ನವದೆಹಲಿ(ಜೂ.30): ಅಂತೂ ಇಂತೂ ಬಿಎಸ್‌ಎನ್‌ಎಲ್‌ನ ಎಲ್ಲ ಉದ್ಯೋಗಿಗಳಿಗೆ ಜೂನ್ ತಿಂಗಳ ವೇತನ ಪಾವತಿಯಾಗಿದೆ.

ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ದೇಶದ ಬಹುದೊಡ್ಡ ದೂರಸಂಪರ್ಕ ಸಂಸ್ಥೆ, ತನ್ನ ನೌಕರರಿಗೆ ವೇತನ ನೀಡಲೂ ಪರದಾಡುತ್ತಿತ್ತು. ಇದೀಗ ಜೂನ್ ತಿಂಗಳ ಎಲ್ಲ ನೌಕರರ ಸುಮಾರು 750 ಕೋಟಿ ರೂ. ವೇತನ ಪಾವತಿಸಿದೆ. 

ಸಂಸ್ಥೆಗೆ ಒಟ್ಟು 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 750 ಕೋಟಿ ರೂ. ನೌಕರರ ವೇತನ, 800 ಕೋಟಿ ಸಾಲ ಮರುಪಾವತಿ ಮತ್ತು ಉಳಿದ ಹಣ ಕಾರ್ಯಾಚರಣೆ ಮುಂದುವರಿಕೆಗೆ ನೀಡಲಾಗಿದೆ. 

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬಿಎಸ್‌ಎನ್‌ಎಲ್‌ಗೆ ಒಟ್ಟು 14 ಸಾವಿರ ಕೋಟಿ ರೂ.ಗಳ ಅವಶ್ಯಕತೆ ಇದ್ದು, ಸರ್ಕಾರ ಕಾಲ ಕಾಲಕ್ಕೆ ಹಣ ಪಾವತಿ ಮಾಡುವ ಭರವಸೆ ನೀಡಿದೆ ಎನ್ನಲಾಗಿದೆ.