ಬಿಎಸ್‌ಎನ್‌ಎಲ್ ಮಾಸ್ಟರ್‌ಸ್ಟ್ರೋಕ್‌ಗೆ ಜಿಯೋ, ಏರ್‌ಟೆಲ್, ವಿಐ ಟೆಲಿಕಾಂ ಸರ್ವೀಸ್ ತತ್ತರಿಸಿದೆ. ಇದೀಗ ಬಿಎಸ್‌ಎನ್‌ಎಲ್ ಡಿ2ಡಿ ತಂತ್ರಜ್ಞಾನದ ಮೂಲಕ ಗ್ರಾಹಕರು ಯಾವುದೇ ಹಳ್ಳಿಯಾದರೂ, ಟವರ್, ನೆಟ್‌ವರ್ಕ್ ಇಲ್ಲದ  ಊರಿನಿಂದಲೂ ಕಾಲ್ ಮಾಡಲು ಸಾಧ್ಯವಿದೆ.

ನವದೆಹಲಿ(ಅ.18) ಬಿಎಸ್‌ಎನ್‌ಎಲ್ ಇದೀಗ ಪ್ರತಿ ದಿನ ಪ್ರತಿಸ್ಪರ್ಧಿಗಳಿಗೆ ಒಂದಲ್ಲಾ ಒಂದು ಶಾಕ್ ನೀಡುತ್ತಿದೆ. ಕಡಿಮೆ ರೀಚಾರ್ಜ್ ಪ್ಲಾನ್, ಡೇಟಾ ಆಫರ್ ಸೇರಿದಂತೆ ಹಲವು ಆಫರ್ ನಡುವೆ ಇದೀಗ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ಮಾಡಿದೆ. ಬಿಎಸ್‌ಎನ್‌ಎಲ್ ಇದೀಗ ಡೈರೆಕ್ಟ್ 2 ಡಿವೈಸ್(D2D)ತಂತ್ರಜ್ಞಾನದ ಮೂಲಕ ಯಾವುದೇ ನೆಟ್‌ವರ್ಕ್, ಸಿಮ್ ಇಲ್ಲದೆ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತ ಮಾಡುತ್ತಿದೆ. ಇದರ ಪ್ರಯೋಗ ಯಶಸ್ವಿಯಾಗಿದೆ. ಶೀಘ್ರದಲ್ಲೇ ಈ ಸೇವೆ ಭಾರತೀಯರಿಗೆ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್ ಸ್ಯಾಟಲೈಟ್ ಸಂವಹನ ಕ್ರಾಂತಿ ಇದೀಗ ಟೆಲಿಕಾಂ ಕ್ಷೇತ್ರದ ಬುಡಮೇಲು ಮಾಡುವಂತಿದೆ. ಕಾರಣ ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಕರೆ ಮಾಡಲು ಯಾವುದೇ ಸಿಮ್ ಬೇಕಿಲ್ಲ, ಹಳ್ಳಿಯಾಗಲೆ, ಕಾಡಾಗಲಿ ಟವರ್, ನೆಟ್‌ವರ್ಕ್ ಇರಬೇಕಿಲ್ಲ. ಎಲ್ಲವೂ ಸ್ಯಾಟಲೈಟ್ ಮೂಲಕವೇ ಸಂವಹನ ನಡೆಯಲಿದೆ. ಆ್ಯಂಡ್ರಾಯ್ಡ್, ಐಒಎಸ್ ಮಾತ್ರವಲ್ಲ, ಸ್ಮಾರ್ಟ್‌ವಾಚ್ ಸೇರಿದಂತೆ ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು ಕಾಲ್ ಮಾಡಲು ಸಾಧ್ಯವಿದೆ. ಕಾರು ಬಳಕೆದಾರರು ಕೂಡ ಕಾರಿನಲ್ಲಿರುವ ಸ್ಮಾರ್ಟ್ ಗ್ಯಾಜೆಟ್ ಮೂಲಕ ಸುಲಭವಾಗಿ ಕರೆ ಮಾಡಲು ಸಾಧ್ಯವಿದೆ.

BSNLನಿಂದ ಅತೀ ಕಡಿಮೆ ಪ್ಲಾನ್ ಘೋಷಣೆ: 108 ರೂಗೆ ಅನ್‌ಲಿಮಿಟೆಡ್ ಕಾಲ್, 1ಜಿಬಿ ಡೇಟಾ, 28 ದಿನ!

ಪ್ರಮುಖವಾಗಿ ಈ ಸೇವೆ ನೆಟ್‌ವರ್ಕ್ ಇಲ್ಲದ, ರಿಮೂಟ್ ವಲಯಗಳಲ್ಲಿ ಮೊದಲ ಹಂತದಲ್ಲಿ ಬಳಕೆಯಾಗಲಿದೆ. ಕರೆ ಮಾಡಲು ಮೊಬೈಲ್ ಫೋನ್ ಬೇಕೆಂದಿಲ್ಲ. ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು, ನೇರವಾಗಿ ಸ್ಯಾಟಲೈಟ್ ಕಮ್ಯೂನಿಕೇಶನ್ ಮೂಲಕ ಸಂಪರ್ಕ ಸಾಧ್ಯವಿದೆ. ಈ ಮೂಲಕ ಮೂಲೆ ಮೂಲೆಯಲ್ಲರುವ ಮಂದಿಗೆ ಸಂಪರ್ಕ ಸಾಧ್ಯವಾಗಿಸಲು ಬಿಎಸ್‌ಎನ್‌ಎಲ್ ಮಹತ್ತರ ಹೆಜ್ಜೆ ಇಟ್ಟಿದೆ.

ವಯಾಸ್ಯಾಟ್ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಈಗಾಗಲೇ ಡಿ2ಡಿ ಪ್ರಯೋಗ ಯಶಸ್ವಿಯಾಗಿ ಮಾಡಿದೆ. ಇದೀಗ ಹಂತ ಹಂತವಾಗಿ ಡಿ2ಡಿ ಸ್ಯಾಟಲೈಟ್ ಕಮ್ಯೂನಿಕೇಶನ್ ಜಾರಿಯಾಗಲಿದೆ. ಈ ಮೂಲಕ ಭಾರತದಲ್ಲಿ ರಿಮೂಟ್ ಏರಿಯಾದಲ್ಲೂ ಕರೆ, ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ. ಟುವೇ ಮೇಸೇಜಿಂಗ್, ಎಸ್ಒಎಸ್ ಮೇಸೇಜಿಂಗ್ ಸೇರಿದಂತೆ ಎರಡು ಮಾದಿರಯಲ್ಲಿ ಪ್ರಯೋಗ ನಡೆಸಲಾಗಿದೆ. ಸರಿಸುಮಾರು 36,000 ಕಿಲೋಮೀಟರ್ ದೂರದಲ್ಲಿರುವ ಭೂಸ್ಥಿರ ಎಲ್ ಬ್ಯಾಂಡ್ ಉಪಗ್ರಹಗಳಿಗೆ ಸಂದೇಶ ಕಳುಹಿಸಿದ ಪ್ರಯೋಗ ಯಶಸ್ವಿಯಾಗಿದೆ. ಸೆಲ್ ಬಳಕೆದಾರರಿಗೆ ಸ್ಯಾಟಲೈಟ್ ಸಂಪರ್ಕ ನೀಡುವ ಮೂಲಕ ಹೊಸ ಸಂವಹನಕ್ಕೆ ನಾಂದಿ ಹಾಡಲಾಗುತ್ತಿದೆ.

2ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, 105 ದಿನ ವ್ಯಾಲಿಟಿಡಿ; BSNLನಿಂದ ದಿನಕ್ಕೆ 7 ರೂಪಾಯಿ ಪ್ಲಾನ್!