ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ: ಹೆಣ್ಣುಮಕ್ಕಳ ಭವಿಷ್ಯಕ್ಕೆ ಯಾವ ಯೋಜನೆ ಬೆಸ್ಟ್?
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಅನೇಕ ಯೋಜನೆಗಳು ಲಭ್ಯವಿವೆ. ಅವುಗಳಲ್ಲಿ ಸುಕನ್ಯಾ ಸಮೃದ್ಧಿ ಹಾಗೂ ಎಲ್ಐಸಿ ಕನ್ಯಾದಾನ ಪಾಲಿಸಿಗಳು ಮುಖ್ಯವಾದವು. ಈ ಎರಡು ಯೋಜನೆಗಳು ಹೇಗೆ ಭಿನ್ನವಾಗಿವೆ? ನಿಮ್ಮ ಮಗುವಿನ ಭವಿಷ್ಯಕ್ಕೆ ಉಳಿತಾಯ ಮಾಡಲು ಯಾವ ಯೋಜನೆ ಬೆಸ್ಟ್ ? ಇಲ್ಲಿದೆ ಮಾಹಿತಿ.
Business Desk:ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಹೆಣ್ಣುಮಗುವಿನ ಕುರಿತ ಭಾವನೆಗಳು ಇಂದಿನ ಭಾರತೀಯ ಸಮಾಜದಲ್ಲಿ ನಿಧಾನವಾಗಿ ಬದಲಾವಣೆ ಕಾಣುತ್ತಿವೆ. ಸಮಾಜದಲ್ಲಿ ಹೆಣ್ಣು ಮಗುವನ್ನು ಕೂಡ ಗಂಡಿಗೆ ಸರಿಸಮನಾಗಿ ಬೆಳೆಸಲಾಗುತ್ತಿದೆ. ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಹೆಣ್ಣು ಮಕ್ಕಳ ಹೆತ್ತವರು ಅವರ ಶಿಕ್ಷಣಕ್ಕಾಗಿ ಒಂದಿಷ್ಟು ಉಳಿತಾಯ ಮಾಡಲು ಪ್ರಾರಂಭಿಸಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಅವರಿಗೆ ಹಣಕಾಸಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸುತ್ತಿದ್ದಾರೆ. ಅದರಲ್ಲೂ ಅವರ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಎದುರಾಗಬಾರದು ಎಂಬುದು ಇಂದಿನ ಪಾಲಕರ ಕಾಳಜಿ. ಹೆಣ್ಣುಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿ ಅನೇಕ ವಿಶೇಷ ಹೂಡಿಕೆ ಯೋಜನೆಗಳು ಲಭ್ಯವಿವೆ. ಅವುಗಳಲ್ಲಿ ಎಲ್ಐಸಿ ಕನ್ಯಾದಾನ ಪಾಲಿಸಿ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಪ್ರಮುಖವಾದವು. ಈ ಎರಡೂ ಯೋಜನೆಗಳ ಮುಖ್ಯ ಉದ್ದೇಶ ಭಾರತದ ಹೆಣ್ಣುಮಕ್ಕಳ ಭವಿಷ್ಯ ಸುಭದ್ರಗೊಳಿಸಲು ಅವರ ಹೆತ್ತವರಿಗೆ ಹಣಕಾಸಿನ ನೆರವು ನೀಡುವುದು. ಹಾಗಾದ್ರೆ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಎಲ್ ಐಸಿ ಕನ್ಯಾದಾನ ಪಾಲಿಸಿಯ ನಡುವೆ ಇರುವ ವ್ಯತ್ಯಾಸವೇನು? ಇವೆರಡರಲ್ಲಿ ನಿಮಗೆ ಹಾಗೂ ನಿಮ್ಮ ಮಗುವಿಗೆ ಯಾವುದು ಉತ್ತಮ? ಇಲ್ಲಿದೆ ಮಾಹಿತಿ.
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮದ ಭಾಗವಾಗಿ 2015ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು. ಹೆಣ್ಣು ಮಗುವಿಗೆ ಸುರಕ್ಷಿತ ಹಾಗೂ ಸುಭದ್ರ ಆರ್ಥಿಕ ಬುನಾದಿ ಒದಗಿಸುವ ಮೂಲಕ ಆಕೆಯ ಭವಿಷ್ಯವನ್ನು ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆತ್ತವರು ಅಥವಾ ಪಾಲಕರು ಈ ಯೋಜನೆಯಡಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಆಕೆ ಹೆಸರಲ್ಲಿ ಉಳಿತಾಯ ಖಾತೆ ತೆರೆಯಬಹುದು. ಎರಡು ಹೆಣ್ಣು ಮಕ್ಕಳಿದ್ರೆ ಅವರಿಬ್ಬರ ಹೆಸರಿನಲ್ಲೂ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಒಂದು ವೇಳೆ ಮೊದಲನೇ ಮಗು ಹೆಣ್ಣಾಗಿದ್ದು, ಎರಡನೇ ಹೆರಿಗೆಯಲ್ಲಿ ಅವಳಿ ಹೆಣ್ಣು ಮಕ್ಕಳಾದ್ರೆ ಅವರಿಬ್ಬರ ಹೆಸರಿನಲ್ಲೂ ಪ್ರತ್ಯೇಕ ಖಾತೆ ತೆರೆಯಬಹುದು. ಖಾತೆ ಹೊಂದಿರೋ ಹೆಣ್ಣು ಮಗು 21 ವರ್ಷಕ್ಕೆ ಕಾಲಿಟ್ಟ ನಂತರ ಠೇವಣಿ ಹಿಂಪಡೆಯಲು ಅಧಿಕಾರ ಹೊಂದಿರುತ್ತಾಳೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಪ್ರಸ್ತುತ ಶೇ. 7.6 ಬಡ್ಡಿದರವಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯ್ತಿ ಕೂಡ ಇದೆ. ಎಸ್ ಎಸ್ ವೈಯಲ್ಲಿ ತಿಂಗಳಿಗೆ 250ರೂ. ನಿಂದ 1.5 ಲಕ್ಷ ರೂ. ತನಕ ಠೇವಣಿ ಇಡಬಹುದು.
ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ; ಶೀಘ್ರದಲ್ಲೇ ಶೇ.4ರಷ್ಟು ಡಿಎ ಏರಿಕೆ ಸಾಧ್ಯತೆ
ಎಲ್ಐಸಿ ಕನ್ಯಾದಾನ ಪಾಲಿಸಿ
ಎಲ್ಐಸಿ ಕನ್ಯಾದಾನ ಪಾಲಿಸಿ ಎಲ್ ಐಸಿ ಜೀವನ್ ಲಕ್ಷ್ಯ ಯೋಜನೆಯ ಇನ್ನೊಂದು ರೂಪವಾಗಿದೆ. ಮಗಳ ಭವಿಷ್ಯದ ಸುರಕ್ಷತೆಗೆ ಹೂಡಿಕೆ ಮಾಡಲು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಉಳಿತಾಯ ಹಾಗೂ ಸುರಕ್ಷತೆ ಎರಡೂ ಜೊತೆಯಾಗಿದೆ. ಎಲ್ಐಸಿ ಕನ್ಯಾದಾನ ಪಾಲಿಸಿ ಕಡಿಮೆ ಪ್ರೀಮಿಯಂ ಪಾವತಿಗೆ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ. ಈ ಪಾಲಿಸಿ ಮೆಚ್ಯೂರಿಟಿ ಬಳಿಕ ಪಾಲಿಸಿದಾರರಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸುತ್ತದೆ. ಆಕಸ್ಮಾತ್ ಪಾಲಿಸಿದಾರರು ಮರಣ ಹೊಂದಿದ್ರೆ ಪ್ರೀಮಿಯಂ ರದ್ದುಗೊಳಿಸಲಾಗುತ್ತದೆ. ಒಂದು ವೇಳೆ ಅಪಘಾತದಲ್ಲಿ ಸಾವನ್ನಪ್ಪಿದರೆ, 10ಲಕ್ಷ ರೂ. ನೀಡಲಾಗುತ್ತದೆ. ಮೆಚ್ಯೂರಿಟಿ ದಿನಾಂಕದ ತನಕ ವಾರ್ಷಿಕ 50,000ರೂ. ಪಾವತಿಸಲಾಗುತ್ತದೆ. ಮೆಚ್ಯೂರಿಟಿಗೂ ಮುನ್ನ ಮೂರು ವರ್ಷಗಳ ತನಕ ನಿರ್ದಿಷ್ಟ ಮೊತ್ತಕ್ಕೆ ಲೈಪ್ ರಿಸ್ಕ್ ಪ್ರೊಟೆಕ್ಷನ್ ಕೂಡ ಸಿಗಲಿದೆ. ಭಾರತೀಯ ನಾಗರಿಕರು ಹಾಗೂ ಅನಿವಾಸಿ ಭಾರತೀಯರು ಈ ಸೇವೆ ಬಳಸಿಕೊಳ್ಳಬಹುದು.
ಎಲ್ಐಸಿಯ ಈ ಪಾಲಿಸಿಯಲ್ಲಿ ದಿನಕ್ಕೆ 45ರೂ. ಹೂಡಿಕೆ ಮಾಡಿದ್ರೆ 25ಲಕ್ಷ ರೂ. ರಿಟರ್ನ್!