Asianet Suvarna News Asianet Suvarna News

160 ದಿನ 320 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್: ಪೈಪೋಟಿ ನಡುವೆ BSNL ಗ್ರಾಹಕರಿಗೆ ಭರ್ಜರಿ ಆಫರ್!

ಜಿಯೋ ಸೇರಿದಂತೆ ಇತರ ಟೆಲಿಕಾಂ ಪೈಪೋಟಿ ನಡುವೆ ಬಿಎಸ್‌ಎನ್ಎಲ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. 160 ದಿನ ವ್ಯಾಲಿಡಿಟಿಯೊಂದಿಗೆ 320 ಜಿಬಿ ಉಚಿತ ಡೇಟಾ, ಅನಿಯಮಿತಿ ಕರೆ ಸೇರಿದಂತೆ ಹಲವು ಸೌಲಭ್ಯ ನೀಡಿದೆ.

BSNL announces 160 validity offers with 320 gb 4g data and unlimited calls ckm
Author
First Published Aug 17, 2024, 5:57 PM IST | Last Updated Aug 17, 2024, 5:57 PM IST

ಬೆಂಗಳೂರು(ಆ.17) ಜಿಯೋ, ಏರ್‌ಟೆಲ್ ಸೇರಿದಂತೆ ಟೆಲಿಕಾಂ ಕ್ಷೇತ್ರದ ಪೈಪೋಟಿ ನಡುವೆ ಸೊರಗಿದ್ದ ಬಿಎಸ್ಎನ್ಎಲ್ ಇದೀಗ ಮೈಕೊಡವಿ ನಿಂತುಕೊಂಡಿದೆ. ದುಬಾರಿ ರಿಚಾರ್ಜ್ ಪ್ಲಾನ್‌ಗಳಿಂದ ಇತ್ತೀಚೆಗೆ ಹಲವು ಗ್ರಾಹಕರು BSNLಗೆ ಪೋರ್ಟ್ ಆಗಿದ್ದಾರೆ. ಇದೀಗ ದಿನದಿಂದ ದಿನಕ್ಕೆ BSNL ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ BSNL ವಿಶೇಷ ಆಫರ್ ಘೋಷಿಸಿದೆ. ಸರ್ಕಾರಿ ಟೆಲಿಕಾಂ BSNL ಇದೀಗ 4ಜಿ ಸೇವೆ ನೀಡುತ್ತಿದೆ. ಇದರ ಜೊತೆಗೆ ಇದೀಗ 160 ವ್ಯಾಲಿಟಿಡಿಯೊಂದಿಗೆ 320 ಜಿಬಿ ಉಚಿತ ಡೇಟಾ, ಅನ್‌ಲಿಮಿಟೆಡ್ ಕರೆಗಳನ್ನು ಘೋಷಿಸಲಾಗಿದೆ.

ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡರೆ ಸರಿಸುಮಾರು ನಾಲ್ಕೂವರೆ ತಿಂಗಳು ವ್ಯಾಲಿಟಿಡಿ ಇರಲಿದೆ. ಈ ಪ್ಲಾನ್‌ನಲ್ಲಿ ಪ್ರತಿ ದಿನ 2 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಇದು 160 ದಿನಕ್ಕೆ ಒಟ್ಟು 320 ಜಿಬಿ ಉಚಿತ ಡೇಟಾ ಲಾಭ ಸಿಗಲಿದೆ. ಇದರ ಜೊತೆಗೆ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಲಿದೆ. ಈ ಪ್ಲಾನ್ ರಿಚಾರ್ಜ್ ಮೊತ್ತ 997 ರೂಪಾಯಿ. ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಉಚಿತ ಅನಿಯಮಿತ ಕರೆ ನೀಡಲಾಗಿದೆ.

Jio vs Airtel vs BSNL vs Vi: 249 ರೂಪಾಯಿಯ ರೀಚಾರ್ಜ್‌ನಲ್ಲಿ ಯಾವ ಕಂಪನಿಯ ಪ್ಲಾನ್ ಬೆಸ್ಟ್?

ಕೇವಲ ಇಷ್ಟು ಮಾತ್ರವಲ್ಲ, ಹಾರ್ಡಿ ಗೇಮ್ಸ್, ಝಿಂಗ್ ಮ್ಯೂಸಿಕ್ ಹಾಗೂ BSNL ಟ್ಯೂನ್ಸ್ ಉಚಿತವಾಗಿ ಸಿಗಲಿದೆ. ಈ ಮೂಲಕ ಗ್ರಾಹಕರು ಕಡಿಮೆ ಮೊತ್ತದಲ್ಲಿ ಪ್ರತಿ ದಿನ 2 ಜಿಬಿ ಹೈಸ್ಪೀಡ್ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಸೌಲಭ್ಯ ಬಳಸಿಕೊಳ್ಳಬಹುದು. ಇತರ ಟೆಲಿಕಾಂ ಆಪರೇಟರ್ ಪ್ಲಾನ್‌ಗಗಳಿಗೆ ಹೋಲಿಸಿದರೆ, ಬಿಎಸ್ಎನ್ಎಲ್ ಕಡಿಮೆ ಮೊತ್ತದಲ್ಲಿ ಈ ಸೇವೆ ನೀಡುತ್ತಿದೆ. 

ಸದ್ಯ BSNL ದೇಶದಲಲ್ಲಿ 4ಜಿ ಸೇವೆ ನೀಡುತ್ತಿದೆ. ಶೀಘ್ರದಲ್ಲೇ 5ಜಿ ಸೇವೆಗೆ ಅಪ್‌ಗ್ರೇಡ್ ಆಗುತ್ತಿದೆ. ಜೊತೆಗೆ ದೇಶದ ಮೂಲೆ ಮೂಲೆಯಲ್ಲಿ BSNL ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಇತರ ಟೆಲಿಕಾಂ ಕಂಪನಿಗಳು ರಿಚಾರ್ಜ್ ಮೊತ್ತ ಏರಿಕೆ ಮಾಡಿತ್ತು. ಜೊತೆಗೆ ಡೇಟಾ ಸ್ಪೀಡ್ ಕಳಪೆಯಾಗಿತ್ತು ಅನ್ನೋ ಆರೋಪಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಹಲವು ಗ್ರಾಹಕರು ಇತರ ಟೆಲಿಕಾಂ ನೆಟ್‌ವರ್ಕ್‌ಗಳಿಂದ BSNL ಗೆ ಪೋರ್ಟ್ ಆಗಿದ್ದರು. 

BSNL ಈಗಾಗಲೇ ಕೆಲ ಮಹತ್ತರ ಬದಲಾವಣೆ ಮಾಡಿಕೊಂಡಿದೆ. ಇತರ ನೆಟ್‌ವರ್ಕ್ 5ಜಿ ಸೇವೆ ನೀಡುತ್ತಿರುವಾಗ BSNL 2ಜಿ ಸೇವೆಯಲ್ಲಿದೆ ಎಂದು ಟ್ರೋಲ್ ಮಾಡಲಾಗಿತ್ತು. ಇದೀಗ BSNL 4ಜಿ ಸೇವೆಗೆ ಅಪ್‌ಗ್ರೇಡ್ ಆಗಿದೆ. ಇದೀಗ ಮುಂದಿನ ತಿಂಗಳಲ್ಲಿ BSNL 5ಜಿ ಸೇವೆ ಲಾಂಚ್ ಆಗುತ್ತಿದೆ. ಈ ಮೂಲಕ BSNL ದೇಶದಲ್ಲಿ ಮತ್ತೆ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಸಜ್ಜಾಗಿದೆ.

ವಯನಾಡು ರಕ್ಷಣಾ ಕಾರ್ಯಕ್ಕೆ BSNL ನೆರವು; ಕರೆ, ಇಂಟರ್ನೆಟ್, SMS ಎಲ್ಲವೂ ಉಚಿತ!
 

Latest Videos
Follow Us:
Download App:
  • android
  • ios