ ವ್ಯವಹಾರವಲ್ಲ. ಕೃತಕ ಆಭರಣದ ಮಳಿಗೆ, ವಸ್ತುಗಳ ಖರೀದಿಗೆ ಕನಿಷ್ಠ 5ರಿಂದ 10 ಲಕ್ಷ ಖರ್ಚು ಮಾಡಬೇಕಾಗುತ್ತದೆ.  

ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ: ಹೆಣ್ಣುಮಕ್ಕಳ ಭವಿಷ್ಯಕ್ಕೆ ಯಾವ ಯೋಜನೆ ಬೆಸ್ಟ್?

ಕೃತಕ ಆಭರಣ ವ್ಯಾಪಾರದಲ್ಲಿ ಲಾಭ : ಆಭರಣವು ಹೆಚ್ಚಿನ ಮಹಿಳೆಯರು ಇಷ್ಟಪಡುವ ಒಂದು ವಸ್ತುವಾಗಿದೆ. ಆದ್ದರಿಂದ ನೀವು ಉತ್ತಮ ವಿನ್ಯಾಸದ ಉತ್ತಮ ಗುಣಮಟ್ಟದ ಆಭರಣಗಳನ್ನು ಇಟ್ಟುಕೊಂಡರೆ ನೀವು ಸಾಕಷ್ಟು ಲಾಭವನ್ನು ಪಡೆಯಬಹುದು. ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಈ ವ್ಯವಹಾರವನ್ನು ಮುಂದುವರಿಸಲು ಬಯಸಿದರೆ, ನೀವು ತಿಂಗಳಿಗೆ ಲಕ್ಷದಲ್ಲಿ ಲಾಭವನ್ನು ಗಳಿಸಬಹುದು. ನಿಮ್ಮ ಮಳಿಗೆ ಇರುವ ಜಾಗ, ನಿಮ್ಮಲ್ಲಿರುವ ವಿನ್ಯಾಸ, ಆಭರಣದ ಬೆಲೆ, ನೀವು ಗ್ರಾಹಕರ ಜೊತೆ ನಡೆದುಕೊಳ್ಳುವ ರೀತಿ ಎಲ್ಲವೂ ಇಲ್ಲಿ ಮಹತ್ವಪಡೆಯುತ್ತದೆ. 
 

Follow Us:
Download App:
  • android
  • ios