ಸಣ್ಣದಾಗಿ ಮನೆಯಲ್ಲೇ ಬ್ಯುಸಿನೆಸ್ ಮಾಡ್ಬೇಕು ಎನ್ನುವವರಿಗೆ ಇಲ್ಲೊಂದು ಐಡಿಯಾ ಇದೆ. ಕಡಿಮೆ ಹೂಡಿಕೆ, ಹೆಚ್ಚು ಲಾಭದ ಬ್ಯುಸಿನೆಸ್ ಶುರು ಮಾಡಿ, ತಿಂಗಳಿಗೆ 60 ಸಾವಿರ ಗಳಿಸ್ಬಹುದು.
ಈಗಿನ ಕಾಲ್ದಲ್ಲಿ ಒಂದು ಆದಾಯ (income)ದ ಮೂಲ ಸಾಲೋದಿಲ್ಲ. ದುಬಾರಿ ಲೈಫ್ ಸ್ಟೈಲ್ ನಲ್ಲಿ ಒಂದೆರಡು ಮೂಲದಿಂದ ಆದಾಯ ಬಂದ್ರೆ ಹೇಗೋ ಮನೆ ಸಂಭಾಳಿಸ್ಬಹುದು. ಅನೇಕ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗೋದು ಕಷ್ಟ. ಮನೆಯಲ್ಲಿಯೇ ಮಾಡುವ ಬ್ಯುಸಿನೆಸ್ ಬಗ್ಗೆ ಆಲೋಚನೆ ಮಾಡ್ತಿರುತ್ತಾರೆ. ಇನ್ನು ಕೆಲವರಿಗೆ ಬಿಡುವಿನ ಟೈಂನಲ್ಲಿ ಪಾರ್ಟ್ ಟೈಂ ಬ್ಯುಸಿನೆಸ್ ಮಾಡ್ಬೇಕು ಎನ್ನುವ ಆಸೆ ಇರುತ್ತೆ. ಬ್ಯುಸಿನೆಸ್ ವಿಷ್ಯ ಬಂದಾಗ ಲಾಭ – ನಷ್ಟಗಳು ಸಾಮಾನ್ಯ. ಆದ್ರೆ ನೀವು ಯಾವ ಬ್ಯುಸಿನೆಸ್ ಆಯ್ಕೆ ಮಾಡ್ಕೊಂಡಿದ್ದೀರಿ ಅನ್ನೋದು ಇಲ್ಲಿ ಮುಖ್ಯವಾಗುತ್ತೆ. ನಿತ್ಯ ಜನರು ಬಳಸುವ ವಸ್ತುಗಳ ತಯಾರಿ, ಮಾರಾಟಕ್ಕೆ ಮುಂದಾದ್ರೆ ನಿಧಾನವಾಗಿಯಾದ್ರೂ ನಿಮ್ಮ ಬ್ಯುಸಿನೆಸ್ (Business) ಸಕ್ಸಸ್ ಆಗುತ್ತೆ. ನಾವು ನಿತ್ಯ ಒಂದು ವಸ್ತುವನ್ನು ಬಳಕೆ ಮಾಡ್ತೇವೆ. ಆದ್ರೆ ಇದು ಮನೆ ಮೂಲೆಯಲ್ಲಿರುವ ವಸ್ತು. ಅದನ್ನು ಬಳಸಿ, ದೂರ ಇಡುವವರೇ ಹೆಚ್ಚು. ಹಾಗಂತ ಆ ವಸ್ತು ಮನೆಯಲ್ಲಿ ಇಲ್ಲ ಅಂದ್ರೆ ಕೆಲ್ಸ ನಡೆಯೋದಿಲ್ಲ. ಪಾರ್ಟ್ ಟೈಂ ಅಥವಾ ಫುಲ್ ಟೈಂ ಬ್ಯುಸಿನೆಸ್ ಮಾಡೋ ಆಸಕ್ತಿ ಇದ್ರೆ ನೀವು ಇದೇ ವಸ್ತುವಿನ ತಯಾರಿ ಮತ್ತು ಮಾರಾಟ ಶುರು ಮಾಡಿ ತಿಂಗಳಿಗೆ 40 – 60 ಸಾವಿರ ಗಳಿಸ್ಬಹುದು.
ಮನೆಯಲ್ಲಿ ಮಾಡಿ ಈ ಬ್ಯುಸಿನೆಸ್ : ಈಗ ನಾವು ಹೇಳೋಕೆ ಹೊರಟಿರೋದು ಪೊರಕೆ ಬಗ್ಗೆ. ಮನೆಯಲ್ಲಿ ಅತ್ಯಂತ ತಾತ್ಸಾರದ ವಸ್ತುಗಳಲ್ಲಿ ಈ ಪೊರಕೆ ಕೂಡ ಒಂದು. ಆದ್ರೆ ಪೊರಕೆ ಇಲ್ಲದೆ ಮನೆ, ಬೀದಿ ಕ್ಲೀನ್ ಆಗೋದಿಲ್ಲ. ವಾಕ್ಯೂಮ್ ಕ್ಲೀನರ್, ರೋಬೋಟ್ ಅಂತ ನಾನಾ ಕ್ಲೀನಿಂಗ್ ಐಟಂ ಮಾರ್ಕೆಟ್ ಗೆ ಬಂದಿರ್ಬಹುದು, ಆದ್ರೆ ಪೊರಕೆ ಬೇಡಿಕೆ ಕಡಿಮೆ ಆಗಿಲ್ಲ. ಉತ್ತಮ ಗುಣಮಟ್ಟದ ಪೊರಕೆಗೆ ಸಾಕಷ್ಟು ಬೇಡಿಕೆ ಇದೆ. ಹಬ್ಬದ ಟೈಂನಲ್ಲಿ ಪೊರಕೆ ಡಿಮ್ಯಾಂಡ್ ಹೆಚ್ಚಾಗುತ್ತೆ. ನೀವು ಇದ್ರ ವ್ಯಾಪಾರ ಶುರು ಮಾಡಿ, ಹಣ ಸಂಪಾದನೆ ಮಾಡ್ಬಹುದು.
ಪೊರಕೆಯನ್ನು ಯಾವ ವಸ್ತುವಿನಿಂದ ತಯಾರಿಸ್ಬೇಕು ಅಂತ ಮೊದಲು ಡಿಸೈಡ್ ಮಾಡಿ. ಅದಕ್ಕೆ ಹ್ಯಾಂಡಲ್ಕಪ್ ಅಗತ್ಯವಿರುತ್ತದೆ. ಕಚ್ಚಾ ವಸ್ತುಗಳನ್ನು ನೀವು ಸಗಟು ಮಾರುಕಟ್ಟೆಯಿಂದ ಖರೀದಿ ಮಾಡ್ಬಹುದು. ಪೊರಕೆ ತಯಾರಿಸೋಕೆ ಯಂತ್ರ ಕೂಡ ಲಭ್ಯವಿದೆ. ನಿಮ್ಮ ಬಳಿ ಹೆಚ್ಚಿನ ಹಣವಿಲ್ಲ ಎಂದಾದ್ರೆ ನೀವು ಯಂತ್ರವಿಲ್ಲದೆ ಪೊರಕೆ ತಯಾರಿಸ್ಬಹುದು. ಪೊರಕೆ ತಯಾರಿಸೋಕೆ ಸಿಬ್ಬಂದಿ ಅಗತ್ಯವೂ ಇಲ್ಲ. ನೀವು ಮತ್ತು ನಿಮ್ಮ ಕುಟುಂಬಸ್ಥರು ಸೇರಿ ಪೊರಕೆ ತಯಾರಿಸ್ಬಹುದು.
ಪೊರಕೆಗೆ ಉತ್ತಮ ಪ್ಯಾಕಿಂಗ್ ಮುಖ್ಯವಾಗುತ್ತದೆ. ಜನರು ಬಾಹ್ಯ ಸೌಂದರ್ಯವನ್ನು ಹೆಚ್ಚು ಇಷ್ಟಪಡೋದ್ರಿಂದ ಪೊರಕೆಯ ಪ್ಯಾಕಿಂಗ್ ಚೆನ್ನಾಗಿರುವಂತೆ ನೋಡ್ಕೊಳ್ಳಿ. ಈ ಉತ್ಪನ್ನವನ್ನು ನೀವು ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲ ಆನ್ಲೈನ್ ನಲ್ಲಿ ಕೂಡ ಮಾರಾಟ ಮಾಡ್ಬಹುದು. ನಿಮ್ಮ ಸ್ನೇಹಿತರು, ಸಂಬಂಧಿಕರು, ಸ್ಥಳೀಯ ಮಾರುಕಟ್ಟೆಗೆ ನೀಡುವ ಮೂಲಕ ಚಿಕ್ಕದಾಗಿ ಬ್ಯುಸಿನೆಸ್ ಶುರು ಮಾಡ್ಬಹುದು. ನೀವು ಹತ್ತರಿಂದ 20 ಸಾವಿರ ರೂಪಾಯಿ ಹೂಡಿಕೆ ಮಾಡಿ ಈ ಪೊರಕೆ ಬ್ಯುಸಿನೆಸ್ ಶುರು ಮಾಡ್ಬಹುದು. ನಿಮ್ಮ ಮಾರ್ಕೆಟಿಂಗ್ ಇಲ್ಲಿ ಮುಖ್ಯವಾಗುತ್ತದೆ. ಗುಣಮಟ್ಟದ ಪೊರಕೆಗೆ ಸದಾ ಬೇಡಿಕೆ ಇದೆ. ಹಾಗಾಗಿ ಜನರು ನಿಮ್ಮ ಪೊರಕೆಯನ್ನು ಮತ್ತೆ ಮತ್ತೆ ಕೊಂಡುಕೊಳ್ಳಬೇಕು ಅಂದ್ರೆ ಗುಣಮಟ್ಟದ ಬಗ್ಗೆ ನೀವು ಹೆಚ್ಚು ಗಮನ ಹರಿಸ್ಬೇಕು. ಇ ಕಾಮರ್ಸ್, ದೊಡ್ಡ ಮಾಲ್ ಸೇರಿದಂತೆ ಸ್ಥಳೀಯ ಮಾರುಕಟ್ಟೆಗೆ ನಿಮ್ಮ ಪೊರಕೆ ಮಾರಾಟ ಮಾಡಿ ತಿಂಗಳಿಗೆ 40 – 60 ಸಾವಿರ ರೂಪಾಯಿ ಗಳಿಸ್ಬಹುದು ಎನ್ನುತ್ತಾರೆ ತಜ್ಞರು.
