ವೋಟ್ ಚೋರಿ ಎಂದು ಪೇಚಿಗೆ ಸಿಲುಕಿದ್ರಾ ರಾಹುಲ್? ಬ್ರೆಜಿಲ್ ಮಾಡೆಲ್ ಫೋಟೋ ಇರುವ ಮಹಿಳೆ ಸ್ಫೋಟಕ ಹೇಳಿಕೆ, ಯಾವುದೇ ವೋಟ್ ಚೋರಿ ನಡೆದಿಲ್ಲ. 2024ರಲ್ಲಿ ನಾನೇ ಹೋಗಿ ಮತ ಹಾಕಿದ್ದೇನೆ. ಜೊತೆಗೆ ಫೋಟೋ ಕುರಿತ ಮಾಹಿತಿಯೂ ಬಹಿರಂಗ
ನವದೆಹಲಿ (ನ.05) ರಾಹುಲ್ ಗಾಂಧಿ ಮತ್ತೆ ವೋಟ್ ಚೋರಿ (ಮತ ಕಳ್ಳತನ) ಗಂಬೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ಮೂಲಕ ಈ ಬಾರಿ ಮತ್ತಷ್ಟು ತಯಾರಿಯೊಂದಿಗೆ ರಾಹುಲ್ ಗಾಂಧಿ ಬಾಂಬ್ ಸಿಡಿಸಿದ್ದಾರೆ. ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ ಕಳ್ಳತನ ಮಾಡಿ ಗೆಲುವು ಸಾಧಿಸಿದೆ. ಇದಕ್ಕೆ ಚನಾವಣಾ ಆಯೋಗ ಸಾಥ್ ನೀಡಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಕೆಲ ದಾಖಲೆ ಬಿಡುಗಡೆ ಮಾಡಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಬ್ರಿಜಿಲ್ ಮಾಡೆಲ್ ಫೋಟೋ ಇರುವ ಮತದಾರರ ಮಹಿಳೆಯ ಮಾಹಿತಿ ಬಹಿರಂಗಪಡಿಸಿದ ರಾಹುಲ್, ಈ ಬ್ರಿಜೆಲ್ ಮಾಡೆಲ್ 22 ಬಾರಿ ಮತದಾನ ಮಾಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಆದರೆ ಬ್ರೆಜಿಲ್ ಮಾಡೆಲ್ ಫೋಟೋ ಇರುವ ಮತದಾರರ ಮಹಿಳೆಯನ್ನು ಇಂಡಿಯಾ ಟುಡೆ ಮಾಧ್ಯಮ ಪತ್ತೆ ಹಚ್ಚಿ ಮಾತನಾಡಿಸಿದೆ. ಈ ವೇಳೆ ಮಹಿಳೆ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಯಾವುದೇ ವೋಟ್ ಚೋರಿ ನಡೆದಿಲ್ಲ
ರಾಹುಲ್ ಗಾಂಧಿ ತಮ್ಮ ವೋಟ್ ಚೋರಿ ಸುದ್ದಿಗೋಷ್ಠಿಯಲ್ಲಿ ಪಿಂಕಿ ಜುಗಿಂದರ್ ಕೌಶಿಕ್ ಮತದಾರರ ಮಾಹಿತಿಯನ್ನು ಡಿಸ್‌ಪ್ಲೆ ಮಾಡಿದ್ದರು. ಈಕೆಯ ಹೆಸರು, ವಿಳಾಸದ ಜೊತೆ ಫೋಟೋ ಬ್ರೆಜಿಲ್ ಮಾಡೆಲ್ ಫೋಟೋ ಇದೆ. ಇದು ಮತದಾರರ ಪಟ್ಟಿಯಲ್ಲಿರುವ ವಿವರ. ಇದನ್ನೇ ರಾಹುಲ್ ಗಾಂಧಿ ಮುಂದಿಟ್ಟು ಬ್ರೆಜಿಲ್ ಮಾಡೆಲ್ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಮಹಿಳೆಯ ಇದೀಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಮತ ಕಳ್ಳತನ ನಡೆದಿಲ್ಲ. ನನಗೆ ಮತದಾನ ಮಾಡಲು ಅಡ್ಡಿಯಾಗಿಲ್ಲ. ನಾನು ಮತದಾನ ಮಾಡಿದ್ದೇನೆ ಎಂದಿದ್ದಾರೆ.
ಬ್ರೆಜಿಲ್ ಫೋಟೋ ಕುರಿತು ಮಹಿಳೆ ಪಿಂಕಿ ಜುಗಿಂದರ್ ಕೌಶಿಕ್ ಹೇಳಿದ್ದೇನು
ತನ್ನ ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಸರಿಯಾಗಿದೆ. ಆದರೆ ಫೋಟೋ ಸರಿಯಾಗಿಲ್ಲ. ನನ್ನ ಗುರುತಿನ ಚೀಟಿ ಬಂದಾಗ ಫೋಟೋ ಬೇರೆಯಾಗಿತ್ತು. ನಾನು ಮತದಾರರ ಗುರುತಿಚಿನ ಚೀಟಿಗೆ ಅರ್ಜಿ ಸಲ್ಲಿಸಿದ ಬಳಿಕ ನನಗೆ ಬಂದ ವೋಟರ್ ಐಡಿಯಲ್ಲಿ ಫೋಟೋ ಬೇರೆಯಾಗಿತ್ತು. ತಕ್ಷಣವೇ ಫೋಟೋ ಸರಿಪಡಿಸಲು ನಾನು ಮನವಿ ಮಾಡಿದ್ದೇನೆ. ಆದರೆ ನನಗೆ ಇದುವರೆಗೂ ಸರಿಯಾದ ಫೋಟೋ ಇರುವ ವೋಟರ್ ಐಡಿ ಸಿಕ್ಕಿಲ್ಲ. ಇದೇ ವೋಟರ್ ಐಡಿ ಮೂಲಕ ನಾನು ಮತದಾನ ಮಾಡುತ್ತಿದ್ದೇನೆ ಎಂದಿದ್ದಾರೆ.
ವೋಟರ್ ಐಡಿ, ಸ್ಲಿಪ್ ಮೂಲಕ ನಾನು ಮತದಾನ ಮಾಡಿದ್ದೇನೆ. ನನ್ನ ಫೋಟೋ ತಪ್ಪಾಗಿ ಪ್ರಿಂಟ್ ಮಾಡಿದ್ದು ಯಾರು ತಪ್ಪು, ಅದು ನನ್ನ ತಪ್ಪಲ್ಲ. ನನಗೆ ಮತದಾನ ನಿರಾಕರಿಸಿಲ್ಲ. 2024ರ ಚುನಾವಣೆಯಲ್ಲೂ ನಾನು ಮತದಾನ ಮಾಡಿದ್ದೇನೆ. ತಪ್ಪು ಸರಿಪಡಿಸಿ ಕೊಡಲು ನಾನು ಮನವಿ ಮಾಡಿದ್ದೇನೆ. ನನಗೆ ಇದುವರೆಗೂ ಸಿಕ್ಕಿಲ್ಲ ಎಂದು ಪಿಂಕಿ ಹೇಳಿದ್ದಾರೆ.
ಇದೇ ಬ್ರೆಜಿಲ್ ಮಾಡೆಲ್ ಫೋಟೋ ಇರುವ ಮತ್ತೊಬ್ಬ ಮತದಾರ ಮಹಿಳೆ ಮುನಿಶ್ ದೇವಿ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವೋಟರ್ ಐಡಿಯಲ್ಲಿ ಫೋಟೋ ತಪ್ಪಾಗಿದೆ ಎಂದು ವರ್ಷಗಳೇ ಕಳೆದಿದೆ. ಸರಿಯಾದ ಫೋಟೋ ಹಾಕಿ ವೋಟರ್ ಐಡಿ ನೀಡಿಲ್ಲ. ತಪ್ಪುಗಳನ್ನು ಸರಿಪಡಿಸಬೇಕು. ಈ ರೀತಿ ಫೋಟೋ ತಪ್ಪಾಗದಂತೆ ನೋಡಿಕೊಳ್ಳಬೇಕು. ಆದರೆ ನಮ್ಮ ಮತದಾನ ನಿರಾಕರಣೆ ಮಾಡಿಲ್ಲ.ನಾವು ಮತದಾನ ಮಾಡಿದ್ದೇವೆ ಎಂದಿದ್ದಾರೆ.
