ದಿವ್ಯಾಂಗ ಪತ್ನಿಯನ್ನು ಹೊತ್ತು ಹಾಸನಾಂಬೆ ದರ್ಶನ ಮಾಡಿಸಿದ ಪತಿ
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲಕ್ಕೆ ವ್ಯಕ್ತಿಯೊಬ್ಬ ತನ್ನ ಅಂಗವಿಕಲ ಪತ್ನಿಯನ್ನು ಹೊತ್ತುಕೊಂಡೇ ಬಂದ ಘಟನೆ ಬುಧವಾರ ನಡೆದಿದೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಚೇನಹಳ್ಳಿಯ ನಾಗರಾಜ್ ಹಾಸನಾಂಬೆ ದರ್ಶನಕ್ಕೆ ಸರತಿ ಸಾಲಿನಲ್ಲಿ ತಮ್ಮ ಪತ್ನಿ ಗೌರಮ್ಮರನ್ನು ಎತ್ತಿಕೊಂಡು ಬರುತ್ತಿದ್ದರು.
ಹಾಸನ (ಅ.20): ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲಕ್ಕೆ ವ್ಯಕ್ತಿಯೊಬ್ಬ ತನ್ನ ಅಂಗವಿಕಲ ಪತ್ನಿಯನ್ನು ಹೊತ್ತುಕೊಂಡೇ ಬಂದ ಘಟನೆ ಬುಧವಾರ ನಡೆದಿದೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಚೇನಹಳ್ಳಿಯ ನಾಗರಾಜ್ ಹಾಸನಾಂಬೆ ದರ್ಶನಕ್ಕೆ ಸರತಿ ಸಾಲಿನಲ್ಲಿ ತಮ್ಮ ಪತ್ನಿ ಗೌರಮ್ಮರನ್ನು ಎತ್ತಿಕೊಂಡು ಬರುತ್ತಿದ್ದರು. ಇದನ್ನು ಕಂಡ ಪೊಲೀಸರು ನೇರವಾಗಿ ಗರ್ಭಗುಡಿ ಸಮೀಪವೇ ನಾಗರಾಜ್‌ನನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಳೆದ ವರ್ಷವೂ ಪತ್ನಿಗೆ ದೇವಿ ದರ್ಶನ ಮಾಡಿಸಿದ್ದ ನಾಗರಾಜ್ ಅವರು ನೇರ ದರ್ಶನದ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆಯೂ ಹಾಸನಾಂಬೆ ದರ್ಶನಕ್ಕೆ ಒತ್ತಾಯ: ಪ್ರಸಿದ್ಧ ಹಾಸನಾಂಬೆಯ ದರ್ಶನ ಆರಂಭವಾಗಿ 6 ದಿನಗಳು ಕಳೆದಿದ್ದರೂ ಪ್ರತಿನಿತ್ಯ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಹಾಗಾಗಿ ಅಮ್ಮನವರ ದರ್ಶನದ ಅವಧಿ ವಿಸ್ತರಣೆ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ. ಅ. 13 ರಿಂದ ಅ. 27ರ ವರೆಗೂ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ತೆಗೆಯಲಿದ್ದು, ಈಗಾಗಲೇ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಸಾಮಾನ್ಯ ಸಾಲಿನಲ್ಲಿ ನಿಲ್ಲುವ ಭಕ್ತರ ಸಾಲು ಹೆಚ್ಚಿನ ಸಂಖ್ಯೆ ಕಂಡುಬರುತ್ತಿರುವಂತೆ, 1 ಸಾವಿರ ರು. ಟಿಕೆಟ್‌ನ ಸಾಲು ಕೂಡ ಹೆಚ್ಚಾಗಿಯೇ ಇದೆ.
ಹಾಸನಾಂಬೆ ದರ್ಶನ ಆರಂಭ: ದಸರಾ ಮಾದರಿಯಲ್ಲಿ ಹಾಸನ ನಗರ ಸಿಂಗಾರ
ಇನ್ನು ರಜೆ ದಿನಗಳಲ್ಲಿ ಭಕ್ತರ ದಂಡೆ ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ಅಂದು ಪೊಲೀಸರು ಹಾಗೂ ಜಿಲ್ಲಾಡಳಿತ ಜನರನ್ನು ನಿಯಂತ್ರಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಬರುತ್ತಿದೆ. ಆದರೆ ಈಗ ಸೋಮವಾರವು ಕೂಡ ಭಕ್ತರು ಹೆಚ್ಚಾಗಿ ಬರುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಕೂಡ ಅಮ್ಮನವರ ದರ್ಶನಕ್ಕೆ ಅವಕಾಶ ನೀಡಿದಂತೆ ಪ್ರಸ್ತುತ ವರ್ಷದಲ್ಲೂ ರಾತ್ರಿ ದರ್ಶನಕ್ಕೆ ವ್ಯವಸ್ಥೆ ಮಾಡಬೇಕೆಂಬುದು ಭಕ್ತರ ಕೋರಿಕೆಯಾಗಿದೆ.
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ಜಾತ್ರಾ ಉತ್ಸವಕ್ಕೆ ಮುಹೂರ್ತ ಫಿಕ್ಸ್
ಹಾಸನಾಂಬೆಯ ದರ್ಶನಕ್ಕೆ ಯಾರಾದರೂ ಗಣ್ಯರು ಆಗಮಿಸಿದರೆ ಸಾಕು ಅವರ ಹಿಂದೆ ನೂರಾರು ಜನರು ಒಳ ಪ್ರವೇಶ ಮಾಡುತ್ತಿರುವ ಜೊತೆಗೆ ಇತರರ ಹೆಸರು ಹೇಳಿಕೊಂಡು ಅನೇಕರು 1 ಸಾವಿರ ಮತ್ತು 300 ರೂಗಳ ಸಾಲಿನಲ್ಲಿ ನುಗ್ಗುತ್ತಿರುವುದು ಸಾಮಾನ್ಯವಾಗಿದೆ. ಸೋಮವಾರ ರಾತ್ರಿ ನೂಕುನುಗ್ಗಲು ಉಂಟಾಗಿ ಭಕ್ತರು ಹಾಗೂ ಪೊಲೀಸರ ನಡುವೆ ಮಾತಿ ಚಕಮಕಿ ಕೂಡ ನಡೆದಿದೆ. ಈ ವರ್ಷದಲ್ಲಿ 1 ಸಾವಿರ ಮುಖ ಬೆಲೆಯ ಟಿಕೆಟ್‌ನಿಂದ ಮತ್ತು ಭಕ್ತರು ಕಾಣಿಕೆ ಹುಂಡಿಗೆ ಹಾಕಿದ ಧನ ಸಂಗ್ರಹದಿಂದ ಹೆಚ್ಚು ಆದಾಯ ಬರುವ ನಿರೀಕ್ಷೆ ಮಾಡಲಾಗಿದೆ.