ಬಿಎಂಟಿಸಿ ಭಕ್ತರಿಗಾಗಿ ಒಂದು ದಿನದಲ್ಲಿ 8 ದೇವಾಲಯಗಳ ದರ್ಶನಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಶನಿವಾರ ಮತ್ತು ಭಾನುವಾರಗಳಂದು ಲಭ್ಯವಿರುವ ಈ ಸೇವೆಯು ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರಾರಂಭವಾಗಿ, ₹450 (ವಯಸ್ಕರು) ಮತ್ತು ₹350 (ಮಕ್ಕಳು) ದರದಲ್ಲಿ ಲಭ್ಯವಿದೆ.

ಸಿಲಿಕಾನ್ ಸಿಟಿ ಬೆಂಗಳೂರು ತಾಂತ್ರಿಕವಾಗಿ ಮಾತ್ರವಲ್ಲದೇ ಧಾರ್ಮಿಕ ಮತ್ತು ಐತಿಹಾಸಿಕವಾಗಿಯೂ ಅನೇಕ ಖ್ಯಾತಿಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಅದರಲ್ಲಿಯೂ ಪ್ರಸಿದ್ಧ ಐತಿಹಾಸಿಕ ದೇವಸ್ಥಾನಗಳೂ ಕೂಡ ಧಾರ್ಮಿಕ ಆಚರಣೆ ಮಾಡುವ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಹೀಗಾಗಿ, ಬೆಂಗಳೂರಿನ ಭಕ್ತರಿಗೆ ಅನುಕೂಲವಾಗಲೆಂದು ಬಿಎಂಟಿಸಿ ಒಂದು ದಿನದ ವಿಶೇಷ ಪ್ಯಾಕೇಜ್‌ನಲ್ಲಿ 8 ದೇವಸ್ಥಾನಗಳ ದಿವ್ಯ ದರ್ಶನ ವ್ಯವಸ್ಥೆ ಮಾಡಿದೆ.

ಬೆಂಗಳೂರು ನಗರದಲ್ಲಿ ಭಕ್ತರಿಗೆ ಒಂದು ಸಂತಸದ ಸುದ್ದಿ. ನಗರದ ವಿವಿಧ ಪ್ರಸಿದ್ಧ ದೇವಾಲಯಗಳಿಗೆ ದಿನವ್ಯಾಪಿ ದರ್ಶನಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿಶೇಷ ಬಸ್ ಸೇವೆಯನ್ನು ಪ್ರಾರಂಭಿಸುತ್ತಿದೆ. ಈ ಸೇವೆ ವಿಶೇಷವಾಗಿ ಶನಿವಾರ ಮತ್ತು ಭಾನುವಾರಗಳಂದು ಮಾತ್ರ ಲಭ್ಯವಿದೆ. ಈ 'ದಿನವ್ಯಾಪಿ ದಿವ್ಯದರ್ಶನ' ಸೇವೆಯು ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರಾರಂಭವಾಗುತ್ತದೆ ಮತ್ತು ಬೆಳಿಗ್ಗೆ 8.30ಕ್ಕೆ ಆರಂಭವಾಗುತ್ತದೆ. ಸಂಪೂರ್ಣ ದಿನದ ದೇವಾಲಯ ಸುತ್ತಾಟದ ನಂತರ ಸಂಜೆಯ 6:05ಕ್ಕೆ ಹಿಂತಿರುಗುತ್ತದೆ.

ದಿವ್ಯ ದರ್ಶನಕ್ಕೆ ಸೇರಿರುವ ದೇವಾಲಯಗಳು:

  1. ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯ
  2. ಶ್ರೀ ರಾಜರಾಜೇಶ್ವರಿ ದೇವಾಲಯ
  3. ಶೃಂಗಗಿರಿ ಶ್ರೀ ಶಣ್ಮುಖ ದೇವಾಲಯ
  4. ಶ್ರೀ ದೇವಿ ಕರುಮಾರಿ ಅಮ್ಮನವರ ದೇವಾಲಯ
  5. ಒಂಕಾರ್ ಹಿಲ್
  6. ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ
  7. ಆರ್ಟ್‌ ಆಫ್ ಅಲಿವಿಂಗ್
  8. ಬನಶಂಕರಿ ದೇವಾಲಯ

ಟಿಕೆಟ್ ದರಗಳು:

  • ಪ್ರತಿ ವಯಸ್ಕರಿಗೆ: ₹450
  • ಮಕ್ಕಳಿಗೆ: ₹350

ಈ ಸೇವೆಯನ್ನು ಬಿಎಂಟಿಸಿ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಂಯುಕ್ತವಾಗಿ ಪ್ರಾರಂಭಿಸುತ್ತಿದ್ದು, ಭಕ್ತರಿಗೆ ಒಂದು ಸುಲಭ ಹಾಗೂ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲು ಉದ್ದೇಶಿಸಲಾಗಿದೆ. ಈ ಬಸ್ ಸೇವೆ ಬೆಂಗಳೂರಿನ ಧಾರ್ಮಿಕ ತೀರ್ಥಯಾತ್ರೆಗಾಗಿ ಅವಕಾಶ ಒದಗಿಸುತ್ತಿದ್ದು, ಏಕದಿನದ ಪ್ರವಾಸವನ್ನು ಪವಿತ್ರ ಅನುಭವವಾಗಿ ಪರಿವರ್ತಿಸುತ್ತದೆ.

ಅವಶ್ಯಕ ಮಾಹಿತಿ:

ಸೇವೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ: www.ksrtc.in ಭೇಟಿಯಿರಿ.

ಸಂಪರ್ಕ ಸಂಖ್ಯೆ: 080 22483777

ಅಥವಾ ಬಿಎಂಟಿಸಿ ಅಧಿಕೃತ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಸಂಪರ್ಕಿಸಿ.

ಆಧ್ಯಾತ್ಮಿಕ ಪ್ರವಾಸವೊಂದರಲ್ಲಿ ಬಿಎಂಟಿಸಿ ಜೊತೆಗೂಡಿ, ಆಧ್ಯಾತ್ಮದ ಅನುಭವವನ್ನು ಪಡೆಯಿರಿ!

Scroll to load tweet…

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಕಳೆದೆರಡು ವಾರಗಳಿಂದ ಬಿಎಂಟಿಸಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರು ನಗರದ ವಿವಿಧ ಮೂಲೆಗಳಲ್ಲಿರುವ ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಅಗತ್ಯವಿದ್ದಷ್ಟು ಸಮಯ ನೀಡಿ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತಿದೆ.

Scroll to load tweet…