Asianet Suvarna News Asianet Suvarna News

ಮಂಗಳಸೂತ್ರ ಪ್ರಚಾರಕ್ಕೆ ಅರೆ ನಗ್ನ ಫೋಟೋ : ವಿನ್ಯಾಸಕಗೆ ಬಿಜೆಪಿ ನೋಟಿಸ್‌!

*ವಿನ್ಯಾಸಕಾರ ಸಬ್ಯಸಾಚಿ ಮುಖರ್ಜಿಗೆ ನೋಟಿಸ್‌
*ವಿವಾದ ಸೃಷ್ಟಿ ಮಾಡಿದ್ದ ಮಂಗಳಸೂತ್ರ ಜಾಹೀರಾತು
*ಜನರಲ್ಲಿ ಕ್ಷಮೆ ಕೋರುವಂತೆ ಆಗ್ರಹ

BJP legal advisor issues notice to Sabyasachi Mukherjee over Mangalasutra Advertisement
Author
Bengaluru, First Published Oct 31, 2021, 10:46 AM IST

ಮಹಾರಾಷ್ಟ್ರ(ಅ.  31): ಖ್ಯಾತ ವಿನ್ಯಾಸಕಾರ ಸಬ್ಯಸಾಚಿ ಮುಖರ್ಜಿ (Sabyasachi Mukherjee) ವಿನ್ಯಾಸ ಮಾಡಿರುವ ನೂತನ ಮಂಗಳಸೂತ್ರ (Mangalasutra) ಜಾಹೀರಾತೊಂದು ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ನೂತನ ವಿನ್ಯಾಸದ ‘ರಾಯಲ್‌ ಬೆಂಗಾಲ್‌’ ಮಂಗಳಸೂತ್ರ ಜಾಹೀರಾತನ್ನು ಸಬ್ಯಸಾಚಿ ವಿನ್ಯಾಸ ಮಾಡಿದ್ದು, ಅದರಲ್ಲಿ ಮಹಿಳೆಯರನ್ನು ಅರೆನಗ್ನ ರೀತಿಯಲ್ಲಿ ತೋರಿಸಲಾಗಿತ್ತು. ಈ ಜಾಹೀರಾತಿನಲ್ಲಿ ಮಂಗಳಸೂತ್ರಕ್ಕಿಂತ ಮಹಿಳೆಯರ ಒಳವಸ್ತ್ರಗಳೇ ಹೆಚ್ಚು ಪ್ರದರ್ಶಿತವಾಗಿದ್ದವು. ಹೀಗಾಗಿ ಜಾಲತಾಣಗಳಲ್ಲಿ ಇದು ಮಂಗಳಸೂತ್ರದ ಜಾಹೀರಾತೋ ಅಥವಾ ಒಳ ಉಡುಪಿನ ಜಾಹೀರಾತೋ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.

ಮಂಗಳಸೂತ್ರ ಪ್ರಚಾರಕ್ಕೆ ಅರೆ ನಗ್ನ ಫೋಟೋ: ವಿನ್ಯಾಸಕಗೆ ಹಿಡಿಶಾಪ!

ಈ ಬೆನ್ನಲ್ಲೇ ಮಹಾರಾಷ್ಟ್ರದ (Maharashtra)  ಪಾಲ್‌ಘರ ಜಿಲ್ಲಾ  ಬಿಜೆಪಿ ಘಟಕದ ಕಾನೂನು ಸಲಹೆಗಾರರಾದ ಅಶುತೋಷ್‌ ದುಬೆ (Ashutosh Dube) ವಿನ್ಯಾಸಕಾರ ಸಬ್ಯಸಾಚಿ ಮುಖರ್ಜಿರಿಗೆ ಲೀಗಲ್ ನೋಟಿಸ್‌ ನೀಡಿದ್ದಾರೆ. "ಈ ಜಾಹೀರಾತು ಸಂಪೂರ್ಣ ಹಿಂದೂ ಸಮುದಾಯಕ್ಕೆ ಹಾಗೂ ಹಿಂದೂ ವಿವಾಹ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿದೆ. ಹಾಗಾಗಿ  15 ದಿನಗಳಲ್ಲಿ ಜಾಹೀರಾತನ್ನು ತೆಗೆದುಹಾಕುವಂತೆ ದುಬೆ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

 

 

"ಸಾಮಾಜಿಕ ಮಾಧ್ಯಮದಗಳಲ್ಲಿ ನಿಮ್ಮ ಪ್ರಚಾರದ  ಪೋಸ್ಟ್‌ರ್‌ಗಳಲ್ಲಿ ಮಾಡೆಲ್‌ಗಳು (Model) ಒಬ್ಬರೇ ಅಥವಾ ಇತರರೊಂದಿಗೆ ವಿವಿಧ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಾನು ಹೇಳುತ್ತೇನೆ. ಒಂದು ಚಿತ್ರದಲ್ಲಿ, ಮಹಿಳಾ ಮಾಡೆಲ್ ಕಪ್ಪು ಒಳ ಉಡುಪು ಮತ್ತು ಸಬ್ಯಸಾಚಿಯ ಮಂಗಳಸೂತ್ರವನ್ನು ಧರಿಸಿದ್ದು, ಶರ್ಟ್‌ಗಳಿಲ್ಲದ ಪುರುಷ ಮಾಡೆಲ್‌ನ ಮೇಲೆ ತಲೆಯಿಟ್ಟಿರುವುದು ಸರಿಯಲ್ಲ. ಇದು ಇಡೀ ಹಿಂದೂ ಸಮುದಾಯ ಮತ್ತು ಹಿಂದೂ ವಿವಾಹ ಪದ್ದತಿಗೆ ಧಕ್ಕೆ ಉಂಟುಮಾಡಿದೆ," ಎಂದು ದುಬೆ ನೋಟಿಸ್‌ ನೀಡಿದ್ದಾರೆ.

ದೀಪಾವಳಿ ಉಡುಗೆ 'Jashn-e-Riwaaz' ಎಂದಿದ್ದ ವಿವಾದಾತ್ಮಕ ಟ್ವೀಟ್‌ ಡಿಲೀಟ್‌ !

“ಮರಣವು ಅವರನ್ನು ಬೇರ್ಪಡಿಸುವವರೆಗೆ ವಧು-ವರರು ಜೀವನ ಪರ್ಯಂತ ಸಂಗಾತಿಗಳಾಗಿರುತ್ತಾರೆ ಎಂಬುದನ್ನು ಮಂಗಳಸೂತ್ರವು ಸಂಕೇತಿಸುತ್ತದೆ ಮತ್ತು ನೀವು “ಮಂಗಳಸೂತ್ರ”ವನ್ನು ಅಶ್ಲೀಲ ರೀತಿಯಲ್ಲಿ ಪ್ರದರ್ಶಿಸುತ್ತಿರುವುದು ಅತಿರೇಕದ ಮತ್ತು ಆಧಾರರಹಿತವಾಗಿದೆ" ಎಂದು ಬಿಜೆಪಿಯ ಕಾನೂನು ಸಲಹೆಗಾರ ನೋಟಿಸ್‌ನಲ್ಲಿ ಹೇಳಿದ್ದಾರೆ. ಹಾಗಾಗಿ ಈ ಜಾಹೀರಾತನ್ನು ಕೂಡಲೇ ಹಿಂಪಡೆದು ಜನರಲ್ಲಿ ಕ್ಷಮೆ ಕೇಳುವಂತೆ ದುಬೆ ಆಗ್ರಹಿಸಿದ್ದಾರೆ.

ಮಂಗಳಸೂತ್ರ ಪ್ರಚಾರಕ್ಕೆ ಅರೆ ನಗ್ನ ಫೋಟೋ 

ಸಬ್ಯಸಾಚಿಯವರ ಅಧಿಕೃತ ಇನ್ಸ್ಟಾಗ್ರಾಮ್ (Instagram) ಖಾತೆಯಿಂದ ಬ್ರ್ಯಾಂಡ್‌ನ ಹೊಸದಾಗಿ ವಿನ್ಯಾಸ ಮಾಡಿರುವ ಮಂಗಳಸೂತ್ರಗಳನ್ನು ಪ್ರದರ್ಶಿಸುವ ಮಾದರಿಗಳನ್ನು ಒಳಗೊಂಡ ಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಜಾಹೀರಾತಿನಲ್ಲಿ ಭಿನ್ನಲಿಂಗೀಯ ಮತ್ತು ಸಲಿಂಗ ದಂಪತಿಗಳು ರಾಯಲ್ ಬೆಂಗಾಲ್ ಮಂಗಳಸೂತ್ರವನ್ನು ಧರಿಸಿ ಚಿತ್ರಗಳಿಗೆ ಪೋಸ್ ನೀಡುತ್ತಿದ್ದರು. ಇದು ವಿನ್ಯಾಸಕರ ಹೊಸ ಆಭರಣ ಸಂಗ್ರಹದ ಭಾಗವಾಗಿತ್ತು. ಈ ಫೋಟೋಗಳು ಒಳ ಉಡುಪುಗಳನ್ನು ಮಾತ್ರ ಧರಿಸಿರುವ ಮಾಡೆಲ್‌ಗಳು ಮಂಗಳಸೂತ್ರವನ್ನು ಧರಿಸಿ ಪೋಸ್ (Pose) ನೀಡಿರುವ ಚಿತ್ರಗಳನ್ನು ಸಹ ಒಳಗೊಂಡಿದ್ದವು.

ಎಚ್ಚರಿಕೆ ನಂತ್ರ ಕ್ಷಮೆ ಕೇಳಿ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್!

ಇತ್ತೀಚೆಗೆ ಸಿಯೆಟ್ ಲಿಮಿಟೆಡ್‌ನ ಜಾಹೀರಾತಿನಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಬೀದಿಗಳಲ್ಲಿ ಪಟಾಕಿ ಸಿಡಿಸದಂತೆ ಜನರಿಗೆ ಸಲಹೆ ನೀಡುತ್ತಿರುವುದನ್ನು ಕರ್ನಾಟಕ ಭಾರತೀಯ ಜನತಾ ಪಕ್ಷದ  ಸಂಸದ ಅನಂತಕುಮಾರ್ ಹೆಗಡೆಯ ಟೀಕಿಸಿದ್ದರು. ಜತಗೆ ದೀಪಾವಳಿ ಉಡುಗೆಗಳನ್ನು  'ಜಶ್ನ್-ಎ-ರಿವಾಜ್' ಎಂದಿದ್ದ ಫ್ಯಾಬಿಂಡಿಯಾದ ಜಾಹೀರಾತು ಕೂಡ ವಿವಾದ ಸೃಷ್ಟಿ ಮಾಡಿತ್ತು. ಇದು ಭಾರೀ ವಿವಾದ ಸೃಷ್ಟಿಸಿತ್ತು.

ಕರ್ವಾ ಚೌತ್‌  ಹಿನ್ನೆಲೆ ಡಾಬರ್‌ ಇಂಡಿಯಾ (Dabur India) ಬಿಡುಗಡೆ ಮಾಡಿದ್ದ ಜಾಹೀರಾತು (Advertisement) ಸಲಿಂಗ (same sex couple)  ಸಂಬಂಧಕ್ಕೆ ಪುಷ್ಠಿ ನೀಡುವಂತೆ ಇದೆ ಎಂಬ ಮಾತು ಕೇಳಿಬಂದಿತ್ತು. ನಂತರ ಕ್ಷಮೆ ಕೇಳಿದ್ದ ಡಾಬರ್‌ ಇಂಡಿಯಾ ಲಿಮಿಟೆಡ್‌ ಸಲಿಂಗಿ ಜೋಡಿಯು ಕರ್ವಾ ಚೌತ್ ನಡೆಸುವ ವಿಡಿಯೋವನ್ನು ಹಿಂದಕ್ಕೆ ಪಡೆದಿತ್ತು

Follow Us:
Download App:
  • android
  • ios