* ಕರ್ವಾ ಚೌತ್ ಜಾಹೀರಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಪ್ರತಿಕ್ರಿಯೆ* ಸಲಿಂಗ ಸಂಬಂಧವನ್ನು ಪ್ರಚುರಪಡಿಸುವ ಜಾಹೀರಾತಾ?* ಮಧ್ಯಪ್ರದೇಶದ ಸಚಿವರ ಎಚ್ಚರಿಕೆ ನಂತರ ಜಾಹೀರಾತು ಹಿಂಪಡೆದ ಸಂಸ್ಥೆ* ಕ್ಷಮೆ ಕೇಳಿ ಜಾಹೀರಾತು ಹಿಂಪಡೆದ ಡಾಬರ್

ಭೋಪಾಲ್‌ (ಅ.27) ಕರ್ವಾ ಚೌತ್‌ (Karwa Chauth) ಹಿನ್ನೆಲೆ ಡಾಬರ್‌ ಇಂಡಿಯಾ (Dabur India) ಬಿಡುಗಡೆ ಮಾಡಿದ್ದ ಜಾಹೀರಾತು (Advertisement) ಸಲಿಂಗ (same sex couple) ಸಂಬಂಧಕ್ಕೆ ಪುಷ್ಠಿ ನೀಡುವಂತೆ ಇದೆ ಎಂಬ ಮಾತು ಕೇಳಿಬಂದಿತ್ತು. ಅಂತಿಮವಾಗಿ ಸಂಸ್ಥೆ ಕ್ಷಮೆ ಕೇಳಿ ಜಾಹೀರಾತನ್ನು ಹಿಂದಕ್ಕೆ ಪಡೆದಿದೆ.

ಮಧ್ಯಪ್ರದೇಶದ ಸಚಿವರು ಸಂಸ್ಥೆ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಈ ಜಾಹೀರಾತಿನ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದ್ದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ, (Madhya Pradesh Home Minister Narottam Mishra) ಕೂಡಲೇ ಈ ಜಾಹೀರಾತನ್ನು ಡಾಬರ್‌ ಇಂಡಿಯಾ ಲಿಮಿಟೆಡ್‌ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. 

ಕ್ಷಮೆ ಕೇಳಿರುವ ಡಾಬರ್‌ ಇಂಡಿಯಾ ಲಿಮಿಟೆಡ್‌ ಸಲಿಂಗಿ ಜೋಡಿಯು ಕರ್ವಾ ಚೌತ್ ನಡೆಸುವ ವಿಡಿಯೋವನ್ನು ಹಿಂದಕ್ಕೆ ಪಡೆದಿದೆ. ಉದ್ದೇಶಪೂರ್ವಕವಲ್ಲದೇ ಜನರ ಭಾವನೆಗಳಿಗೆ ನೋವುಂಟು ಮಾಡಿದ ಕಾರಣಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ.

ವಿಸ್ಕಿ ಪ್ರಚಾರ ಮಾಡಿದ ನಟಿ.. ಇದೆಲ್ಲ ಬೇಕಿತ್ತಾ?

ಇಬ್ಬರು ಮಹಿಳೆಯರು ತಮ್ಮ ಮೊದಲ ಕರ್ವಾ ಚೌತ್ ಸಂಭ್ರಮಕ್ಕೆ ಸಿದ್ಧರಾಗುತ್ತಿರುತ್ತಾರೆ. ಮನೆಯ ಹಿರಿಯ ಮಹಿಳೆಯೊಬ್ಬರು ಅವರಿಗೆ ಹೊಸ ಬಟ್ಟೆಗಳನ್ನು ತಂದು ನೀಡುತ್ತಾರೆ. ಕರ್ವಾ ಚೌತ್ ಕಾರಣಕ್ಕೆ ಉಪವಾಸ ವ್ರತ ಮಾಡುತ್ತಿರುವುದನ್ನು ಇಬ್ಬರು ಮಹಿಳೆಯರು ತಿಳಿಸುತ್ತಾರೆ.

ಆದರೆ ನಂತರ ಈ ಇಬ್ಬರು ಮಹಿಳೆಯರನ್ನು ಸಂಗಾತಿಗಳು ಎಂಬಂತೆ ಬಿಂಬಿಸಿರುವುದು ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ಹರಿದು ಬಂದಿವೆ. ಇದೊಂದು ಸಲಿಂಗಿಗಳ ಸ್ನೇಹಿ ಜಾಹೀರಾತು ಎಂದು ಕೆಲವರು ಬಣ್ಣಿಸಿದರೆ.. ಈ ರೀತಿಯಲ್ಲಿ ಸಲಿಂಗ ಸಂಬಂಧಕ್ಕೆ ಮಹತ್ವ ನೀಡುವ ಅಗತ್ಯ ಇತ್ತಾ ಎಂದು ಪ್ರಶ್ನೆ ಮಾಡಿದ್ದರು.

ಡಾಬರ್ ಸಂಸ್ಥೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಕೆಲವರು ವಾದ ಮುಂದಿಟ್ಟಿದ್ದರೆ ಸಲಿಂಗ ಸಂಬಂಧಕ್ಕೆ ಈಗಾಗಲೇ ಕಾನೂನಿನ ಮಾನ್ಯತೆ ಇದೆಯಲ್ಲ ಎಂದು ಹೇಳಿದವರು ಇದ್ದರು. ನೀವು ಬಣ್ಣದ ಆಧಾರದಲ್ಲಿ ಸೌಂದರ್ಯ ಅಳೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಮಿಶ್ರ ಪ್ರತಿಕ್ರಿಯೆ ಬಂದಿತ್ತು.

ಏನಿದು ಕರ್ವಾ ಚೌತ್; ಪತಿ-ಪತ್ನಿಯರ ನಡುವಿನ ಬಾಂಧವ್ಯ ಹೆಚ್ಚಲು ಈ ಆಚರಣೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ವಿಶೇಷ ಮಾನ್ಯತೆ ಇದ್ದು ಉಪವಾಸ ಮಾಡಿ ಪತಿಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. 

Scroll to load tweet…