ಬಿಎಸ್ಎನ್‌ಎಲ್ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಹಲವು ಆಫರ್‌ಗಳನ್ನು ಬಿಎಸ್ಎನ್‌ಎಲ್ ನೀಡುತ್ತಿದೆ. ಇದೀಗ ಇತರ ಎಲ್ಲಾ ನೆಟ್‌ವರ್ಕ್‌ಗಿಂತ ಕಡಿಮೆ ಬೆಲೆಯಲ್ಲಿ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ 28 ದಿನ ವ್ಯಾಲಿಡಿಟಿ ಸೇರಿದಂತೆ ಭರಪೂರ ಕೂಡುಗೆ ನೀಡಿದೆ.

ನವದೆಹಲಿ(ನ.01) ಬಿಎಸ್ಎನ್‌ಎಲ್ ಭಾರತದಲ್ಲಿ ಹೊಸ ಅಧ್ಯಾಯ ಬರೆದಿದೆ. ನೆಟ್‌ವರ್ಕ್ ವಿಸ್ತರಿಸುತ್ತಿದೆ. ಇತರ ನೆಟ್‌ವರ್ಕ‌ಗಳಿಂದ ಬಿಎಸ್ಎನ್‌ಎಲ್‌ಗೆ ಪೋರ್ಟ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಬಿಎಸ್ಎನ್‌ಎಲ್ ಕೂಡ ಉತ್ತಮ ನೆಟ್‌ವರ್ಕ್, 4ಜಿ ಇಂಟರ್ನೆಟ್ ಸೇರಿದಂತೆ ಹಲವು ಸೌಲಭ್ಯ ನೀಡಿದೆ. ಇದರ ಜೊತೆ ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಚ್ ಆಫರ್ ನೀಡುತ್ತಿದೆ. ಪ್ರಮುಖವಾಗಿ ಇತರ ನೆಟ್‌ವರ್ಕ್ ರೀಚಾರ್ಜ್ ಬೆಲೆ ದುಬಾರಿಯಾಗುತ್ತಿರುವ ಕಾರಣ ಗ್ರಾಹಕರು ಬಿಎಸ್ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಇದೀಗ ಬಿಎಸ್ಎನ್‌ಎಲ್ ಅತೀ ಕಡಿಮೆ ಬೆಲೆ ಅಂದರೆ ಕೇವಲ 187 ರೂಪಾಯಿಗೆ ಅದ್ಭುತ ಕೊಡುಗೆ ನೀಡಿದೆ.

ಬಿಎಸ್ಎನ್‌ಎಲ್‌ನಲ್ಲಿ 187 ರೂಪಾಯಿಗೆ ರೀಚಾರ್ಜ್ ಮಾಡಿದರೆ ಸಾಕು, ಪ್ರತಿ ದಿನ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, 28 ದಿನ ವ್ಯಾಲಿಟಿಡಿ ನೀಡುತ್ತಿದೆ. ಪ್ರತಿ ದಿನದ 1.5 ಜಿಬಿ ಡೇಟಾ ಮುಗಿದ ಬಳಿಕ ಇಂಟರ್ನೆಟ್ ಸ್ಪೀಡ್ 40Kbpsಗೆ ಇಳಿಕೆಯಾಗಲಿದೆ. 28 ದಿನ 1.5 ಜಿಬಿ ಡೇಟಾ ಹಾಗೂ ಉಚಿತ ಕಾಲ್ ಇತರ ನೆಟ್‌ವರ್ಕ್‌ಗಳಲ್ಲಿ 300ರೂಪಾಯಿ ಅಸುಪಾಸಿನಲ್ಲಿದೆ. ಆದರೆ ಅತೀ ಕಡಿಮೆ ಬೆಲೆಯಲ್ಲಿ ಬಿಎಸ್ಎನ್‌ಎಲ್ ಈ ಆಫರ್ ನೀಡುತ್ತಿದೆ. 

BSNL ಮಾಸ್ಟರ್‌ಸ್ಟ್ರೋಕ್, ಸಿಮ್- ನೆಟ್‌ವರ್ಕ್ ಯಾವುದು ಬೇಡ, ನೇರ ಕಾಲ್ ಸಾಧ್ಯ!

ಬಿಎಸ್ಎನ್‌ಎಲ್‌ ಇದರ ಜೊತೆಗೆ ಪ್ರತಿ ದಿನ ಹೆಚ್ಚುವರಿ ಡೇಟಾ ಸೇರಿದಂತೆ ಹಲವು ಆಫರ್ ನೀಡಿದೆ. ಇನ್ನು ಪ್ರತಿ ದಿನ 2 ಜಿಬಿ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ 349 ರೂಪಾಯಿ ರೀಚಾರ್ಜ್ ಪ್ಲಾನ್ ಘೋಷಿಸಿದೆ. ವಿಶೇಷ ಅಂದರೆ ಈ ಪ್ಲಾನ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಡಿಯೋ ಕ್ಲೌಟ್ ಸೌಲಭ್ಯವೂ ಸಿಗಲಿದೆ. 349 ರೂಪಾಯಿ ಪ್ಲಾನ್‌ನಲ್ಲಿ ಪ್ರತಿ ದಿನ 2ಜಿಬಿ ಡೇಟಾ ಸಿಗಲಿದೆ,ಇನ್ನು 28 ದಿನ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯವೂ ಸಿಗಲಿದೆ.

ಒಟಿಟಿ ಸೇರಿದಂತೆ ಮನರಂಜನಾ ಪ್ಲಾನ್ ಬಯಸುವವರಿಗಾಗಿ ಬಿಎಸ್ಎನ್‌ಎಲ್‌ ವಿಶೇಷ ರೀಚಾರ್ಜ್ ಪ್ಲಾನ್ ನೀಡುತ್ತಿದೆ. 448 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ 12 ಜನಪ್ರಿಯ ಒಟಿಟಿ ಆ್ಯಕ್ಸೆಸ್, ಜಿಯೋ ಟಿವಿ, ಡಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೌಲಭ್ಯ ಕೂಡ ಸಿಗಲಿದೆ. ಪ್ರತಿ ದಿನ 2 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಉಚಿತ ಎಸ್‌ಎಂಎಸ್ ಸೇರಿದಂತೆ ಇತರ ಸೌಲಭ್ಯಗಳು ಸಿಗಲಿದೆ. ಇದರ ವ್ಯಾಲಿಟಿಡಿ ಒಟ್ಟು 28 ದಿನ ಇರಲಿದೆ. ಪ್ರತಿ ದಿನ 3ಜಿಬಿ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ 449 ರೂಪಾಯಿ ಪ್ಲಾನ್ ಘೋಷಿಸಲಾಗಿದೆ. ಈ ಪ್ಲಾನ್ ಅಡಿಯಲ್ಲಿ ಪ್ರತಿ ದಿನ 3ಜಿಬಿ ಉಚಿತ ಡೇಟಾ ಸಿಗಲಿದೆ. 28 ದಿನ ವ್ಯಾಲಿಟಿಡಿ ಹೊಂದಿರುವ ಈ ಪ್ಲಾನ್ ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್, ಜಿಯೋ ಟಿವಿ, ಜಿಯೋ ಕ್ಲೌಡ್ ಹಾಗೂ ಜಿಯೋ ಸಿನಿಮಾ ಸಬ್‌ಸ್ಕ್ರಿಪ್ಶನ್ ಸಿಗಲಿದೆ.

BSNLನಿಂದ ಅತೀ ಕಡಿಮೆ ಪ್ಲಾನ್ ಘೋಷಣೆ: 108 ರೂಗೆ ಅನ್‌ಲಿಮಿಟೆಡ್ ಕಾಲ್, 1ಜಿಬಿ ಡೇಟಾ, 28 ದಿನ!

ಜಿಯೋ, ಎರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ನೆಟವರ್ಕ್ ಇತ್ತೀಚೆಗೆ ರೀಚಾರ್ಜ್ ಪ್ಲಾನ್ ದುಬಾರಿಯಾದ ಕಾರಣ ಗ್ರಾಹಕರು ಅಸಮಾಧಾನಗೊಂಡಿದ್ದಾರೆ. ಇದರ ಪರಿಣಾಮ ಬಿಎಸ್ಎನ್‌ಎಲ್‌ ಹೆಚ್ಚಿನ ಗ್ರಾಹಕರನ್ನು ಪಡೆದುಕೊಳ್ಳುತ್ತಿದೆ. ಗ್ರಾಮ ಹಾಗೂ ಹಳ್ಳಿಗಳಲ್ಲಿ ನೆಟ್‌ವರ್ಕ್ ವೃದ್ಧಿಸುತ್ತಿದೆ. ಈ ವರ್ಷದಲ್ಲಿ 2,000ಕ್ಕೂ ಹೆಚ್ಚೂ ಟವರ್‌ಗಳನ್ನು ಸ್ಥಾಪಿಸಲು ಬಿಎಸ್ಎನ್‌ಎಲ್‌ ಅನುಮೋದನೆ ನೀಡಿದೆ. ಮುಂದಿನ ವರ್ಷದ ಆರಂಭದಲ್ಲಿ ದೇಶದ ಮೂಲೆ ಮೂಲೆಯಲ್ಲಿ ಬಿಎಸ್ಎನ್‌ಎಲ್‌ ಟವರ್ ಹಾಗೂ ನೆಟ್‌ವರ್ಕ್ ಇರಲಿದೆ. ಇಷ್ಟೇ ಅಲ್ಲ 5ಜಿ ಸೇವೆ ಕೂಡ ಆರಂಭಗೊಳ್ಳಲಿದೆ.