'ನಿಮಿ'ಗೆ ಹಾಡು ಡಾನ್ಸ್ ಮಾತ್ರ ಬರುತ್ತೆ: ವಿತ್ತ ಸಚಿವರ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಆಕ್ಷೇಪಾರ್ಹ ಹೇಳಿಕೆ
ದೆಹಲಿಯ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ (JNU) ನಲ್ಲಿ ಓದಿದ ನಿಮಿಗೆ ಹಾಡಲು ಡಾನ್ಸ್ ಮಾಡಲು ಮಾತ್ರ ಬರುತ್ತದೆ ಎಂದು ಹೇಳುವ ಮೂಲಕ ಬಿಜೆಪಿಯವರೇ ಆದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ದೆಹಲಿಯ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ (JNU) ನಲ್ಲಿ ಓದಿದ ನಿಮಿಗೆ ಹಾಡಲು ಡಾನ್ಸ್ ಮಾಡಲು ಮಾತ್ರ ಬರುತ್ತದೆ ಎಂದು ಹೇಳುವ ಮೂಲಕ ಬಿಜೆಪಿಯವರೇ ಆದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ನಿನ್ನೆ ಕೇಂದ್ರ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು 2024ರ ಕೇಂದ್ರ ಬಜೆಟ್ ಮಂಡನೆ ಮಾಡಿದರು. ಬಜೆಟ್ ಮಂಡನೆಯಾದಾಗಲೆಲ್ಲಾ, ಬಜೆಟ್ ಬಗ್ಗೆ ವಿರೋಧ ಪರ ಅಭಿಪ್ರಾಯ ವ್ಯಕ್ತವಾಗುವುದು ಸಾಮಾನ್ಯ ಅದರಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟ್ ಬಗ್ಗೆ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಜಗದೀಶ್ ಶೆಟ್ಟಿ ಎಂಬುವವರು ಟ್ವಿಟ್ಟರ್‌ನಲ್ಲಿ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಹೀಗೆ ಹೇಳಿದ್ದರು. ಮೋದಿ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಿಂದ ಬಿಜೆಪಿಯ ವೋಟರ್‌ಗಳು, ಸಂಬಳ ಪಡೆಯುವ ವೃತ್ತಿಪರರು, ಮಧ್ಯಮ ವರ್ಗದ ಜನ ಹಾಗೂ ನಗರ ಪ್ರದೇಶದ ವೋಟರ್‌ಗಳಿಗೆ ನಿರಾಸೆ ಮಾಡಿದೆ. ಅನುಭವ ಹಾಗೂ ನಿರೀಕ್ಷೆಯಂತೆ, ಈ ಸರ್ಕಾರವು ಆರ್ಥಿಕತೆಯ ಬಗ್ಗೆ ಆದ್ಯತೆಗಳು ಅಥವಾ ನಿರ್ದೇಶನಗಳ ಪರಿಕಲ್ಪನೆಯನ್ನು ಹೊಂದಿಲ್ಲ, ಕಡಿಮೆ ಹೇಳಿದರೆ ಉತ್ತಮ, ಬಿಜೆಪಿಯ ಬಗ್ಗೆ ಜನರಲ್ಲಿ ಕೋಪ, ಅಸಹ್ಯ ಮತ್ತು ಅಸಮಾಧಾನ ಬೆಳೆಯುತ್ತಿದೆ ಎಂದು ಬರೆದ ಅವರು ಈ ಟ್ವಿಟ್‌ನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಸಚಿವಾಲಯ ಹಾಗೂ ಬಿಜೆಪಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು.
PM Modi Policies : ಮೋದಿ ನೀತಿಗಳ ಬಗ್ಗೆ ನನ್ನ ವಿರೋಧವಿದೆ : ಡಾ.ಸುಬ್ರಹ್ಮಣಿಯನ್ ಸ್ವಾಮಿ
ಇದಕ್ಕೆ ಪ್ರತಿಕ್ರಿಯಿಸಿದ ತಮ್ಮ ಮಾತುಗಳಿಂದಲೇ ಸುದ್ದಿಯಲ್ಲಿರುವ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಹಲವು ಭಾರಿ ಟೀಕಿಸಿರುವ ಬಿಜೆಪಿ ನಾಯಕ, ಸುಬ್ರಮಣಿಯನ್ ಸ್ವಾಮಿ ಈಗ ತಮ್ಮ ಟ್ವಿಟ್‌ನಿಂದ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಜಗದೀಶ್ ಶೆಟ್ಟಿ ಎಂಬುವವರ ಟ್ವಿಟ್‌ಗೆ ಪ್ರತಿಕ್ರಿಯಿಸಿದ ಅವರು, ಖಂಡಿತವಾಗಿಯೂ ಹಣಕಾಸು ಸಚಿವರನ್ನು ದೂರುವುದು ಕಷ್ಟ, ಏಕೆಂದರೆ ಈ ಬಜೆಟ್‌ನ್ನು ಪ್ರಧಾನಮಂತ್ರಿ ಸಚಿವಾಲಯದಿಂದ ಮಾಡಲಾಗಿದೆ. ಆದರೆ ಮೂರ್ಖರು ಅದನ್ನು ಸಹಿಗಾಗಿ 'ನಿಮಿ'ಗೆ ಕಳುಹಿಸಿದ್ದಾರೆ. ಅವರು ಜೆಎನ್‌ಯುವಿನ ಹಳೆ ವಿದ್ಯಾರ್ಥಿ, ಅದರ್ಥ ಆಕೆಗೆ ಡಾನ್ಸ್ ಮಾಡಲು ಹಾಗೂ ಹಾಡು ಹಾಡಲು ಮಾತ್ರ ಗೊತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೀಗೆ ಸ್ವಪಕ್ಷೀಯರನ್ನೇ ಟೀಕಿಸುವುದು ಇದೇ ಮೊದಲಲ್ಲ, ನೇರ ಮಾತುಗಳಿಗೆ ಹೆಸರಾಗಿರುವ ಸುಬ್ರಮಣಿಯನ್ ಸ್ವಾಮಿ ಇದೇ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿಯೂ ಸ್ವಾಮಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಟು ಟೀಕೆ ಮಾಡಿದ್ದರು. ಭಾರತೀಯ ಆರ್ಥಿಕತೆಯ ಗಮನಾರ್ಹ ಪುನಶ್ಚೇತನವಾಗಿದೆ ಎಂಬ ಅವರ ಹೇಳಿಕೆಯನ್ನು ಸ್ವಾಮಿ ಟೀಕಿಸಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಧೋನಿಗೆ ಸುಬ್ರಮಣಿಯನ್ ಸ್ವಾಮಿ ಸಲಹೆ!
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಛೇಂಬರ್ಸ್ ಆಫ್ ಕಾಮರ್ಸ್ ಹಾಗೂ ಇಂಡಸಸ್ಟ್ರಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮೋದಿ ಸರ್ಕಾರದ ಸಾಧನೆಗಳನ್ನು ಹೊಗಳುತ್ತಾ ಭಾರತದ ಆರ್ಥಿಕತೆಯಲ್ಲಿ ಗಮನಾರ್ಹ ಬದಲಾವಣೆ ಆಗಿದೆ ವಿಶೇಷವಾಗಿ ಬ್ಯಾಂಕಿಂಗ್ ವಿಭಾಗದಲ್ಲಿ , 2014ರಿಂದ ಇದು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ಗೆ ಅಧ್ಯಯನಕ್ಕೆ ಯೋಗ್ಯವಾದ ವಿಚಾರವಾಗಿದೆ ಎಂದು ಹೇಳಿದ್ದರು.