BSNLನಿಂದ ಅತೀ ಕಡಿಮೆ ಪ್ಲಾನ್ ಘೋಷಣೆ: 108 ರೂಗೆ ಅನ್‌ಲಿಮಿಟೆಡ್ ಕಾಲ್, 1ಜಿಬಿ ಡೇಟಾ, 28 ದಿನ!

ಬಿಎಸ್ಎನ್ಎಲ್ ಇದೀಗ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಕೇವಲ 108 ರೂಪಾಯಿ ಮಾತ್ರ. 28 ದಿನ ವ್ಯಾಲಿಟಿಡಿ, ಪ್ರತಿ ದಿನ 1 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ನೀಡಿದೆ.

BSNL affordable offer 28 days validity 1gb free data unlimited calls under rs 108 plan ckm

ಬೆಂಗಳೂರು(ಅ.13) ಬಿಎಸ್ಎನ್ಎಲ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಜುಲೈ ತಿಂಗಳಲ್ಲಿ 29 ಲಕ್ಷ ಗ್ರಾಹಕರು ಇತರ ನೆಟ್‌ವರ್ಕ್‌ಗಳಿಂದ ಬಿಎಸ್ಎನ್ಎಲ್‌ಗೆ ಪೋರ್ಟ್ ಆಗಿದ್ದಾರೆ. ಹೀಗಾಗಿ ಬಿಎಸ್ಎನ್ಎಲ್ ಇದೀಗ ತನ್ನ ಹೊಸ ಗ್ರಾಹಕರಿಗೆ ಇದೀಗ ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಕೇವಲ 108 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, 28 ದಿನ ವ್ಯಾಲಿಟಿಡಿ ಸಿಗಲಿದೆ. ಇಷ್ಟೇ ಅಲ್ಲ ಪ್ರತಿ ದಿನ 1 ಜಿಬಿ ಉಚಿತ ಡೇಟಾ, ಪ್ರತಿ ದಿನ ಅನ್‌ಲಿಮಿಟೆಡ್ ಕಾಲ್ ಹಾಗೂ ಒಟ್ಟು 500 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.

108 ರೂಪಾಯಿ ಪ್ಲಾನ್ ಹೊಸದಾಗಿ ಬಿಎಸ್ಎನ್ಎಲ್ ಆಯ್ಕೆ ಮಾಡಿಕೊಳ್ಳುವ ಅಥವಾ ಇತರ ನೆಟ್‌ವರ್ಕ್‌ನಿಂದ ಪೋರ್ಟ್ ಆಗಿ ಬರುವ ಗ್ರಾಹಕರಿಗೆ ಸಿಗಲಿದೆ. ಫಸ್ಟ್ ರೀಚಾರ್ಜ್ ಕೂಪನ್ ಅಡಿಯಲ್ಲಿ ಈ 108 ರೂಪಾಯಿ ಪ್ಲಾನ್ ಲಭ್ಯವಿದೆ. ಈ ರೀಚಾರ್ಜ್ ಮಾಡಿಕೊಂಡರೆ ಸರಿಸುಮಾರು 1 ತಿಂಗಳು ನಿಶ್ಚಿಂತೆಯಿಂದ ಡೇಟಾ, ಕಾಲ್, ಎಸ್ಎಂಎಸ್ ಬಳಕೆ ಮಾಡಬಹುದು. ಇಷ್ಟು ಕಡಿಮೆ ಮೊತ್ತಕ್ಕೆ ದೇಶದ ಇತರ ಯಾವದೇ ಟೆಲಿಕಾಂ ಸರ್ವೀಸ್ ಆಪರೇಟರ್ ಆಪರ್ ಪ್ಲಾನ್ ನೀಡಿಲ್ಲ. ಇಷ್ಟೇ ಇತ್ತರ ಬಿಎಸ್ಎನ್ಎಲ್ ಇತರ ಪ್ಲಾನ್‌ಗಳು ಪ್ರತಿಸ್ಪರ್ಧಿಗಳ ರೀಚಾರ್ಜ್ ಪ್ಲಾನ್ ಮೊತ್ತಕ್ಕಿಂತ ಕಡಿಮೆ ಇದೆ.

BSNL ಘೋಷಣೆಗೆ ಬೆಚ್ಚಿದ ಅಂಬಾನಿ, ಕರ್ನಾಟಕದ ಕಂಪನಿ ಜೊತೆ ಸೇರಿ ಸ್ಮಾರ್ಟ್‌ಫೋನ್ ಉತ್ಪಾದನೆ!

ಬಿಎಸ್ಎನ್ಎಲ್‌ನತ್ತ ಹೆಚ್ಚಿನ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಈ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಿಎಸ್ಎನ್ಎಲ್ ಈ 108 ರೂಪಾಯಿ ಪ್ಲಾನ್ ಘೋಷಿಸಿದೆ. ಹೊಸ ಪ್ಲಾನ್ ಘೋಷಿಸುತ್ತಿದ್ದಂತೆ ಇದೀಗ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ 4ಜಿ ಸರ್ವೀಸ್ ನೆಟ್‌ವರ್ಕ್ ವಿಸ್ತರಿಸುವ ಬಿಎಸ್ಎನ್ಎಲ್  ಮುಂದಿನ ವರ್ಷದ ಆರಂಭದಲ್ಲಿ 5ಜಿ ನೆಟ್‌ವರ್ಕ್ ಸೇವೆ ಪರಿಚಯಿಸಲು ಸಜ್ಜಾಗಿದೆ.

ಅಕ್ಟೋಬರ್ ಅಂತ್ಯದೊಳಗೆ 21 ಸಾವಿರ ಟವರ್ ಸ್ಥಾಪನೆಗೆ ಬಿಎಸ್ಎನ್ಎಲ್ ಮುಂದಾಗಿದೆ. ಈ ಮೂಲಕ ಗ್ರಾಹಕರಿಂದ ಕೇಳಿಬರುತ್ತಿರುವ ನೆಟ್‌ವರ್ಕ್ ಸಮಸ್ಯೆಗೆ ಅಂತ್ಯಹಾಡಲು ಮಹತ್ವದ ಕ್ರಮ ಕೈಗೊಂಡಿದೆ. ಕೆಲ ಗ್ರಾಹಕರು ಬಿಎಸ್ಎನ್ಎಲ್ ನೆಟ್‌ವರ್ಕ್ ಸಮಸ್ಯೆ ಕುರಿತು ದೂರು ನೀಡಿದ್ದಾರೆ. ಹೀಗಾಗಿ ಅಕ್ಟೋಬರ್ ಅಂತ್ಯದ ವೇಳೆ ಬಹುತೇಕ ನೆಟ್‌ವರ್ಕ್ ಸಮಸ್ಯೆಗಳು ಅಂತ್ಯವಾಗಲಿದೆ ಅನ್ನೋದು ಬಿಎಸ್ಎನ್ಎಲ್ ವಿಶ್ವಾಸ.

ಹೊಸ ಹೊಸ ಪ್ಲಾನ್ ಮೂಲಕ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆಯನ್ನೂ ವಿಸ್ತರಿಸುತ್ತಿದೆ. ಪ್ರಮುಖವಾಗಿ ಇತರ ಖಾಸಗಿ ಟೆಲಿಕಾಂ ಆಪರೇಟರ್ ರೀಚಾರ್ಜ್ ಸೇರಿದಂತೆ ಸರ್ವೀಸ್ ಪ್ಲಾನ್ ಬೆಲೆ ದುಬಾರಿ ಮಾಡಿದ ಬಳಿಕ ಹಲವರು ಬಿಎಸ್ಎನ್ಎಲ್ ನೆಟ್‌ವರ್ಕ್ ಆಯ್ಕೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಖಾಸಗಿ ಟೆಲಿಕಾಂ ಕೂಡ ಪೈಪೋಟಿಯಲ್ಲಿ ಇದೀಗ ಆಫರ್ ಘೋಷಿಸುತ್ತಿದೆ.

BSNL ಮಾಸ್ಟರ್‌ಸ್ಟ್ರೋಕ್‌ಗೆ ಬೆಚ್ಚಿದ ಜಿಯೋ,ಏರ್‌ಟೆಲ್, ಗೇಮ್ ಚೇಂಜರ್ ಪ್ಲಾನ್ ಘೋಷಣೆ!

Latest Videos
Follow Us:
Download App:
  • android
  • ios