ಅನ್‌ಲಿಮಿಟೆಡ್ ಕಾಲ್, 600 ಜಿಬಿ ಡೇಟಾ: ಬಿಎಸ್ಎನ್‌ಎಲ್ 1 ವರ್ಷದ ಪ್ಲಾನ್ ಜಾರಿ!
ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಿಎಸ್‌ಎನ್‌ಎಲ್ ಇದೀಗ 365 ದಿನದ ಪ್ಲಾನ್ ಘೋಷಿಸಿದೆ. ಪ್ರತಿ ದಿನ ಅನ್‌ಲಿಮಿಡ್ ಕಾಲ್, ಒಟಿಟಿ ಸೇರಿದಂತೆ ಹಲವು ಸೌಲಭ್ಯ, 600 ಜಿಬಿ ಡೇಟಾ ಸೇರಿದಂತೆ ಹಲವು ಸೌಲಭ್ಯಗಳು ಪ್ಲಾನ್‌ನಲ್ಲಿದೆ.
ಬೆಂಗಳೂರು(ಸೆ.01) ಭಾರತದಲ್ಲಿ ಟೆಲಿಕಾಂ ಕ್ಷೇತ್ರಗಳ ಪೈಪೋಟಿ ತೀವ್ರಗೊಳ್ಳುತ್ತಿದೆ. ಒಂದೆಡೆ ಜಿಯೋ, ಎರ್ಟೆಲ್ ಹಾಗೂ ವಿಐ ಪೈಪೋಟಿಯಲ್ಲಿ ಆಫರ್ ನೀಡುತ್ತಿದೆ. ಇತ್ತ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಇದೀಗ ಹೊಸ ಹೊಸ ಆಫರ್ ಘೋಷಿಸುತ್ತಿದೆ. ಒಂದು ವರ್ಷದ ಹೊಸ ಪ್ಲಾನ್ ಬಿಎಸ್‌ಎನ್‌ಎಲ್ ಘೋಷಿಸಿದೆ. ಈ ಪ್ಲಾನ್‌ನಲ್ಲಿ ಪ್ರತಿ ದಿನ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಸಿಗಲಿದೆ. ಜೊತೆಗೆ ಒಟಿಟಿ ಸೇರಿದಂತೆ ಹಲವು ಎಂಟರ್ಟೈನ್ಮೆಂಟ್ ಪ್ಲಾಟ್‌ಫಾರ್ಮ್ ಸಿಗಲಿದೆ. ಬರೋಬ್ಬರಿ 600 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.
ಬಿಎಸ್‌ಎನ್‌ಎಲ್ ಒಂದು ವರ್ಷದ ಪ್ಲಾನ್ ಬೆಲೆ 2,999 ರೂಪಾಯಿ. ಆಂದರೆ ಪ್ರತಿ ತಿಂಗಳಿಗೆ 250 ರೂಪಾಯಿ ರೀಚಾರ್ಜ್ ಮಾಡಿದಂತೆ ಆಗಲಿದೆ. ಒಂದು ವರ್ಷ ವ್ಯಾಲಿಟಿಡಿ ಇರಲಿದೆ. ಒಟ್ಟು 600 ಜೆಬಿ ಡೇಟಾ ಸಿಗಲಿದೆ. ಈ ಡೇಟಾ ಮುಗಿದರೂ ಚಿಂತೆ ಇಲ್ಲ. ಬಳಿಕ 40 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಕಾರ್ಯನಿರ್ವಹಸಲಿದೆ. ಪ್ರತಿ ದಿನ 100 ಎಸ್‌ಎಸ್ಎಸ್ ಉಚಿತವಾಗಿ ಸಿಗಲಿದೆ.
160 ದಿನ 320 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್: ಪೈಪೋಟಿ ನಡುವೆ BSNL ಗ್ರಾಹಕರಿಗೆ ಭರ್ಜರಿ ಆಫರ್!
ಒಮ್ಮೆ ರೀಚಾರ್ಜ್ ಮಾಡಿದರೆ ಸಾಕು, ವರ್ಷವಿಡಿ ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಬಹುದು. ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಿಎಸ್‌ಎನ್‌ಎಲ್ ಇತ್ತೀಚೆಗೆ ಭಾರಿ ಬದಲಾವಣೆ ಮಾಡಿಕೊಂಡಿದೆ. 4ಜಿ ಸೇವೆ ಲಾಂಚ್ ಬಳಿಕ ಬಿಎಸ್‌ಎನ್‌ಎಲ್ ತ್ವರಿತಗತಿಯಲ್ಲಿ ಗ್ರಾಹಕರ ಸಂಖ್ಯೆಯೂ ಬೆಳೆದಿದೆ. ಜಿಯೋ, ಎರ್ಟೆಲ್, ವಿಐ ರಿಚಾರ್ಜ್ ಪ್ಲಾನ್ ದರ ಹೆಚ್ಚಿಸಿದ ಬಳಿಕ ಹಲವರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಿದ್ದಾರೆ.
ಶೀಘ್ರದಲ್ಲೇ ಬಿಎಸ್‌ಎನ್‌ಎಲ್ 5ಜಿ ಸೇವೆ ಲಾಂಚ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಕೆಲ ವಿಶೇಷ ಆಫರ್ ಕೂಡ ಘೋಷಿಸುತ್ತಿದೆ. ಬಿಎಸ್‌ಎನ್‌ಎಲ್ ಈಗಾಗಲೇ ನೆಟ್‌ವರ್ಕ್ ಫ್ರೀಕ್ರೆನ್ಸಿ ಹೆಚ್ಚಿಸಿದೆ.ದೇಶದ ಹಳ್ಳಿ ಹಳ್ಳಿಯಲ್ಲಿ ಬಿಎಸ್‌ಎನ್‌ಎಲ್ ನೆಟವರ್ಕ್ ಲಭ್ಯವಿದೆ. ಈ ಹಿಂದೆ ಫ್ರೀಕ್ವೆನ್ಸಿ ಕಡಿಮೆ ಇತ್ತು. ಆದರೆ ಇದೀಗ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಇದರ ಜೊತೆಗೆ ಹೊಸ ಆಫರ್ ಜಾರಿಗೆ ತಂದಿದ್ದು, ಗ್ರಾಹಕರನ್ನು ಸೆಳೆಯಲು ಆರಂಭಿಸಿದೆ. ಜೊತೆಗೆ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಾ ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇತ್ತೀಚೆಗೆ 160 ದಿನದ ಉತ್ತಮ ರಿಚಾರ್ಜ್ ಪ್ಲಾನ್ ಕೂಡ ಬಿಎಸ್‌ಎನ್‌ಎಲ್ ಜಾರಿಗೆ ತಂದಿದೆ.
Jio vs Airtel vs BSNL vs Vi: 249 ರೂಪಾಯಿಯ ರೀಚಾರ್ಜ್‌ನಲ್ಲಿ ಯಾವ ಕಂಪನಿಯ ಪ್ಲಾನ್ ಬೆಸ್ಟ್?