10 ನಿಮಿಷಗಳವರೆಗೆ ಮಿಲೇನಿಯರ್ ಆದ ಮಹಿಳೆಬೋಸ್ಟನ್ ಮಹಿಳೆ ಅಕೌಂಟ್‌ಗೆ 1 ಮಿಲಿಯನ್ ಡಾಲರ್ಬೇರೊಂದು ಮಹಿಳೆಯ ಖಾತೆಗೆ ಕಳುಹಿಸಬೇಕಿದ್ದ ಹಣಮಿಲೇನಿಯರ್ ಆಗಿದ್ದಕ್ಕೆ ಕೆಲಸ ಬಿಡಲಿದ್ದ ಫ್ಲೆಮಿಂಗ್
ಬೋಸ್ಟನ್(ಜು.21): ಹಣಕಾಸು ಸಂಸ್ಥೆಯೊಂದು ಮಾಡಿದ್ದ ಎಡವಟ್ಟಿನಿಂದ, ಮಹಿಳೆಯೊಬ್ಬಳು ಕೆಲವು ನಿಮಿಷಗಳ ಕಾಲ ಮಿಲೇನಿಯರ್ ಆದ ಅಪರೂಪದ ಘಟನೆ ವರದಿಯಾಗಿದೆ.
ಬೋಸ್ಟನ್‌ನ ಎಲೆನ್ ಫ್ಲೆಮಿಂಗ್ ಎಂಬ ಮಹಿಳೆಗೆ ಕಳೆದ ಬುಧವಾರ ಟಿಡಿ ಅಮೆರಿಟ್ರೇಡ್ ಹಣಕಾಸು ಸಂಸ್ಥೆ ಕರೆ ಮಾಡಿ, ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ದ್ವನಿ ಮುದ್ರಿತ ಸಂದೇಶ ಕಳಿಸಿದೆ.
ಇದರಿಂದ ಪುಕಿತಗೊಂಡ ಫ್ಲೆಮಿಂಗ್, ತಕ್ಷಣವೇ ತನ್ನ ಶೈಕ್ಷಣಿಕ ಸಾಲವನ್ನು ತೀರಿಸಲು ಯೋಜನೆ ಸಿದ್ಧಪಡಿಸಿದ್ದಾಳೆ. ಅಲ್ಲದೇ ತನ್ನ ಕೆಲಸಕ್ಕೆ ರಾಜೀನಾಮೆ ಕೂಡ ನೀಡಲು ಸಿದ್ಧವಾಗಿದ್ದಾಳೆ ಫ್ಲೆಮಿಂಗ್. ಆದರೆ ಅದಕ್ಕೂ ಮುನ್ನ ಫ್ಲೆಮಿಂಗ್ ಮತ್ತೆ ಹಣಕಾಸು ಸಂಸ್ಥೆ ಸಮಾಲೋಚಕರಿಗೆ ಕರೆ ಮಾಡಿ, ತನ್ನ ಖಾತೆಗೆ ಹಣ ಕಜಮಾ ಆಗಿರುವ ಕುರಿತು ಖಚಿತಪಡಿಸಿಕೊಂಡಿದ್ದಾಳೆ.
ಈ ಕುರಿತು ಮರುಪರಿಶೀಲನೆ ನಡೆಸಿದ ಹಣಕಾಸು ಸಂಸ್ಥೆ, ತಾನು ತಪ್ಪಾಗಿ ಫ್ಲೆಮಿಂಗ್ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ತಿಳಿಸಿದೆ. ಪ್ಲೋರಿಡಾದಲ್ಲಿ ವಾಸವಾಗಿದ್ದ ಫ್ಲೆಮಿಂಗ್ ಹೆಸರಿನ ಮಹಿಳೆಗೆ ಆ ಹಣ ಸಂದಾಯ ಮಾಡುವ ಬದಲು ಬೋಸ್ಟನ್ ನ ಫ್ಲೆಮಿಂಗ್ ಎಂಬ ಮಹಿಳೆಗೆ ಹಣ ವರ್ಗಾವಣೆ ಮಾಡಲಾಗಿತ್ತು.
ಕೊನೆಯಲ್ಲಿ ಸಂಸ್ಥೆಯು ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದು, ಹಣವನ್ನು ಸರಿಯಾದ ವ್ಯಕ್ತಿಯ ಖಾತೆಗೆ ಮರು ವರ್ಗಾವಣೆ ಮಾಡಿದೆ. ಆದರೆ ಫ್ಲೆಮಿಂಗ್ ಮಾತ್ರ ತಾನು ಕೆಲ ಸಮಯದ ಮಿಲೇನಿಯರ್ ಎಂದು ಟ್ವೀಟರ್ ನಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
